KS Eshwarappa: ನೂಪುರ್ ಹೇಳಿಕೆ ಖಂಡಿಸಿದವರು ಕಾಳಿ ಮಾತೆಗೆ ಅವಮಾನವಾದಾಗ ಯಾಕೆ ಸುಮ್ಮನಿದ್ದರು? ಸಿದ್ದು ವಿರುದ್ಧ ಈಶ್ವರಪ್ಪ ಕಿಡಿಕಿಡಿ

ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ಬಗ್ಗೆ ಮಾತನಾಡಿದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಖಂಡನೆ ವ್ಯಕ್ತಪಡಿಸಿದ್ರು. ಆದರೆ ಪೋಸ್ಟರ್‌ನಲ್ಲಿ ಕಾಳಿಮಾತೆಗೆ ಅಪಮಾನವಾದಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಿಲ್ಲ ಅಂತ ಈಶ್ವರಪ್ಪ ಕೇಳಿದ್ರು.

ಸಿದ್ದರಾಮಯ್ಯ ಮತ್ತು ಈಶ್ವರಪ್ಪ

ಸಿದ್ದರಾಮಯ್ಯ ಮತ್ತು ಈಶ್ವರಪ್ಪ

  • Share this:
ಕಲಬುರಗಿ: ಎಐಸಿಸಿ ನಾಯಕರು (AICC Leader) ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ (State Congress Leader) ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ (Minister) ಕೆಎಸ್ ಈಶ್ವರಪ್ಪ (KS Eshwarappa) ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, 75 ವರ್ಷಗಳಿಂದ ಹಿಂದೂ (Hindu) ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೆವು. ನೂಪುರ್ ಶರ್ಮಾ ಹೇಳಿಕೆ (Nupur Sharma Statement) ವಿರುದ್ಧ ಭಾರಿ ಪ್ರತಿಭಟನೆ (Protest) ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರೂ ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಕಾಳಿದೇವಿ (Goddess Kaali) ಬಾಯಲ್ಲಿ ಸಿಗರೇಟು (cigarette) ಇಟ್ಟಿದ್ದರ ಚಿತ್ರದ ಪೋಸ್ಟರ್ (Poster) ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು. ಈ ಬಗ್ಗೆ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಯಾಕೆ ಪ್ರತಿಕ್ರಿಯೆ ನೀಡಿಲ್ಲ. ಈ ರೀತಿ ಮಾಡಿದ್ರೆ ನಮ್ಮ ರಕ್ತ ಕುದಿಯಲ್ವಾ ಅಂತ ಈಶ್ವರಪ್ಪ ಕಿಡಿಕಾರಿದ್ರು.

 “ಹರ್ಷ ಕೊಲೆಯನ್ನು ಸಿದ್ದರಾಮಯ್ಯ ಖಂಡಿಸಿಲ್ಲ”

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಮತ್ತು ರಾಜಸ್ಥಾನದ ಉದಯಪುರದ ಕನ್ಹಯ್ಯಲಾಲ್ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಅಂತ ಈಶ್ವರಪ್ಪ ಆಗ್ರಹಿಸಿದ್ರು.  ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹರ್ಷ ಕೊಲೆಯನ್ನು ಎಂದಿಗೂ ಖಂಡನೆ ಮಾಡಿಲ್ಲ ಎಂದು ಈಶ್ವರಪ್ಪ ಆರೋಪಿಸಿದ್ರು.

“ಕಾಳಿ ಮಾತೆಗೆ ಅಪಮಾನವಾದಾಗ ಸಿದ್ದು ಮಾತನಾಡಿಲ್ಲ”

ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ಬಗ್ಗೆ ಮಾತನಾಡಿದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಖಂಡನೆ ವ್ಯಕ್ತಪಡಿಸಿದ್ರು. ಆದರೆ ಪೋಸ್ಟರ್‌ನಲ್ಲಿ ಕಾಳಿಮಾತೆಗೆ ಅಪಮಾನವಾದಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಿಲ್ಲ ಅಂತ ಈಶ್ವರಪ್ಪ ಕೇಳಿದ್ರು. 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೆವು. ಈ ರೀತಿ ಮಾಡಿದ್ರೆ ನಮ್ಮ ರಕ್ತ ಕುದಿಯಲ್ವಾ ಅಂತ ಈಶ್ವರಪ್ಪ ಕಿಡಿಕಾರಿದ್ರು.

ಇದನ್ನೂ ಓದಿ: PSI Exam Scam: ಸಿದ್ದರಾಮಯ್ಯ ಈಗಾಗಲೇ 10 ಬಾರಿ ರಾಜೀನಾಮೆ ನೀಡ್ಬೇಕಿತ್ತು! ಹೀಗಂದಿದ್ದೇಕೆ ಸಿಎಂ ಬಸವರಾಜ ಬೊಮ್ಮಾಯಿ?

ಸಿದ್ದರಾಮೋತ್ಸವಕ್ಕೆ ಈಶ್ವರಪ್ಪ ವ್ಯಂಗ್ಯ

ಇನ್ನು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದವರು ಸೇರಿ ಸಂತೋಷದಿಂದ ಆಚರಿಸಬೇಕಾಗಿತ್ತು. ಆದರೆ ಅದಕ್ಕೆ ಸಿದ್ದರಾಮೋತ್ಸವ ಎಂದು ಕಾಂಗ್ರೆಸ್‌ನವರು ಹೆಸರು ಕೊಟ್ಟುಕೊಂಡು ಆಚರಿಸಲು ಮುಂದಾಗಿದ್ದಾರೆ. ಇದು ಜನರ ಉತ್ಸವ. ನಮ್ಮ ಬೆಂಬಲಿಗರು ಮಾಡಿಕೊಳ್ಳುತ್ತಿದ್ದಾರೆ. ನಾನು ಹೇಳಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ನಾನು ಮುಖ್ಯಮಂತ್ರಿ ಎಂದು ಘೋಷಣೆ ಕೂಗಬೇಡಿ ಎಂದು ಒಂದು ಕಡೆ ಹೇಳಿಕೊಳ್ಳುವುದು. ಮತ್ತೊಂದು ಕಡೆ ಅವರೇ ಚಿವುಟಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಘೋಷಣೆ ಕೂಗಿಸಿಕೊಳ್ಳುವುದು ನೋಡುತ್ತಿದ್ದೇವೆ. ಇಂತಹ ದುಸ್ಥಿತಿ ಯಾವುದೇ ಪಕ್ಷದ ನಾಯಕರಿಗೂ ಬರಬಾರದು. ಡಿ.ಕೆ.ಶಿವಕುಮಾರ್ ಅವರದ್ದೂ ಇದೇ ಪರಿಸ್ಥಿತಿ‘ ಎಂದು ವ್ಯಂಗ್ಯವಾಡಿದ್ರು.

ಇದನ್ನೂ ಓದಿ: PSI Recruitment Scam: ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾಧ ಅಲ್ವಾ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

“ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಿಜೆಕ್ಟ್ ಗುಂಪಿನಲ್ಲಿದೆ!”

"ಯಾವಾಗ ವ್ಯಕ್ತಿಯು ರಿಜೆಕ್ಟ್ ಲಿಸ್ಟ್‌ನಲ್ಲಿ ಸೇರ್ತಾರೋ ಆವಾಗ ತಾವು ಬದುಕಿದ್ದೇವೆ ಅಂತಾ ತೋರಿಸಿಕೊಳ್ಳೊಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಇದು ಸ್ವಯಂಪ್ರೇರಿತವಾಗಿ ಆಚರಿಸಿಕೊಳ್ಳುತ್ತಿರುವ ಕಾರ್ಯಕ್ರಮ ಅಂತ ಈಶ್ವರಪ್ಪ ವ್ಯಂಗ್ಯವಾಡಿದ್ರು. ರಾಜ್ಯವಲ್ಲದೇ ಇಡೀ ದೇಶದಲ್ಲಿ ಕಾಂಗ್ರೆಸ್ ರಿಜೆಕ್ಟೆಡ್ ಗ್ರೂಪ್‌ನಲ್ಲಿ ಸೇರಿದೆ. ಸಿದ್ದರಾಮಯ್ಯ ಕೂಡ ರಿಜೆಕ್ಟ್ ಆಗಿದ್ದು, ಚಾಮುಂಜೇಶ್ವರಿ ಕ್ಷೇತ್ರದಲ್ಲಿ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ" ಎಂದು ಟೀಕಿಸಿದ್ರು.
Published by:Annappa Achari
First published: