• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangaluru: ಭಾಷಣದ ವೇಳೆ ಆಜಾನ್​, 'ಅಲ್ಲಾಗೆ ಕಿವಿ ಕೇಳಲ್ವಾ?' ಎಂದು ಈಶ್ವರಪ್ಪ ಸಿಡಿಮಿಡಿ

Mangaluru: ಭಾಷಣದ ವೇಳೆ ಆಜಾನ್​, 'ಅಲ್ಲಾಗೆ ಕಿವಿ ಕೇಳಲ್ವಾ?' ಎಂದು ಈಶ್ವರಪ್ಪ ಸಿಡಿಮಿಡಿ

ಕೆಎಸ್ ಈಶ್ವರಪ್ಪ, ಮಾಜಿ ಸಚಿವ

ಕೆಎಸ್ ಈಶ್ವರಪ್ಪ, ಮಾಜಿ ಸಚಿವ

ನಿಮ್ಮ ಊರಿನಲ್ಲಿರುವ ಚರಂಡಿ ಮಾಡಲು ಸ್ವಾತಂತ್ರ್ಯ ತಂದರೆ? ನಿಮ್ಮ ಊರಿನ ರಸ್ತೆ ಮಾಡಲು ಸ್ವಾತಂತ್ರ್ಯ ತಂದರೆ, ಕಟ್ಟಡ ಮಾಡಲು ಸ್ವಾತಂತ್ರ್ಯ ತಂದರೆ ಎಂದು ಕೆಎಸ್​​ ಈಶ್ವರಪ್ಪ ಪ್ರಶ್ನಿಸಿದ್ದಾರೆ.

  • Share this:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಕಾವೂರಿನ ಶಾಂತಿನಗರದಲ್ಲಿ ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (Vijaya sankalpa Yatre) ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ ಕೆಎಸ್​​ ಈಶ್ವರಪ್ಪ (KS Eshwarappa) ಅವರು ಮಾತನಾಡುತ್ತಿದ್ದರು. ಆದರೆ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಅಜಾನ್ (Azaan)​​​ ಕೇಳಿ ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಅವರು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಸುಪ್ರೀಂ ಕೋರ್ಟ್ (Supreme Court) ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ.


ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಹೇಳುತ್ತಾರೆ. ಆದರೆ ಮೈಕ್​​​ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನಗಳಲ್ಲೂ (Temple) ಪೂಜೆ ಮಾಡುತ್ತೇವೆ‌. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು (Religion) ಉಳಿಸುವಂಥಹ ದೇಶ ಭಾರತ (India) ಮಾತ್ರ. ಆದರೆ ಮೈಕ್ ಹಿಡಿದುಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಹೇಳಿದ್ದಾರೆ.


ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭಾಷಣ


ಇದನ್ನೂ ಓದಿ: N Mahesh: ಕೊಳ್ಳೆಗಾಲ ಶಾಸಕ ಎನ್​ ಮಹೇಶ್​​​ಗೆ ಎದೆನೋವು, ಆಸ್ಪತ್ರೆಗೆ ದಾಖಲು


ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ನಮ್ಮ ಧರ್ಮ ಹಾಗೂ ದೇಶವನ್ನು ಅಭಿವೃದ್ಧಿ ಮಾಡಲು ಅಂತ. ಸ್ವರ್ಗದಲ್ಲಿ ಇದ್ದರೆ ಅಲ್ವಾ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು, ಸುಭಾಷ್​ ಚಂದ್ರ ಬೋಸ್​​, ವೀರ ಸಾವರ್ಕರ್, ಚಂದ್ರಶೇಖರ ಆಜಾದ್ ಹೀಗೆ ಹಲವರ ಹೆಸರನ್ನು ಹೇಳುತ್ತಾ ಹೋಗಬಹುದು.


ಆದರೆ ನಿಮ್ಮ ಊರಿನಲ್ಲಿರುವ ಚರಂಡಿ ಮಾಡಲು ಸ್ವಾತಂತ್ರ್ಯ ತಂದರೆ? ನಿಮ್ಮ ಊರಿನ ರಸ್ತೆ ಮಾಡಲು ಸ್ವಾತಂತ್ರ್ಯ ತಂದರೆ, ಕಟ್ಟಡ ಮಾಡಲು ಸ್ವಾತಂತ್ರ್ಯ ತಂದರೆ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಆಜಾನ್​ ಕೇಳಿ ಗರಂ ಆದ ಈಶ್ವರಪ್ಪ ಅವರು, ಅಲ್ಲಾಗೆ ಮೈಕ್​​ ಇಟ್ಟಿಕೊಂಡು ಹೇಳಿದರೆ ಮಾತ್ರ ಕೇಳುತ್ತಾ ಎಂದು ಪ್ರಶ್ನೆ ಮಾಡಿದರು.


ಸರ್ವಸ್ವವನ್ನು ತ್ಯಾಗ ಮಾಡಿದ ಧರ್ಮವೇ ಜೈನ ಧರ್ಮ


ಇತ್ತ ಹಾವೇರಿಯ ಶಿಗ್ಗಾವಿಯಲ್ಲಿ ನಡೆದ ಆದಿನಾಥ ತೀರ್ಥಂಕರ ಜೈನಮಂದಿರ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜೈನ ತೀರ್ಥಂಕರರು ಇಡೀ ವಿಶ್ವದಲ್ಲಿ ತಮ್ಮ ಸಮಾಜದ ಬಗ್ಗೆ ಸಾರಿದ್ದಾರೆ. ಮಹಾವೀರ, ಭಗವಾನ್ ಬುದ್ಧರು ಹಾಗೂ ಅವರ ಅನುಯಾಯಿಗಳು ಸಮಾಜದ ಒಳಿಗಾಗಿ ದುಡಿಯುತ್ತಿರುವವರು.


ರಾಜ ಮನೆಯನದಲ್ಲಿ ಹುಟ್ಟಿದ ಭಗವಾನ್ ಬುದ್ಧರು ರಾಜತ್ವವನ್ನೇ ತ್ಯಾಗ ಮಾಡಿದ್ದರು. ತಮ್ಮ ಎಲ್ಲಾ ಆಸ್ತಿಯನ್ನ ಜನರಿಗೆ ನೀಡಿ ಭಗವಾನ್ ಬುದ್ಧರು ಕಾಡಿಗೆ ಹೋದರು. ಸರ್ವಸ್ವವನ್ನು ತ್ಯಾಗ ಮಾಡಿದ ಧರ್ಮವೇ ಜೈನ ಧರ್ಮ. ಜೈನ ಧರ್ಮವನ್ನ ಆಚರಣೆ ಮಾಡುವುದು ತುಂಬಾ ಕಷ್ಟ. ಅದನ್ನು ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾ ಇರೋದು ಜೈನ ಧರ್ಮ. ಸಣ್ಣ ಇರುವೆಗೂ ನೋವಾಗದಂತೆ ನಡೆದುಕೊಳ್ಳುವ ಧರ್ಮವೇ ಜೈನ ಧರ್ಮ ಎಂದು ಹೇಳಿದರು.
ಇದನ್ನೂ ಓದಿ: Bengaluru Mysuru Expresswayನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ; ಇದುವರೆಗೂ 84 ಪ್ರಯಾಣಿಕರು ಸಾವು!


ಜೈನ ಧರ್ಮದ ಸಂಸ್ಕೃತಿ ಅಪರೂಪ ಸಂಸ್ಕೃತಿಯಾಗಿದೆ. ಶಿಗ್ಗಾವಿ ಭಾಗದಲ್ಲಿ ಜೈನ ಧರ್ಮದ ಸಂಘಟನೆ ತುಂಬಾ ಅಚ್ಚು ಕಟ್ಟಾಗಿ ಆರಚರಣೆ ಮಾಡಲಾಗುತ್ತದೆ. ಪೂಜ್ಯರು ನನಗೆ ಜೈನ ಧರ್ಮದ ಪುಸ್ತಕ ನೀಡಿದ್ದರು. ಅದನ್ನು ನಾನು ಓದಿ ದೇವರ ಜಗಲಿ ಮೇಲೆ ಇಟ್ಟಿದ್ದೇನೆ. ಜೈನ್ ಧರ್ಮದ ವಿಚಾರಗಳಿಗೆ ನಾನು ಸೋತಿದ್ದೇನೆ.


ನನ್ನ ಕ್ಷೇತ್ರದ ಎಲ್ಲಾ ಬಸತಿಗಳಿಗೂ ನಾನು ಸಹಕಾರ ಮಾಡಿದ್ದೇನೆ. ಅಹಿಂಸೆಯ ಆಧಾರ ಮೇಲೆ ಜೈನ ಧರ್ಮ ದೀರ್ಘಕಾಲ ಇರಬೇಕು. ಬಸತಿಯ ಮೂಲಕ ಜೈನ ಧರ್ಮ ಉಳಿಬೇಕು ಅನ್ನೋದು ನನ್ನ ನಂಬಿಕೆ. ಹೃದಯಕ್ಕೆ ನೆಮ್ಮದಿ ನೀಡುವ ಕೆಲಸ ಬಸತಿ ನಿರ್ಮಾಣ. ಅದನ್ನ ನಾನು ಮಾಡಿದ್ದು ನನಗೆ ನೆಮ್ಮದಿ ನೀಡಿದೆ ಎಂದು ಸಿಎಂ ತಿಳಿಸಿದರು.

Published by:Sumanth SN
First published: