ಈಶ್ವರಪ್ಪನವರಿಗೆ ಇನ್ನಷ್ಟು ತಲೆನೋವು: ತಮಗೇ ಟಿಕೆಟ್ ಬೇಕೆಂದು ಪಟ್ಟುಹಿಡಿದ ಜ್ಯೋತಿಪ್ರಕಾಶ್


Updated:March 13, 2018, 2:55 PM IST
ಈಶ್ವರಪ್ಪನವರಿಗೆ ಇನ್ನಷ್ಟು ತಲೆನೋವು: ತಮಗೇ ಟಿಕೆಟ್ ಬೇಕೆಂದು ಪಟ್ಟುಹಿಡಿದ ಜ್ಯೋತಿಪ್ರಕಾಶ್

Updated: March 13, 2018, 2:55 PM IST
- ನಾಗರಾಜ ಹೆಚ್​.ಆರ್., ನ್ಯೂಸ್18 ಕನ್ನಡ

ಶಿವಮೊಗ್ಗ(ಮಾ. 13): ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರಿಗೆ ಶಿವಮೊಗ್ಗ ನಗರದ ಬಿಜೆಪಿ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಅನುಮಾನ ಇನ್ನೂ ಮುಂದುವರಿದಿದೆ. ರುದ್ರೇಗೌಡರಿಗೆ ಟಿಕೆಟ್ ಕೊಡಲಾಗುತ್ತದೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಈಗ ಕ್ಷೇತ್ರದಿಂದ ಇನ್ನೊಬ್ಬ ಟಿಕೆಟ್ ಅಕಾಂಕ್ಷಿಯ ಹೆಸರು ಉದ್ಭವವಾಗಿದೆ. ಶಿವಮೊಗ್ಗದ ಸ್ಥಳೀಯ ಬಿಜೆಪಿ ಮುಖಂಡ ಜ್ಯೋತಿ ಪ್ರಕಾಶ್ ಅವರು ನಗರ ಕ್ಷೇತ್ರದ ಟಿಕೆಟ್ ಬಯಸಿ ಲಾಬಿ ನಡೆಸಲು ಆರಂಭಿಸಿದ್ದಾರೆ. ಇದು ಈಶ್ವರಪ್ಪನವರ ಬೆಂಬಲಿಗರನ್ನು ಕೆರಳಿಸಿದೆ.

ಜ್ಯೋತಿ ಪ್ರಕಾಶ್ ಬಹಳ ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಪ್ರಕಾಶ್ ಅವರು ಶಿವಮೊಗ್ಗ ನಗರ ಟಿಕೆಟ್​ಗಾಗಿ ಪಟ್ಟುಹಿಡಿದಿದ್ದಾರೆ. 30 ವರ್ಷದಿಂದ ತಾನೂ ರಾಜಕಾರಣದಲ್ಲಿದ್ದೇನೆ. ಪ್ರತೀ ಬಾರಿ ಈಶ್ವರಪ್ಪನವರಿಗೇ ಯಾಕೆ ಟಿಕೆಟ್ ಕೊಡುತ್ತೀರಿ? ತಮಗೂ ಅವಕಾಶ ಕೊಡಿ ಎಂದು ಜ್ಯೋತಿಪ್ರಕಾಶ್ ಒತ್ತಾಯಿಸುತ್ತಿದ್ದಾರೆ. ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ