• Home
  • »
  • News
  • »
  • state
  • »
  • ಸಿದ್ದರಾಮಯ್ಯಗೆ ಗೋ ಶಾಪ ತಟ್ಟಲಿದೆ; ಸಚಿವ ಕೆ ಎಸ್​ ಈಶ್ವರಪ್ಪ

ಸಿದ್ದರಾಮಯ್ಯಗೆ ಗೋ ಶಾಪ ತಟ್ಟಲಿದೆ; ಸಚಿವ ಕೆ ಎಸ್​ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ಗೋವು ಮತ್ತು ಹಿಂದುತ್ವದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರೆ, ಮುಂದೆ ರಾಜ್ಯದ ಎಲ್ಲೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಗೆಲ್ಲೋದಿಲ್ಲ

  • Share this:

ಕೊಡಗು (ಜ. 11) :  ಗೋವುಗಳ ಬಗ್ಗೆ ಮತ್ತು ಹಿಂದುತ್ವದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತೀರಾ ಹಗುರವಾಗಿ ಮಾತನಾಡುತ್ತಾರೆ. ಹೀಗಾಗಿಯೇ ಗೋ ಶಾಪದಿಂದಲೇ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕುಟುಕಿದ್ದಾರೆ. ಮಡಿಕೇರಿಯಲ್ಲಿ ಬಿಜೆಪಿಯ  ಜನಸೇವಕ್ ಸಮಾವೇಶ ಸಂದರ್ಭ ಮಾತನಾಡಿದ ಅವರು,  ಗೋಶಾಪದಿಂದಲೇ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅವರು ಸೋತರು. ಆಕಸ್ಮಿಕವಾಗಿ ಬಾದಾಮಿ ಕ್ಷೇತ್ರದಿಂದ ಸಣ್ಣ ಅಂತರದಿಂದ ಗೆದ್ದರು. ಇದೇ ರೀತಿ ಗೋವು ಮತ್ತು ಹಿಂದುತ್ವದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರೆ, ಮುಂದೆ ರಾಜ್ಯದ ಎಲ್ಲೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಗೆಲ್ಲೋದಿಲ್ಲ ಎಂದು ಎಚ್ಚರಿಸಿದರು. ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇದನ್ನು ನಿರ್ಧರಿಸುವುದು ಬಿಜೆಪಿ ಹೈ ಕಮಾಂಡ್​ ಹೊರತು ಸಿದ್ದರಾಮಯ್ಯ ಅವರಲ್ಲ.  ರಾಜ್ಯದ  ಜನತೆ, ಹೈಕಮಾಂಡ್ ಮತ್ತು ಯಡಿಯೂರಪ್ಪ ಇದ್ದಾರೆ ಎಂದು ತಿರುಗೇಟು ನೀಡಿದರು. 


 ಶಾಸಕ ಬಸವರಾಜ ಪಾಟೀಲ ಯತ್ನಾಳ್ ಕೂಡ ಸಿಎಂ ಬದಲಾಗುತ್ತಾರೆ ಎನ್ನುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರ ಹೆಸರನ್ನು ಕೇಂದ್ರ ಶಿಸ್ತು ಸಮಿತಿಗೆ ಕಳುಹಿಸಲಾಗಿದೆ. ಅಷ್ಟಕ್ಕೂ ಅವರ ಮಾತಿಗೆಲ್ಲ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. 


ಸಿದ್ದರಾಮಯ್ಯ ಸುಳ್ಳುಗಾರ:


ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ನನ್ನನ್ನು ಯಾರು ಕರೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ನಾನು,  ಇಬ್ಬರು ಸ್ವಾಮೀಜಿಗಳು ಹೋಗಿ ಸಿದ್ದರಾಮಯ್ಯ ಅವರನ್ನು ಆಹ್ವಾಸಿದ್ರೆದೇವೆ. . ಆ ವೇಳೆ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಈಗ ನಾನು ಬರಲಾಗುವುದಿಲ್ಲ ಎಂದಿದ್ದರು. ಈಗ  ನನ್ನನ್ನು ಯಾರು ಕರೆದೇ ಇಲ್ಲ ಎನ್ನುತ್ತಿದ್ದಾರೆ. ಜೊತೆಗೆ ಹೋರಾಟದ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ ಎಂದು ಆರೋಪಿಸುತ್ತಿದ್ದಾರೆ.   ಇಂತಹ ಸುಳ್ಳು ಹೇಳುವ ಸಿದ್ದರಾಮಯ್ಯಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದರು.


ನನ್ನ ನೇತೃತ್ವದಲ್ಲೇ ಎಲ್ಲ ಆಗಬೇಕು, ನಾನು ಸಿಎಂ ಆಗಿದ್ದರೆ ಮಾತ್ರವೇ ಸರ್ಕಾರ ಇರಬೇಕೆಂಬುದು ಸಿದ್ದರಾಮಯ್ಯ ಧೋರಣೆ. ಈ ಧೋರಣೆಯನ್ನು ಅವರು ಬದಲಾಯಿಸಿಕೊಳ್ಳಬೇಕು . ಅವರನ್ನು ಕರೆಯೋದಕ್ಕೆ ಅದೇನು ನಮ್ಮ ಮನೆಯ ಮದುವೆಯೇ.  ಮದುವೆಯಾಗಿದ್ದರೆ ಕರೆಯಬಹುದಿತ್ತು. ಆದರೆ, ಇದು ಸಮುದಾಯ ಎಲ್ಲರೂ ಅವರಾಗಿಯೇ ಭಾಗಿಯಾಗಬೇಕು ಎಂದು ಕುಟುಕಿದರು. 

Published by:Seema R
First published: