ಸಂತೋಷ್​ ಪಾಟೀಲ್ ಯಾರೆಂಬುದೇ ನನಗೆ ಗೊತ್ತಿಲ್ಲ; ರಾಜೀನಾಮೆ ನೀಡಲ್ಲ ಎಂದ KS Eshwarappa

ಪ್ರಕರಣ ಸಂಬಂಧ ನ್ಯಾಯಾಲಯದಿಂದ ಆತನಿಗೆ ನೋಟಿಸ್ ಬಂದಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತ ನಮ್ಮ ಇಲಾಖೆಯಿಂದ ಯಾವುದೇ ಟೆಂಡರ್ ಪಡೆದುಕೊಂಡಿಲ್ಲ. ಪ್ರಕರಣ ಸಂಬಂಧ ನಾನು ರಾಜೀನಾಮೆ ನೀಡಲ್ಲ.

'ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆಎಸ್​ ಈಶ್ವರಪ್ಪ

'ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆಎಸ್​ ಈಶ್ವರಪ್ಪ

 • Share this:
  ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಖಾತೆ ಸಚಿವ ಕೆ ಎಸ್​ ಈಶ್ವರಪ್ಪ (KS Eshwarappa) ಕಾರಣ ಎಂದು ಗುತ್ತಿಗೆದಾರ ಸಂತೋಷ್​ ಪಾಟೀಲ್​​ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೈಸೂರಿ(Mysore)ನಲ್ಲಿ ಮಾತನಾಡಿರುವ ಕೆ ಎಸ್​ ಈಶ್ವರಪ್ಪ, ಆತ (Santosh Patil) ಯಾರೆಂಬುದೇ ನನಗೆ ಗೊತ್ತಿಲ್ಲ ಎಂದಿದ್ದಾರೆ. ಪ್ರಕರಣ ಕುರಿತು ಮಾತನಾಡಿರುವ ಅವರು, ಇದರಲ್ಲಿ ನನ್ನ ಪಾತ್ರ ಇಲ್ಲ. ಆತ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದಿದ್ದಾರೆ.

  ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆ. 
  ಈ ಹಿಂದೆ ಸಂತೋಷ್​ ನಮ್ಮ ಇಲಾಖೆ ಮೇಲೆ ಆರೋಪ ಮಾಡಿದ್ದ. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದೇವೆ. ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ನ್ಯಾಯಾಲಯದಿಂದ ಆತನಿಗೆ ನೋಟಿಸ್ ಬಂದಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತ ನಮ್ಮ ಇಲಾಖೆಯಿಂದ ಯಾವುದೇ ಟೆಂಡರ್ ಪಡೆದುಕೊಂಡಿಲ್ಲ. ಪ್ರಕರಣ ಸಂಬಂಧ ನಾನು ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಸಂತೋಷ್​ ಪಾಟೀಲ್​
  ಇನ್ನು ಈ ಹಿಂದೆ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್​ ಆರೋಪ ಮಾಡಿದ್ದರು. ಬಳಿಕ ಊರು ಸೇರಿದ್ದ ಅವರು ಇಂದು ಉಡುಪಿಯ ಶಾಂಭವಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ.

  ಇದನ್ನು ಓದಿ: ಡೆತ್​ನೋಟ್​ಗಿಂತ ಸಾಕ್ಷಿ ಬೇಕಾ? ಕೂಡಲೇ KS Eshwarappaರನ್ನು ಬಂಧಿಸಿ; ಕಾಂಗ್ರೆಸ್​ ಆಗ್ರಹ

  ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್​​

  ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ಸಂತೋಷ್ ಪಾಟೀಲ್ ತಿಳಿಸಿದ್ದಾರೆ. ಅಲ್ಲದೇ ಈ ಸಂದೇಶವನ್ನು ಮಾಧ್ಯಮಗಳಿಗೂ ವಾಟ್ಸಾಪ್​ ಮೂಲಕ ಕಳುಹಿಸಿದ್ದಾರೆ.
  ಈಶ್ವರಪ್ಪ ವಿರುದ್ಧ ನೇರವಾಗಿ ಗುತ್ತಿಗೆದಾರ ಸಾವಿನ ಆರೋಪ ಮಾಡಿರುವ ಹಿನ್ನಲೆ ಕಾಂಗ್ರೆಸ್​ ನಾಯಕರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದು, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

  ಈಶ್ವರಪ್ಪ ಪರ ಯತ್ನಾಳ್​ ಬ್ಯಾಟಿಂಗ್​​
  ಪ್ರಕರಣ ಸಂಬಂಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಮಾತನಾಡಿ, ಈಶ್ವರಪ್ಪ ಅವರನ್ನು ಸಮರ್ಥಿಸುವ ಪ್ರಯತ್ನ ನಡೆಸಿದರು. ಆತ್ಮಹತ್ಯೆ ಅನೇಕ ಕಾರಣ ಇರುತ್ತವೆ. ಅವರ ಜೀವನದಲ್ಲಿ ಜಿಗುಪ್ಸೆ ಆಗಿರಬಹುದು. ಸಾಲ ಸೋಲ ಹೆಚ್ಚಾಗಿ ಹಾಳಾಗಿರಬಹುದು 40% ಆತ್ಮಹತ್ಯೆ ಅನ್ನೋದು ಸಂಪೂರ್ಣ ಸುಳ್ಳು. ಈಶ್ವರಪ್ಪ 40% ತಗೋತಾರೆ ಅಂದ್ರೆ ಅದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದರು.

  ಇದನ್ನು ಓದಿ: ನನ್ನ ಸಾವಿಗೆ ಸಚಿವ KS Eshwarappa ಕಾರಣ: ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು

  ಅಲ್ಲದೇ, ಪ್ರಕರಣ ಕುರಿತು ತನಿಖೆ ಆಗಲಿ, ಯಾವ ಕಾರಣಕ್ಕೆ ಆತ್ಮಹತ್ಯೆ ಅನ್ನೋದು ತನಿಖೆ ಆಗಲಿ. ಈಶ್ವರಪ್ಪ ಕೀಳುಮಟ್ಟಕ್ಕೆ ಹೋಗೋರು ಅಲ್ಲ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ. ಕಾಂಗ್ರೆಸ್ ನವರು ಇಂಥವನೊಬ್ಬನನ್ನ ರೆಡಿ ಮಾಡ್ತಾರೆ, ಅವನಿಂದ ಹೇಳಿಕೆ‌ ಕೊಡಿಸ್ತಾರೆ. ಇಂತಹವು ಬಹಳ ನಡೆಯುತ್ತೆ ರಾಜಕಾರಣದಲ್ಲಿ ಕಾಂಗ್ರೆಸ್ ಹತಾಶೆಗೊಂಡಿದೆ ಎಂದು ವಾಗ್ದಾಳಿ ನಡೆಸಿದರು

  ವರದಿಗಾಗಿ ಕಾಯೋಣ

  ಇನ್ನು ಪ್ರಕರಣ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ಈ ವಿಚಾರದಲ್ಲಿ ನನಗೆ ಹೆಚ್ಚು ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಹೇಳುತ್ತೇನೆ. ಸುರ್ಜೇವಾಲ 40% ಆರೋಪ ವಿಚಾರ ಅವರಿಗೆ ಗೊತ್ತಿಲ್ಲ, ಕಾಂಗ್ರೆಸ್ ಸಂಸ್ಕೃತಿ ಭ್ರಷ್ಟಾಚಾರ ಸಂಸ್ಕೃತಿ. ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಕಾಂಗ್ರೆಸ್. ಅದನ್ನ ನಿರ್ನಾಮ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸತ್ಯಾ ಸತ್ಯತೆ ಯಾರೂ ತೆಗೆದುಹಾಕೋಕೆ‌ ಸಾಧ್ಯವಿಲ್ಲ. ಭ್ರಷ್ಟಾಚಾರ, ಪರ್ಸಂಟೇಜ್ ನಮ್ಮ ಸರ್ಕಾರದಲ್ಲಿ ಇಲ್ಲ. ಪದೇ ಪದೇ ಆಪಾದನೆ ಮಾಡುವುದು ಸರಿಯಲ್ಲ. ವ್ಯಕ್ತಿ ಸತ್ತಿದ್ದಾನೆ, ಅದರ ಪ್ರಾಥಮಿಕ ವರದಿ ಬರಲಿ. ವರದಿಯಲ್ಲಿ ಏನು ಬರಲಿದೆ ಅನ್ನೋದು ನೋಡೋಣ ಎಂದು ತಿಳಿಸಿದ್ದಾರೆ.
  Published by:Seema R
  First published: