• Home
  • »
  • News
  • »
  • state
  • »
  • KS Eshwarappa: ಜಾರ್ಜ್​ ಕೇಸ್ ಉದಾಹರಣೆ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದ ಈಶ್ವರಪ್ಪ

KS Eshwarappa: ಜಾರ್ಜ್​ ಕೇಸ್ ಉದಾಹರಣೆ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಅಂದು ವಿರೋಧ ಪಕ್ಷದ ನಾಯಕನಾಗಿ ಸದನದ ಒಳಗೂ ಮತ್ತು ಹೊರಗೂ ರಾಜೀನಾಮೆ ನೀಡುವಂತೆ ಆಗ್ರಹ ಮಾಡಿದ್ದೆ. ನಮ್ಮ ಒತ್ತಾಯದ ಮೇಲೆ ಜಾರ್ಜ್​ ರಾಜೀನಾಮೆ ನೀಡಿದ್ದರು. ತನಿಖೆ ಬಳಿಕ ಕ್ಲೀನ್​ಚಿಟ್​ ಸಿಕ್ಕ ಬಳಿಕ ಜಾರ್ಜ್ ಮತ್ತೆ ಸಂಪುಟಕ್ಕೆ ಸೇರಿದ್ದರು.

  • News18 Kannada
  • Last Updated :
  • Bangalore, India
  • Share this:

    ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ (Belagavi Winter Session) ಗೈರಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former CM KS Eshwarappa) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು. ನಾನು ಮಾಜಿ ಸಿಎಂ ಯಡಿಯೂರಪ್ಪ (Former CM BS Yediyurappa) ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ಕೆಲವು ತಿಂಗಳ ಹಿಂದೆ ನನ್ನ ಮೇಲೆ ನಿರಾಧಾರ ಆರೋಪ (ಗುತ್ತಿಗೆದಾರ ಸಂತೋಷ್ ಪಾಟೀಲ್ ಕೇಸ್) ಕೇಳಿ ಬಂದ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಈ ಹಿಂದೆ ಕಾಂಗ್ರೆಸ್ ಆಧಿಕಾರವಧಿಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ (Congress Leaders KJ George) ಅವರ ಮೇಲೆಯೂ ಇಂತಹುವುದೇ ಒಂದು ಆರೋಪ (ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಕೇಸ್) ಕೇಳಿ ಬಂದಿತ್ತು.


    ಅಂದು ವಿರೋಧ ಪಕ್ಷದ ನಾಯಕನಾಗಿ ಸದನದ ಒಳಗೂ ಮತ್ತು ಹೊರಗೂ ರಾಜೀನಾಮೆ ನೀಡುವಂತೆ ಆಗ್ರಹ ಮಾಡಿದ್ದೆ. ನಮ್ಮ ಒತ್ತಾಯದ ಮೇಲೆ ಜಾರ್ಜ್​ ರಾಜೀನಾಮೆ ನೀಡಿದ್ದರು. ತನಿಖೆ ಬಳಿಕ ಕ್ಲೀನ್​ಚಿಟ್​ ಸಿಕ್ಕ ಬಳಿಕ ಜಾರ್ಜ್ ಮತ್ತೆ ಸಂಪುಟಕ್ಕೆ ಸೇರಿದ್ದರು.


    ಅಧಿವೇಶನಕ್ಕೆ ಗೈರು; ಸ್ಪೀಕರ್​ಗೆ ಮಾಹಿತಿ


    ಅದೇ ರೀತಿ ನನ್ನನ್ನು ಪರಿಗಣಿಸುವಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ನನಗೆ ಪ್ರಕರಣದಲ್ಲಿ ಕ್ಲೀನ್​ ಚಿಟ್ ಸಿಕ್ಕಿದೆ. ಕಳೆದ ನಾಲ್ಕು ತಿಂಗಳಿನಿಂದ ಖಾಸಗಿಯಾಗಿ ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಆದರೆ ಇದುವರೆಗೂ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ನಿನ್ನೆ ಬೆಳಗಾವಿಗೆ ಹೋದಾಗ ಅಧಿವೇಶನಕ್ಕೆ ಹಾಜರಾಗಲ್ಲ ಎಂದು ಸ್ಪೀಕರ್ ಅವರಿಗೆ ಹೇಳಿ ಬಂದಿದ್ದೇನೆ.


    ಸಿಎಂ ಮಾತು ಸಮಾಧಾನ ತಂದಿದೆ


    ಇಂದು ಬೆಳಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಅವರನ್ನು ಪರಿಗಣನೆ ಮಾಡುವಂತೆ  ಹೈಕಮಾಂಡ್​ಗೆ ತಿಳಿಸಿದ್ದೇನೆ. ಹೈಕಮಾಂಡ್ ಸಹ ಈ ಅಂಶವನ್ನು ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಎಂದು ಮಾತನಾಡಿದ್ದಾರೆ.


    ಇದೇ ವೇಳೆ ಸಿಎಂ ನಮ್ಮ ಜೊತೆ ನೇರವಾಗಿ ಮಾತನಾಡಿಲ್ಲ ಎಂದು ಹೇಳಿದರು. ಒಂದು ಮಾಧ್ಯಮಕ್ಕೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ರೆ ಅದನ್ನು ನಂಬಬೇಕು. ಎಲ್ಲಾ ಅಂಶಗಳನ್ನು ಗಮನಿಸಿಯೇ ಸಿಎಂ ಹೇಳಿಕೆ ನೀಡಿರುತ್ತಾರೆ.


    ಈ ಮಾತು ಕೇಳಿನ ನಮಗೆ ಸಮಾಧಾನ ತಂದಿದೆ. ಹಾಗಾಗಿ ಆದಷ್ಟು ಬೇಗ ನಮ್ಮನ್ನು ಸಂಪುಟಕ್ಕೆ  ಸೇರಿಸಿಕೊಳ್ಳಿ. ಶೀಘ್ರದಲ್ಲಿಯೇ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಶ್ವಾಸವಿದೆ ಎಂದರು.


    ಇದನ್ನೂ ಓದಿ: Karnataka Assembly Elections: ಶಿವಮೊಗ್ಗ ನಗರದಲ್ಲಿ ಈ ಬಾರಿ ಟಫ್ ಫೈಟ್, ಈಶ್ವರಪ್ಪ ಕಣಕ್ಕಿಳಿಯದಿದ್ರೆ ಯಾರಿಗೆ ಟಿಕೆಟ್?


    30-40 ವರ್ಷಗಳಿಂದ ರಾಜಕಾರಣ


    ನಾನು 30 ರಿಂದ 40 ವರ್ಷಗಳಿಂದ ಪ್ರತಿಭಟನೆ ಮೂಲಕ ರಾಜಕಾರಣದಲ್ಲಿ ಬಂದವರು. ಕ್ಲೀನ್ ಚಿಟ್​ ಸಿಕ್ಕ ಬಳಿಕವೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ. ಆದ್ರೆ ನಮ್ಮನ್ನು ಯಾಕೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ನಾಡಿನ ಜನತೆ ಫೋನ್ ಮಾಡಿ ಕೇಳುತ್ತಿದ್ದರು. ಆದರೆ ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಆದ್ರೆ ಇದೀಗ ಸಿಎಂ ಬೊಮ್ಮಾಯಿ ಅವರ ಮಾತುಗಳಿಂದ ನಮಗೆ ನಂಬಿಕೆ ಬಂದಿದೆ ಎಂದು ಹೇಳಿದರು.


    ಆರೋಪ ಮುಕ್ತನಾಗಿ ಬಂದಿದ್ದೇನೆ


    ನಮ್ಮ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆ ರಾಜೀನಾಮೆ ನೀಡಿದ್ದೇವೆ. ಈಗ ಆರೋಪ ಮುಕ್ತವಾಗಿ ಬಂದಿದ್ದೇವೆ. ಹಾಗಾಗಿ ನಮ್ಮನ್ನು ಸೇರಿಸಿಕೊಳ್ಳಿ. ಬೇರೆ ಯಾರಿಗೆಲ್ಲಾ ಅವಕಾಶ ನೀಡುತ್ತಾರೆ ಎಂಬುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

    Published by:Mahmadrafik K
    First published: