K.S Eshwarappa: ರಾಜೀನಾಮೆ ಗಡಿಬಿಡಿಯಲ್ಲೇ 29 ಅಧಿಕಾರಿಗಳ ವರ್ಗಾವಣೆ; ಈಶ್ವರಪ್ಪ ಮೇಲೆ ಮತ್ತೊಂದು ಆರೋಪ

ಈಶ್ವರಪ್ಪ ತಾವು ಹುದ್ದೆಗೆ ರಾಜೀನಾಮೆ ನೀಡೋದು ಅನಿವಾರ್ಯವಾಗಲಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಹಣ ಪಡೆದು 29 ಪಿ ಡಿ ಓ ಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ವರ್ಗಾವಣೆ ಹಿಂದೆ ಲಕ್ಷಾಂತರ ರೂಪಾಯಿ ಲಂಚದ ಹಣ ಕೆಲಸ ಮಾಡಿದೆ ಎಂದು ಈಗ ಕಾಂಗ್ರೆಸ್ ಆರೋಪಿಸಿದೆ .

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಮೈಸೂರು (ಏ.15): ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್​ ಈಶ್ವರಪ್ಪ (K.S Eshwarappa) ಗುತ್ತಿಗೆದಾರ ಸಂತೋಷ್  ಪಾಟೀಲ್ (Santhosh Patil) ಆತ್ಮಹತ್ಯೆ ಪ್ರಕರಣದಲ್ಲಿ (Suicide Case)  ಸಿಲುಕಿದ್ದು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಶ್ವರಪ್ಪ ಗುತ್ತಿಗೆದಾರರಿಂದ ಶೇಕಡಾ 40 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ಹಣ ಹಿಂಪಡೆಯಲಾಗದೇ ಸಂತೋಷ್ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮಧ್ಯೆ ಈ ಆತ್ಮಹತ್ಯೆ ಮತ್ತು ರಾಜೀನಾಮೆ (Resignation) ನಡುವೆಯೂ ಈಶ್ವರಪ್ಪ  ಭಾರಿ ವರ್ಗಾವಣೆ (Transfer) ನಡೆಸಿದ್ದಾರೆ.  ಮೈಸೂರು ಜಿಲ್ಲೆಯ 29 ಪಿಡಿಓ  ಅಧಿಕಾರಿಗಳನ್ನು (PDO Officer) ವರ್ಗಾವಣೆ ಮಾಡಿದ್ದಾರೆ.

ಪ್ರವಾಸದಲ್ಲಿದ್ದೇ  ಅಧಿಕಾರಿಗಳ ವರ್ಗಾವಣೆ

ಕಳೆದ ಎರಡು ಮೂರು ದಿನಗಳಿಂದ ಸಚಿವ ಈಶ್ವರಪ್ಪ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಸಂಕಷ್ಟದ ಹೊತ್ತಿನಲ್ಲೂ ಸಚಿವ ಈಶ್ವರಪ್ಪ ತಮ್ಮ ಚಾಕಚಕ್ಯತೆ ಮೆರೆದಿದ್ದು ಮೈಸೂರು ಜಿಲ್ಲೆಯಾದ್ಯಂತ ಪಿಡಿಓಗಳ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಏಪ್ರಿಲ್ 12 ರಂದು ಸಚಿವ ಈಶ್ವರಪ್ಪ ಮೈಸೂರು ಪ್ರವಾಸದಲ್ಲಿದ್ದರು. ಈ ವೇಳೆಯೇ ಸಚಿವ ಈಶ್ವರಪ್ಪ, ಜಿಲ್ಲೆಯ 29 ಪಿಡಿಓ ಗಳನ್ನು ವರ್ಗಾವಣೆ ಮಾಡಿದ್ದಾರೆ. ಏಪ್ರಿಲ್ 12 ರಂದು ಈಶ್ವರಪ್ಪನವರು ವಿಭಾಗೀಯ ಸಭೆಯಲ್ಲಿ ಪಾಲ್ಗೊಂಡಿದ್ದು ಅಂದೇ ಉಡುಪಿಯಲ್ಲಿ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜೀನಾಮೆ ಒತ್ತಡ ಹೆಚ್ಚುತ್ತಿರುವಾಗ್ಲೆ ನಿರ್ಧಾರ

ಸಂತೋಷ್ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು. ಈ ಒತ್ತಡದ ನಡುವೆಯೇ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಈಶ್ವರಪ್ಪ ಎಂಬ ಸಂಗತಿ ಈಗ ಬೆಳಕಿಗೆ ಬಂದಿದ್ದು ವರ್ಗಾವಣೆಯ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ

9 ಪಿಡಿಓಗಳ ವರ್ಗಾವಣೆ ಆದೇಶದ ಪ್ರತಿ ವೈರಲ್​

ಏ.12ರಂದು 29 ಪಿಡಿಓಗಳ ವರ್ಗಾವಣೆ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ಸಚಿವ ಈಶ್ವರಪ್ಪ ತಾವು ಹುದ್ದೆಗೆ ರಾಜೀನಾಮೆ ನೀಡೋದು ಅನಿವಾರ್ಯವಾಗಲಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಹಣ ಪಡೆದು 29 ಪಿ ಡಿ ಓ ಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ವರ್ಗಾವಣೆ ಹಿಂದೆ ಲಕ್ಷಾಂತರ ರೂಪಾಯಿ ಲಂಚದ ಹಣ ಕೆಲಸ ಮಾಡಿದೆ ಎಂದು ಈಗ ಕಾಂಗ್ರೆಸ್ ಆರೋಪಿಸಿದೆ . ಮಾತ್ರವಲ್ಲ ಸಂತೋಷ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ವೇಳೆಯಲ್ಲೇ ಈಶ್ವರಪ್ಪ ಇಷ್ಟೊಂದು ವರ್ಗಾವಣೆ ಮಾಡಿರೋದು ಅವರ ಲಂಚಗುಳಿತನಕ್ಕೆ ಸಾಕ್ಷಿ ಒದಗಿಸುತ್ತಿದೆ ಎಂದು ಆರೋಪಿಸಿದೆ.

ವರ್ಗಾವಣೆ ಹಿಂದೆ ಲಕ್ಷಾಂತರ ಹಣ ಪಡೆದಿರುವ ಆರೋಪ

ರಾಜೀನಾಮೆ ಕೂಗು ಹೆಚ್ಚುತ್ತಿದ್ದಂತೆ ಕೆ.ಎಸ್ ಈಶ್ವರಪ್ಪ ತರಾತುರಿಯಲ್ಲಿ ವರ್ಗಾವಣೆ ಆದೇಶ ಮಾಡಿದ್ದು, 29 ಪಿಡಿಓ ಅಧಿಕಾರಿಗಳ ವರ್ಗಾವಣೆಯಲ್ಲೂ ಅಕ್ರಮ ನಡೆದಿದೆ ಎನ್ನಲಾಗ್ತಿದೆ.  ವರ್ಗಾವಣೆಗೆಂದು ಲಕ್ಷಾಂತರ ಹಣ ಪಡೆದಿರೋ ಆರೋಪ ಕೇಳಿ ಬಂದಿದೆ. ಕೂಡಲೇ ವರ್ಗಾವಣೆ ಆದೇಶ ತಡೆಹಿಡಿಯುವಂತೆ ಕಾಂಗ್ರೆಸ್  ನಾಯಕರು ಒತ್ತಾಯ ಮಾಡ್ತಿದ್ದಾರೆ.

ಇದನ್ನೂ ಓದಿ:  CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ

ಮಹಿಳಾ ಕಾರ್ಯಕರ್ತೆಯರ ಕಣ್ಣೀರು

 ಶಿವಮೊಗ್ಗ ನಗರ ಬಿಜೆಪಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರು ಕಣ್ಣೀರು ಹಾಕಿ, ನೀವು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದಾಗ ಈಶ್ವರಪ್ಪ ಸಮಾಧಾನಪಡಿಸಿದರು. ನನ್ನ ಬಗ್ಗೆ ತಿಳಿದಿರುವ ಎಲ್ಲರೂ ಸಹ ನನಗೆ ವಿಶ್ವಾಸ ತುಂಬುತ್ತಿದ್ದಾರೆ. ನೀವು ಗೆದ್ದು ಬರುತ್ತೀರಿ ಎನ್ನುತ್ತಿದ್ದಾರೆ. ನಾನು ಹೀಗೆ ನನಗೆ ಅಗ್ನಿಪರೀಕ್ಷೆ ಬರುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದರೆ, ಜನರೇ ಬಂದು ನನ್ನನ್ನು ಮಾತನಾಡಿಸುತ್ತಿರುವುದು ಧೈರ್ಯ ತಂದಿದೆ' ಎಂದು ಅವರು ಹೇಳಿದರು.  'ನನ್ನ ಅಕ್ಕ-ತಂಗಿಯರಾದ ನೀವು ಕಣ್ಣೀರು ಹಾಕಿ ಕಳುಹಿಸುವುದು ಬೇಡ. ನೀವು ಕಣ್ಣೀರು ಹಾಕಿದ್ರೆ ನಾನು ಬೆಂಗಳೂರಿಗೆ ಹೋಗಲ್ಲ. ನೀವೆಲ್ಲ ನನಗೆ ಒಳ್ಳೆಯದಾಗಲಿ ಎಂದು ಹಾರೈಸಿ ಕಳುಹಿಸಿ ಕೊಡಿ ಎಂದು ಈಶ್ವರಪ್ಪ ಹೇಳಿದ್ರು.

Published by:Pavana HS
First published: