KS Eshwarappa: ನಾನು ಮದುವೆ ಗಂಡು ಆಗೋಕೆ ಇವತ್ತೇ ರೆಡಿ, ಆದ್ರೆ ಮದ್ವೆ ಯಾವಾಗ ಮಾಡಿಸ್ತಾರೋ ಗೊತ್ತಿಲ್ಲ!

ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಸೇರಿ ಕೇಂದ್ರದ ನಾಯಕರೊಂದಿಗೆ ಕುಳಿತು ಚರ್ಚೆ ಮಾತನಾಡಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ (ಸೆ. 17): ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ (Santhosh Suicide Case) ಆರೋಪಿಯಾಗಿ ಬಳಿಕ ಆರೋಪ ಮುಕ್ತರಾದ ಕೆ.ಎಸ್ ಈಶ್ವರಪ್ಪ (K S Eshwarappa), ಮತ್ತೆ ಸಚಿವ ಸ್ಥಾನಕ್ಕೇರಲು (Minister Position) ಹಪಹಪಿಸುತ್ತಿದ್ದಾರೆ. ಇನ್ನು ನಿಮಗ್ಯಾಕೆ ಸಚಿವ ಸ್ಥಾನದ ನೀಡಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಆರೋಪ ಮುಕ್ತರಾದ ಬಳಿಕ ಮತ್ತೆ ಸಚಿವ ಸ್ಥಾನ ಕೊಡುವುದಾಗಿ ಪಕ್ಷದ ನಾಯಕರು (Suicide Case) ಹೇಳಿದ್ದರು. ಯಾಕೆ ಕೊಟ್ಟಿಲ್ಲ ಎಂದು ನೀವು ನನಗಲ್ಲ,  ಅವರನ್ನೇ (ಬಿಜೆಪಿ ನಾಯಕರನ್ನೇ) ಕೇಳಿ. ನಾನು ಇವತ್ತೇ ಮದುವೆ ಗಂಡು ಆಗಲು ತಯಾರಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಸಚಿವ ಸ್ಥಾನಕ್ಕಾಗಿ ನಾನು ಯಾರನ್ನು ಭೇಟಿ ಮಾಡಲ್ಲ

ಸಚಿವ ಸ್ಥಾವಕ್ಕೆ ಕಾಯ್ತಿರೋ ಈಶ್ವರಪ್ಪ, ಸ್ಥಾನಕ್ಕಾಗಿ ನಾನು ಯಾರನ್ನು ಭೇಟಿ ಮಾಡೋದಿಲ್ಲ ಎಂದಿದ್ದಾರೆ. ಆರೋಪ ಮುಕ್ತರಾದ ಬಳಿಕ ಸಚಿವ ಸ್ಥಾನ ಕೊಡ್ತೀನಿ ಎಂದಿದ್ರು. ತೀರ್ಮಾನ ಮಾಡಬೇಕಾದವರು ಪಕ್ಷದ ಹಿರಿಯರು. ಅವರು ಮಾಡಲಿಲ್ಲ ಅಂದರೆ ನಾನೇನು ಮಾಡಲು ಆಗುವುದಿಲ್ಲ. ಈ ವಿಚಾರಕ್ಕೆ ಯಾರನ್ನೂ ಭೇಟಿ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಖಾರವಾಗಿಯೇ ನುಡಿದಿದ್ದಾರೆ.

ಚೌಡೇಶ್ವರಿ ಕೃಪೆಯಿಂದ ಆರೋಪ ಮುಕ್ತನಾಗಿದ್ದೇನೆ

ಬೇರೆ ಪ್ರಕರಣಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ನನ್ನ ಪ್ರಕರಣವೇ ಬೇರೆ. ನಮ್ಮ ಮನೆ ದೇವರು ಚೌಡೇಶ್ವರಿಯ ಕೃಪೆಯಿಂದ ನಾನು ಆರೋಪ ಮುಕ್ತನಾಗಿದ್ದರೂ ಇನ್ನೂ ಸಚಿವ ಸ್ಥಾನ ನೀಡದಿರುವುದು ಏಕೆ ಎಂಬುದು ಗೊತ್ತಿಲ್ಲ. ಇವತ್ತೇ ಬಂದು ಮಂತ್ರಿ ಆಗು ಅಂದರೆ ನಾನು ಸಿದ್ಧವಾಗಿದ್ದೇನೆ. ಆದರೆ, ಅದು ನನ್ನ ಕೈಯಲ್ಲಿಲ್ಲ ಎಂದರು.

K.S Eshwarappa transferred 29 Mysore PDO officers
ಕೆಎಸ್ ಈಶ್ವರಪ್ಪ


ಪಕ್ಷದ ನಾಯಕರು ಒಟ್ಟಾಗಿ ತೀರ್ಮಾನ ಮಾಡಲಿ

ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳಬೇಕು, ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಸೇರಿ ಕೇಂದ್ರದ ನಾಯಕರೊಂದಿಗೆ ಕುಳಿತು ಚರ್ಚೆ ಮಾತನಾಡಿ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ ಅವರು ಏಕೆ ಅದಕ್ಕೆ ಹಿಂದೆ–ಮುಂದೆ ನೋಡುತ್ತಿದ್ದಾರೊ ಗೊತ್ತಿಲ್ಲ. ಎಷ್ಟು ಖಾತೆ ಖಾಲಿ ಇದೆಯೋ ಅಷ್ಟನ್ನು ಭರ್ತಿ ಮಾಡಬೇಕಿದೆ. ಎಂಬುದು ನನ್ನ ಅಪೇಕ್ಷೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ​ ಹೇಳಿದ್ದಾರೆ.

ಇವ್ರ ಕಮಿಷನ್​ ಕಾಟಕ್ಕೆ ಸಂತೋಷ್​ ಪ್ರಾಣಬಿಟ್ರು -ಸಿದ್ದು ಆರೋಪ
ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಸಂತೋಷ್ ಎಂಬ ವ್ಯಕ್ತಿ ಬಿಜೆಪಿ ಕಮಿಷನ್ ಕಾಟಕ್ಕೆ ಬಲಿಯಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಈ ಬಗ್ಗೆ ನಾವು ಅಸೆಂಬ್ಲಿಯಲ್ಲು ಕೂಡ ಧ್ವನಿ ಎತ್ತಿದ್ವಿ. ಅವ್ರ ಸಾವಿಗೆ ಈಶ್ವರಪ್ಪನೇ ಕಾರಣ, ಹೀಗಾಗಿ ಅವ್ರು ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ್ವಿ. ಆ ಮೇಲೆ ಅವ್ರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ರು, ಆದರೆ ಅವ್ರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ದಾಖಲು ಮಾಡಿಲ್ಲ. ಕೊನೆಗೆ ಸರ್ಕಾರ ತನಿಖೆ ಮಾಡಿಸ್ತೀನಿ, ಅಂತ ಬಿ ರಿಪೋರ್ಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.ಸಂತೋಷ್​ ಪತ್ನಿಯಿಂದ ರಾಜ್ಯಪಾಲರಿಗೆ ಪತ್ರ

ಸರ್ಕಾರಕ್ಕೆ ಸಂತೋಷ್​ ಸೂಸೈಡ್​ ಕೇಸ್​ ಪೊಲೀಸರಿಂದ ಬೇಡ, ನಿವೃತ್ತ ನ್ಯಾಯಮೂರ್ತಿಗಳಿಂದ ಮಾಡಿಸಿ ಎಂದಿದ್ವಿ. ಆದರೆ ಅವರು ತನಿಖೆ ಮಾಡಿಸಿಲ್ಲ. ಇದೀಗ ಸಂತೋಷ್ ಪತ್ನಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಬಿ ರಿಪೋರ್ಟ್ ವಿರುದ್ಧ ಚಾಲೆಂಜ್ ಮಾಡಿ ಕೋರ್ಟ್​ ಹೋಗುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೆಂಪಣ್ಣ ಕೂಡ ಪ್ರಧಾನಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
Published by:ಪಾವನ ಎಚ್ ಎಸ್
First published: