ನಿಂಬೆ ಹಣ್ಣಿನ ಸಮೇತ ರೇವಣ್ಣನನ್ನೇ ನುಂಗ್ತೇನೆ: ಈಶ್ವರಪ್ಪ ತಿರುಗೇಟು

ಬಿಜೆಪಿಗೆ ಅವಕಾಶ ಕೊಟ್ಟರೆ ಎಲ್ಲವನ್ನೂ ನುಂಗಿ ಹಾಕುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಹೇಳಿದ್ದಾರೆ.

news18
Updated:April 13, 2019, 9:38 PM IST
ನಿಂಬೆ ಹಣ್ಣಿನ ಸಮೇತ ರೇವಣ್ಣನನ್ನೇ ನುಂಗ್ತೇನೆ: ಈಶ್ವರಪ್ಪ ತಿರುಗೇಟು
ಕೆಎಸ್ ಈಶ್ವರಪ್ಪ
news18
Updated: April 13, 2019, 9:38 PM IST
ಕಲಬುರ್ಗಿ(ಏ. 13): ಈಶ್ವರಪ್ಪಗೂ ಒಂದು ನಿಂಬೆ ಹಣ್ಣು ಕೊಡೋದಾಗಿ ಸಚಿವ ಹೆಚ್.ಡಿ. ರೇವಣ್ಣ ನೀಡಿರುವ ಹೇಳಿಕೆಗೆ ಮಾಜಿ ಡಿಸಿಎಂ ತಿರುಗೇಟು ಕೊಟ್ಟಿದ್ದಾರೆ. ನಿಂಬೆ ಹಣ್ಣು ಕೊಟ್ಟರೆ ರೇವಣ್ಣನೇ ನುಂಗಿ ಹಾಕುತ್ತೇನೆಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ಧಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, “ರೇವಣ್ಣ ನನಗೆ ನಿಂಬೆಹಣ್ಣು ಕೊಡೋದಾದ್ರೆ ಕೊಡಲಿ. ನಮ್ಮನೇಲಿ ನಾನ್ ವೆಜ್ ಚೆನ್ನಾಗಿ ಮಾಡ್ತಾರೆ. ನಾನ್ ವೆಜ್​ಗೆ ನಿಂಬೆ ಹಣ್ಣು ಸೇರಿಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ನಿಂಬೆಹಣ್ಣು ಸಮೇತ ರೇವಣ್ಣನನ್ನೇ ನುಂಗಿಬಿಡ್ತೇನೆ. ಜೆಡಿಎಸ್​ನವರಿಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ. ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ” ಎಂದು ಈಶ್ವರಪ್ಪ ಅಬ್ಬರಿಸಿದ್ದಾರೆ.

ಇದನ್ನೂ ಓದಿ: ನಿಖಿಲ್​​​​ ಗೆದ್ದೇ ಗೆಲ್ತಾರೆ: ಸುಮಲತಾರಿಗೆ ಭಯವಾದ್ರೆ ಮೋದಿ ಭದ್ರತೆ ಕಲ್ಪಿಸಲಿ; ಸಿಎಂ ಕುಮಾರಸ್ವಾಮಿ ವ್ಯಂಗ್ಯ!

ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣಗೆ ಸುಳ್ಳು ಹೇಳಿ ಅಭ್ಯಾಸವಾಗಿದೆ ಎಂದ ಈಶ್ವರಪ್ಪ, ಕಳೆದ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡೋದಾಗಿ ಹೇಳಿದ್ದರು. ಈಗ ಅವರ ಪುತ್ರ ರೇವಣ್ಣ ಕಾಂಗ್ರೆಸ್-ಜೆಡಿಎಸ್ 22 ಸ್ಥಾನ ಗೆಲ್ಲದಿದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸೋದಾಗಿ ಹೇಳ್ತಾರೆ. ದೇವೇಗೌಡರು ದೇಶ ಬಿಟ್ಟಿದ್ದಾರೆಯೇ? ರೇವಣ್ಣ ಕಥೆಯೂ ಅಷ್ಟೇ ಆಗುತ್ತದೆ ಎಂದು ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ ಖಚಿತ. ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಸಮ್ಮಿಶ್ರ ಸರ್ಕಾರ ನೆಗೆದುಬೀಳಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

(ವರದಿ: ಶಿವರಾಮ ಅಸುಂಡಿ)
Loading...

First published:April 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626