Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ

ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಸಿಎಂ ಸ್ವತಃ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಈಶ್ವರಪ್ಪ ಅಮಾಯಕ ಎಂದಿದ್ದಾರೆ. ಆದ್ರೆ  ಈಶ್ವರಪ್ಪ ಸಾಕ್ಷ ನಾಶ ಮಾಡಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:

ಬೆಂಗಳೂರು (ಏ.15): ಗುತ್ತಿಗೆದಾರ ಸಂತೋಷ್ ಪಾಟೀಲ್ (Santhosh Patil) ಆತ್ಮಹತ್ಯೆ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ (K.S Eshwarappa) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನಡೆಸುತ್ತಿದ್ದ ಅಹೋರಾತ್ರಿ ಧರಣಿ (Protest) ಮುಕ್ತಾಯಗೊಂಡಿದೆ. ಇದೇ ವೇಳೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಮಂತ್ರಿ ಆಗ್ತಿನಿ ಎಂದು ಹೇಳಿದ್ದ ಈಶ್ವರಪ್ಪ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್​ I wish best of luck ಎಂದ ಎಂದಿದ್ದಾರೆ.  ಈಶ್ವರಪ್ಪ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


‘ಭ್ರಷ್ಟಾಚಾರದಿಂದ ನಲುಗಿ ಹೋಗಿದೆ’

ಸಿಎಂ ಮನೆಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದ್ವಿ ಆದ್ರೆ ದಾರಿ ಮಧ್ಯೆ ಪೊಲೀಸರು ತಡೆದಿದ್ದರು ನಮ್ಮನ್ನು ಆರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದರು. ಮತ್ತೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅಲ್ಲೇ ಮಾಡಿದ ತೀರ್ಮಾನದಂತೆ ಆಹೋರಾತ್ರಿ ಧರಣಿ ಮಾಡಿದ್ದೇವೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. 40% ಕಮಿಷನ್ ಬೇಡಿಕೆ ಕಾರಣಕ್ಕೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಭ್ರಷ್ಟಾಚಾರದಿಂದ ನಲುಗಿ ಹೋಗಿ ಎಫ್ ಐ ಆರ್ ಕೂಡಾ ವಿಳಂಬ ಮಾಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿಲ್ಲ

13 ತಾರೀಕು ಎಫ್ ಐ ಆರ್ ಮಾಡಿದ್ದಾರೆ. FIRನಲ್ಲಿ ಕೆಲಸ ಮಾಡಿ ದುಡ್ಡು ಕೊಡುತ್ತೀನಿ ಎಂದಿದ್ದಾರೆ. ಅವರ ಹೇಳಿಕೆ ಆಧಾರದಲ್ಲಿ ಕೆಲಸ ಮಾಡಿದ್ದಾರೆ ಎಂಬ ಉಲ್ಲೇಖ ಇದೆ. 40% ಕಮಿಷನ್ ಕೊಡುವ ಶಕ್ತಿ ಸಂತೋಷ್ ಗೆ ಇರಲಿಲ್ಲ, ಅವರನ್ನು ಸಾಕಷ್ಟು ಅಲಿಸಿದ್ದಾರೆ ಹೆಚ್ಚು ಬಡ್ಡಿ ಕೊಟ್ಟು ಸಾಲ ಪಡೆದುಕೊಂಡಿದ್ದರು, ಪತ್ನಿ ಒಡವೆ ಅಡವು ಇಟ್ಟಿದ್ದರು ಎಂದು ಪತ್ನಿ ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:  CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ

'ಈಶ್ವರಪ್ಪ ಅವರ ಬಂಧನವಾಗ್ಲೇಬೇಕು'

ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕೇಸ್ ಹಾಕಬೇಕು. ಗಂಭೀರ ಸ್ವರೂಪದ ಆರೋಪ ಇದ್ದಾಗ ಬಂಧನ ಆಗಬೇಕು. ಇದು ನೆಲದ ಕಾನೂನು, ಹಾಗಿದ್ದರೂ ಈಶ್ವರಪ್ಪ ಬಂಧನ ಆಗಿಲ್ಲ, ಸಂತೋಷ್ ತಾಯಿ ಹಾಗೂ ಪತ್ನಿಯನ್ನು ಭೇಟಿ ಮಾಡಿದ್ದೆವು. ಸಂತೋಷ್ ಪತ್ನಿಗೆ ಕೆಲಸ ಕೊಡಬೇಕು ಅನುಕಂಪದ ಆಧಾರದಲ್ಲಿ ಸರ್ಕಾರಕ್ಕೆ ಈ‌ ಬೇಡಿಕೆ ಇಟ್ಟಿದ್ದೇವೆ. ಪೆಂಡಿಂಗ್ ಬಿಲ್ ಕೂಡಾ ಚುಪ್ತಾ ಮಾಡಬೇಕು. ನಾಳೆಯಿಂದ ಐದು ದಿನಗಳ ಕಾಲ ಒಂಬತ್ತು ತಂಡ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡೋದಾಗಿ ತಿಳಿಸಿದ್ದಾರೆ.

ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಸಿಎಂ ಸ್ವತಃ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಈಶ್ವರಪ್ಪ ಅಮಾಯಕ ಎಂದಿದ್ದಾರೆ. ಆದ್ರೆ  ಈಶ್ವರಪ್ಪ ಸಾಕ್ಷ ನಾಶ ಮಾಡಬಹುದು, ಅವರು ಸಾಮಾನ್ಯ ವ್ಯಕ್ತಿಯಲ್ಲ ಈ ಕಾರಣಕ್ಕೆ ಹೈ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:  PSI ನೇಮಕಾತಿಯಲ್ಲಿ BJP, RSS ಕಾರ್ಯಕರ್ತರ ನೇಮಕ, ಒಬ್ಬರಿಂದ 70 ರಿಂದ 80 ಲಕ್ಷ ಲಂಚ: Congress ಆರೋಪ

ಕಾಂಗ್ರೆಸ್​ ಅಹೋರಾತ್ರಿ ಧರಣಿ ಅಂತ್ಯ

 ಗುರುವಾರ ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ಪ್ರಮುಖ ನಾಯಕರು ಸೇರಿ ಕೆಎಸ್ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾ ಮಾಡೋದರ ಜೊತೆಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ಒಂದು ದಿನದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಇದೀಗ ಪ್ರತಿಭಟನೆ ಆರಂಭವಾಗಿ ಇಪ್ಪತ್ತನಾಲ್ಕು ಗಂಟೆ ಪೂರ್ಣ ಆಗಿರುವುದರಿಂದ ರಾಜ್ಯ ಕಾಂಗ್ರೆಸ್ಘಟನೆ ಒಂದು ದಿನದ ಅಹೋರಾತ್ರಿ ಧರಣಿಯನ್ನು ಮುಕ್ತಾಯಗೊಳಿಸಿದೆ.


Published by:Pavana HS
First published: