• Home
  • »
  • News
  • »
  • state
  • »
  • ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ, ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ: Minister KS Eshwarappa

ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ, ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ: Minister KS Eshwarappa

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ (National Flag) ನನ್ನ ತಾಯಿ ಸಮಾನ. ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದು, ವಿಧಾನಸಭೆ(Assembly)ಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಮುಂದೆ ಓದಿ ...
  • Share this:

ತಮ್ಮ ವಿವಾದಿತ ಹೇಳಿಕೆ (Controversy Statement)ಮತ್ತು ಕಾಂಗ್ರೆಸ್ ನಡೆಸುತ್ತಿರುವ ಧರಣಿ (Congress Protest) ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ (National Flag) ನನ್ನ ತಾಯಿ ಸಮಾನ. ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದು, ವಿಧಾನಸಭೆ(Assembly)ಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಜನ ಸಾಮಾನ್ಯರ ಕಷ್ಟ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ಸಮಸ್ಯೆ ಇಟ್ಟುಕೊಂಡು, ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರ ಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡಲ್ಲ. ಈ ವಿಚಾರವನ್ನು ನಾನು ಇಲ್ಲಿಯೇ ಕೈ ಬಿಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡರು.


ಸಿಂಧೂರ , ಬಳೆ ವಿಚಾರಕ್ಕೆ ಬಂದ್ರೆ ನಾಲಿಗೆ ಕತ್ತರಿಸುತ್ತೇವೆ ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಸ್ವಾಸ್ಥ್ಯ ಸಮಾಜ, ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡುವುದು ಸರ್ಕಾರದ ಕೆಲಸ. ನೆಮ್ಮದಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.


ಮುತಾಲಿಕ್ ವಿರುದ್ಧ ಕ್ರಮಕ್ಕೆ ಒತ್ತಾಯ


ಜಿಲ್ಲಾಧಿಕಾರಿಗಳ ಮೂಲಕ ಇದನ್ನು ಬಗ್ಗೆ ಹರಿಸಬೇಕಿತ್ತು ಮುತಾಲಿಕ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇವತ್ತು ಅವರು ಮಾತಾಡುತ್ತಾರೆ, ನಾಳೆ ಇನ್ನೊಬ್ಬರು ಮಾತಾಡುತ್ತಾರೆ. ಜನರು ನಿರ್ಭಯವಾಗಿ ಬದುಕುವುದಕ್ಕೆ ಭಯ ಪಡುತ್ತಾರೆ. ಸರ್ವ ಧರ್ಮಗಳ ನಾಡು ನಮ್ಮದು ಎಲ್ಲಾ ಇಲ್ಲಿ ಬದುಕುತ್ತಿದ್ದಾರೆ ಮುತಾಲಿಕ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದರು.


ಇದನ್ನೂ ಓದಿ:  Hijab Row: ಕುಂಕುಮ, ಬಳೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳುತ್ತೇವೆ ಹುಷಾರ್: Muthalik


ದೇಶದ ಸಮಸ್ಯೆ ಅರ್ಥ ಮಾಡಿಕೊಳ್ಳದೆ ಹೀಗೆ ಹೇಳಿಕೆ ನೀಡಬೇಡಿ. ನಾವೆಲ್ಲಾ ಒಂದಾಗಿ ಇರಬೇಕು ನೋವು ಉಂಟು ಮಾಡುವ ಕೆಲಸ , ಮಾತು ಆಗಬಾರದು. ಆಯಾಯಾ ಸಂಸ್ಕೃತಿ, ಸಂಪ್ರದಾಯಗಳಿಗೆ ಅಡ್ಡಿಪಡಿಸಬಾರದು. ಸಿಂಧೂರ,ಹಿಹಾಬ್ ಹಾಕಿದ್ರೆ ತೊಂದರೆ ಏನು ಎಂದು ಪ್ರಶ್ನೆ ಮಾಡಿದರು.
ಹಿಜಾಬ್ ಹಾಕ್ತಾರೆ ಅಂತ ಕೇಸರಿ ಶಾಲು ಹಾಕೋದು ತಪ್ಪು. ಸಮಾಜವನ್ನ ಹಾಳು ಮಾಡುವ ಕೆಲಸ ಆಗ್ತಿದೆ. ಬಿಜೆಪಿ ಉದ್ದೇಶ ಪೂರ್ವಕವಾಗಿ ಈ ವಿಷಯವನ್ನು ತಂದಿದೆ. ರಾಜಕೀಯ ಲಾಭಕ್ಕಾಗಿ ಇಂಥ ಕೆಲಸ ಮಾಡುತ್ತಿದೆ. ಯಾರಿಗೆ ಆಗಲೀ ಮನುಷ್ಯತ್ವ ಇರಬೇಕು.  ಹಿಜಾಬ್ ಮೊದಲಿಂದಲೂ ಧರಿಸುತ್ತಿದ್ದಾರೆ ಮುಂದುವರಿಯಲಿ. ಮುಸ್ಲಿಂ ಹೆಣ್ಣುಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಎಂದು ಆರೋಪಿಸಿದರು.


ಬಿಜೆಪಿಯವರ ಮನಸ್ಥಿತಿ ಸಂವಿಧಾನಕ್ಕೆ ವಿರುದ್ಧ


ಕಾಂಗ್ರೆಸ್ ವಿಪಕ್ಷವಾಗಿರಲು ನೈತಿಕತೆ ಇಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ಬೊಮ್ಮಾಯಿ ಏನು ವೇದಾಂತಿಯಾ..? ಬೊಮ್ಮಾಯಿ ಹೇಳೋದನ್ನು ಕೇಳಬೇಕಾ ನಾನು..? ಬೊಮ್ಮಾಯಿಗಿಂತ ನಾನೇ ಹಿರಿಯವನು. ಬಿಜೆಪಿಯವರ ಮನಸ್ಥಿತಿ ಸಂವಿಧಾನಕ್ಕೆ ವಿರುದ್ಧವಾಗಿದೆ. ಅದಕ್ಕಾಗಿ ಈ ಆಹೋರಾತ್ರಿ ಧರಣಿ ಮಾಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಅಂಥವರು ಸಚಿವರಾಗಿ ಇರಬೇಕಾ?


ರಾಷ್ಟ್ರಧ್ವಜಕ್ಕೆ ಅವಮಾನ ಆದರೂ ಸುಮ್ಮನೆ ಕುಳಿತುಕೊಳ್ಳಬೇಕಾ? ಇದರ ಬಗ್ಗೆ ಕೇಳಿದ್ರೆ ಜವಾಬ್ದಾರಿ ಇಲ್ಲ ಅಂತಾರೆ. ರಾಷ್ಟ್ರಧ್ವಜಕ್ಕೆ ಅಗೌರವ ಮಾಡೋದು ದೇಶ ಭಕ್ತಿನಾ? ಅಂಥವರು ಸಚಿವರಾಗಿ ಇರಬೇಕಾ?. ಬಿಜೆಪಿ ಯಾವತ್ತೂ ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದವರಲ್ಲ. ಅವರಿಗೆ ತ್ರಿವರ್ಣ ಧ್ವಜದ ಮಹತ್ವ ಗೊತ್ತಿಲ್ಲ. ಅವರಿಂದ ನಾವು ದೇಶಭಕ್ತಿ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಗುಡುಗಿದರು.


ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪಕ್ಷದವರು ಅವರಿಂದ ಕಲಿಯಬೇಕಾ? ನಮ್ಮ ಹೋರಾಟ ಮುಂದುವರೆಯಲಿದೆ. ಇದಾದ ಮೇಲೆ ನಾವು ಜನರ ಬಳಿ‌ ಹೋಗ್ತೇವೆ. ಅವರು ಸಂವಿಧಾನಕ್ಕೆ ವಿರುಧ್ಧ ಇರೋರು ಎಂದು ಕಿಡಿಕಾರಿದರು.


ಇದನ್ನೂ ಓದಿ:  ಸಿದ್ದರಾಮಯ್ಯರಿಂದ ನಾನು ಕಲಿಯಬೇಕಾದದ್ದು ಏನೂ ಇಲ್ಲ: HD Kumaraswamy ಸಿಡಿಮಿಡಿ


ಫೆ.25ಕ್ಕೆ ದೆಹಲಿ ಪ್ರವಾಸ


ಫೆಬ್ರವರಿ 25ರಂದು ಹೈಕಮಾಂಡ್ ನಾಯಕರ ಭೇಟಿಗಾಗಿ ನಮ್ಮನ್ನು ಕರೆದಿದ್ದಾರೆ. ನನಗೆ ಪಕ್ಷದ ಅಧ್ಯಕ್ಷರಿಗೆ, ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರಿಗೆ ಆಹ್ವಾನ ನೀಡಿದ್ದಾರೆ.  ರಾಹುಲ್ ಗಾಂಧಿ, ವೇಣುಗೋಪಾಲ, ಸುರ್ಜೇವಾಲಾ ಇರ್ತಾರೆ. 2023ರ ಅಸೆಂಬ್ಲಿ ಚುನಾವಣೆ ಕುರಿತು ಚರ್ಚೆ ಮಾಡುವುದಕ್ಕೆ ಕರೆದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

Published by:Mahmadrafik K
First published: