Praveen Murder: ಹೇಡಿಗಳ ರೀತಿ ಒಬ್ಬನೇ ಇದ್ದಾಗ ಪ್ರವೀಣ್ ಹತ್ಯೆ, ಮುಸ್ಲಿಂ ಹಿರಿಯರು ಗೂಂಡಾಗಳಿಗೆ ತಿಳಿಹೇಳಿ ಎಂದ ಈಶ್ವರಪ್ಪ

ಮಂಗಳೂರಿನಲ್ಲಿ ಮುಸ್ಲಿಂ ಗುಂಡಾಗಳಿಂದ ದುಷ್ಕೃತ್ಯ, ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ, ಹೇಡಿಗಳ ರೀತಿ ಒಬ್ಬನೇ ಇದ್ದಾಗ ಪ್ರವೀಣ್ ನೆಟ್ಟಾರು‌ ಹತ್ಯೆ ಮಾಡಿ ಓಡಿ ಹೋಗಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿ ಹೇಳಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಪ್ರವೀಣ್ ನೆಟ್ಟಾರು

ಪ್ರವೀಣ್ ನೆಟ್ಟಾರು

  • Share this:
ಚಿತ್ರದುರ್ಗ(ಜು.29): ಹೇಡಿಗಳ ರೀತಿ ಒಬ್ಬನೇ ಇದ್ದಾಗ ಪ್ರವೀಣ್ ನೆಟ್ಟಾರು‌ (Praveen Nettar) ಹತ್ಯೆ ಮಾಡಿರುವ ಹಂತಕರು ಓಡಿ ಹೋಗಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ (Muslim) ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿ ಹೇಳಬೇಕು. ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ ಆಗುತ್ತದೆ. ಆದರೇ ಹಿಂದೂ ಸಮಾಜ ಯಾವತ್ತೂ ಹಾಗೆ ಮಾಡಿಲ್ಲ, ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಿಂದೂ ಸಮಾಜ ದುರ್ಬಲ ಅಂತ ಅಲ್ಲ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ (Praveen Nettar Murder) ಪ್ರಕರಣ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

ಮಂಗಳೂರಿನಲ್ಲಿ ಮುಸ್ಲಿಂ ಗುಂಡಾಗಳಿಂದ ದುಷ್ಕೃತ್ಯ, ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ, ಹೇಡಿಗಳ ರೀತಿ ಒಬ್ಬನೇ ಇದ್ದಾಗ ಪ್ರವೀಣ್ ನೆಟ್ಟಾರು‌ ಹತ್ಯೆ ಮಾಡಿ ಓಡಿ ಹೋಗಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿ ಹೇಳಬೇಕು ಎಂದಿದ್ದಾರೆ.

ಇಡೀ ರಾಜ್ಯದ ಶಾಂತಿ, ವ್ಯವಸ್ಥೆ ಹಾಳು ಮಾಡ್ತಿದ್ದಾರೆ. ಈಗಾಗಲೇ ನಾನು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದೇನೆ‌. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆಗೆ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಕೊಲೆ ಮಾಡದಂತೆ ಯಾವ ರೀತಿ ಭಯ ಇರಬೇಕೆಂಬ ಚಿಂತನೆ ನಡೆದಿದೆ. ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಾಗಂತ, ಹಿಂದೂ ಸಮಾಜ ದುರ್ಬಲ ಅಂತ ಅಲ್ಲ ಎಂದು ಹೇಳಿದ್ದಾರೆ.

ನಿರಪರಾಧಿ ಹುಡುಗರ ಕೊಲೆ

ಇನ್ನೂ, ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಪರಾಧಿ ಹುಡುಗರ ಕೊಲೆ ಮಾಡಿದ್ದಾರೆ, ಇಡೀ ರಾಜ್ಯ ದೇಶ  ಗಮನಿಸುತ್ತಿದೆ ರಾಜ್ಯದ ಸಿಎಂ, ಪ್ರಧಾನಿ, ಅಮಿತ್ ಶಾ ಅವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಇದೇ ಕೊಲೆ ಕೊನೆ ಆಗಬೇಕು, ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು, ತುರ್ತಾಗಿ ಕಾನೂನು ರಚನೆ ಆಗಬೇಕು, ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಪತ್ತೆ ಹಚ್ಚಬೇಕು ಎಂದು ಕಿಡಿ ಕಾರಿದ್ದಾರೆ.

ಕೊಲೆಯ ವಿರುದ್ಧ ಆಕ್ರೋಶ

ಅಲ್ಲದೇ  ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕಾರ್ಯಕರ್ತರ ರಕ್ಷಣೆಯಲ್ಲಿ ಯಶಸ್ವಿ ಆಗಿಲ್ಲ. ನಾಯಕರು , ರಾಜ್ಯಕ್ಕೆ ನೋವಿದೆ. ಕೊಲೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆರಾಜ್ಯದ ಜನ, ಹಿಂದೂ ಸಮಾಜಕ್ಕೆ ಆಕ್ರೋಶವಿದೆ. ಕೆಲವರು ಬಿಜೆಪಿ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಎಂದಿದ್ದಾರೆ.

Praveen Nattaru Murder case Seven SDPI Activist detained mrq
ಶಂಕೆಯ ಹಿನ್ನಲೆಯಲ್ಲಿ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ತಡರಾತ್ರಿ ಕಾರ್ಯಕರ್ತರ ಮನೆಗೆ ಆಗಮಿಸಿದ ಪೊಲೀಸರು ಎಳು ಜನರನ್ನು ವಶಕ್ಕೆ ಪಡೆದಿದ್ದಾರೆ.


ರಕ್ತವನ್ನು ಬೆವರು ರೂಪದಲ್ಲಿ ಸುರಿಸಿ ಹಿರಿಯರು ಪಕ್ಷ ಕಟ್ಟಿದ್ದಾರೆ. ಪಕ್ಷದ ಮೇಲೆ ಆಕ್ರೋಶ ತೀರಿಸುವುದರಲ್ಲಿ ಅರ್ಥ ಇಲ್ಲ.  ಸಿಟ್ಟಿನ ಕೈಲಿ ನಮ್ಮತನ ಕೊಟ್ಟು ರಾಜೀನಾಮೆ ತಪ್ಪಾಗುತ್ತದೆ. ಸರ್ಕಾರದ ವಿರುದ್ಧ ರಾಜೀನಾಮೆ ಎಂದು ವಿಪಕ್ಷಗಳಿಗೆ ಅಸ್ತ್ರ ಪ್ರಯೋಗ ಕುರಿತು, ಅಧ್ಯಕ್ಷ ಕಟೀಲ್ ಬಳಿ ಮಾತಾಡಿದಾಗ ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: Mandya: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ; ಸ್ನೇಹಿತನ ಅತ್ತೆ ಮೇಲೆ ಕಣ್ಣು ಹಾಕಿದ ಗೆಳೆಯನ ಕಥೆ ಫಿನಿಶ್

ಡಿಕೆಶಿ, ಸಿದ್ಧರಾಮಯ್ಯ ಹೇಳಿಕೆ ಸರಿಯಲ್ಲ

ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ ಹಿಂದೂ ಸಮಾಜ ಯಾವತ್ತೂ ಹಾಗೇ ಮಾಡಿಲ್ಲ, ರಾಜೀನಾಮೆ ಇನ್ನೂ ಮೆಚುರಿಟಿ ಆಗಿಲ್ಲವೇನೋ ಅನ್ನಿಸುತ್ತದೆ. ಮೆಚುರಿಟಿ ಇಲ್ಲದ ಕೆಲವರು ರಾಜೀನಾಮೆಯಿಂದ ಹಾಗೆ ಮಾಡುತ್ತಾರೆ ಎಂದಿದ್ದಾರೆ. ತಿಹಾರ್ ಜೈಲಿಗೆ ಹೋಗಿಬಂದ ಭ್ರಷ್ಟ ಬಿಜೆಪಿಗೆ ಭ್ರಷ್ಟಾಚಾರ ಅಂತಾರೆ. ಜನೋತ್ಸವವನ್ನು ಭ್ರಷ್ಟೋತ್ಸವ ಅಂತ ಕರೆಯುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ರಾಜ್ಯಾದ್ಯಕ್ಷ, ಡಿಕೆ ಶಿವಕುಮಾರ್ ವಿರುದ್ದ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಈಶ್ವರಪ್ಪ, ಡಿಕೆಶಿ, ಸಿದ್ಧರಾಮಯ್ಯ ಹೇಳಿಕೆ ಸರಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಕಾರ ಇವರು ದೇವ ದೇವಿಯರೇ?

ಬಿಜೆಪಿ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿದ್ದರೆ ಹೇಳಿ, ಸೋನಿಯಾ ಗಾಂಧಿ ದೇವಿ, ರಾಹುಲ್ ಗಾಂಧಿ ದೇವಿಯೇ? ಕಾಂಗ್ರೆಸ್ ಪಕ್ಷದ ಪ್ರಕಾರ ಇವರು ದೇವ ದೇವಿಯರೇ?, ಇಡಿ ವಿಚಾರಣೆಗೆ ಸೋನಿಯಾ, ರಾಹುಲ್ ಕರೆಯಬಾರದೆ, ಡಿಕೆಶಿ ಇನ್ನೂ ಬೇಲ್ ನಲ್ಲಿದ್ದಾರೆ, ಯಾವಾಗ ಜೈಲಿಗೆ ಹೋಗುತ್ತಾರೊ ಗೊತ್ತಿಲ್ಲ, ಜಮೀರ್ ಅಹ್ಮದ್ ಅಂತ ಬ್ರೋಕರ್‌ನನ್ನು ಬಳಸಿಕೊಳ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಈ ಬಾರಿ ದಸರಾಗೆ ಆನೆಗಳು ಬರಲ್ವಾ? ಮಾವುತರ ನಿರ್ಧಾರವೇನು?

ಇನ್ನೂ ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಹೇಳಿಕೆ ಕುರಿತು, ಅವರ ನಾಯಕರು, ಬಾಯಿ ಮುಚ್ಚಿಕೊಂಡಿರಿ ಎಂದು ಜಮೀರ್ ಗೆ ಹೇಳಿದ್ದಾರೆ. ಡಿಕೆಶಿ, ಸಿದ್ಧರಾಮಯ್ಯ ಜಾತಿವಾದಿಗಳು, ಇಂಥವರಿಗೆ ರಾಜ್ಯದ ಜನ ಸಿಎಂ ಮಾಡುತ್ತಾರೆಯೇ? ಎಂದು ವ್ಯಗ್ಯವಾಡಿದ್ದಾರೆ.
Published by:Divya D
First published: