• Home
  • »
  • News
  • »
  • state
  • »
  • KS Bhagawan: ರಾಮಮಂದಿರದ ಬಗ್ಗೆ ವಿವಾದಾತ್ಮಕ ಪುಸ್ತಕ, ಸಾಹಿತಿ ಭಗವಾನ್‌ ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್

KS Bhagawan: ರಾಮಮಂದಿರದ ಬಗ್ಗೆ ವಿವಾದಾತ್ಮಕ ಪುಸ್ತಕ, ಸಾಹಿತಿ ಭಗವಾನ್‌ ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್

ವಿವಾದಾತ್ಮಕ ಸಾಹಿತಿ ಕೆಎಸ್ ಭಗವಾನ್

ವಿವಾದಾತ್ಮಕ ಸಾಹಿತಿ ಕೆಎಸ್ ಭಗವಾನ್

ವಿವಾದಗಳಿಂದಲೇ ಸುದ್ದಿಯಾಗುವ ಸಾಹಿತಿ ಸಾಹಿತಿ ಭಗವಾನ್ 2018ರಲ್ಲಿ ‘ರಾಮಮಂದಿರ ಏಕೆ ಬೇಕು’ ಎಂಬ ಕೃತಿ ಬರೆದು, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಔಚಿತ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೇ ಕೃತಿ ವಿಚಾರದಲ್ಲಿ ದೂರು ದಾಖಲಾಗಿತ್ತು.

  • News18 Kannada
  • Last Updated :
  • Ayodhya | Sagarmpur
  • Share this:

ಶಿವಮೊಗ್ಗ: ತಮ್ಮ ವಿವಾದಾತ್ಮಕ ಹೇಳಿಕೆ (Controversial Statements) ಮತ್ತು ವಿವಾದಾತ್ಮಕ ಪುಸ್ತಕಗಳಿಂದಲೇ (Controversial Books) ಸುದ್ದಿ ಮಾಡುವ ಸಾಹಿತಿ ಕೆಎಸ್‌ ಭಗವಾನ್ (KS Bhagawan) ವಿರುದ್ದ ಮತ್ತೊಂದು ದೂರು (Complaint) ದಾಖಲಾಗಿದೆ. ಭಗವಾನ್ ‘ರಾಮಮಂದಿರ ಏಕೆ ಬೇಕು’ ಎಂಬ ಪುಸ್ತಕ (Books) ಬರೆದಿದ್ದು, ಇದರಲ್ಲಿ ಹಿಂದೂ ಧಾರ್ಮಿಕ ಭಾವನೆಗೆ (Hindu religious feeling) ಧಕ್ಕೆ ತಂದಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇವರ ವಿರುದ್ಧ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದ ಜೆಎಂಎಫ್‌ಸಿ ಕೋರ್ಟ್‌ (Sagar JMFC Court) ಸಮನ್ಸ್ (Summons) ಜಾರಿ ಮಾಡಿದೆ. ಆ.3 ರಂದು ಭಗವಾನ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್‌ಆದೇಶ ನೀಡಿದೆ.


2018ರಲ್ಲಿ ಬರೆದಿದ್ದ ‘ರಾಮಮಂದಿರ ಏಕೆ ಬೇಕು’ ಕೃತಿ


ಸಾಹಿತಿ ಭಗವಾನ್ 2018ರಲ್ಲಿ ‘ರಾಮಮಂದಿರ ಏಕೆ ಬೇಕು’ ಎಂಬ ಕೃತಿ ಬರೆದು, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಔಚಿತ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೇ ಕೃತಿ ವಿಚಾರದಲ್ಲಿ ದೂರು ದಾಖಲಾಗಿತ್ತು.


ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ


ಕೃತಿಯಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಅಂತ ಆರೋಪಿಸಲಾಗಿದೆ. ಈ ಸಂಬಂಧ 2018ರಲ್ಲಿ ಸಾಗರ ಇಕ್ಕೇರಿಯ ಆರ್‌ಎಸ್ಎಸ್ ಕಾರ್ಯಕರ್ತ ಮಹಾಬಲೇಶ್ವರ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಭಗವಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮನವಿ ಮಾಡಿದ್ದರು. IPC ಸೆಕ್ಷನ್ 295(a) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಅರ್ಜಿ ವಿಚಾರಣೆ ಕೋರ್ಟ್‌ನಲ್ಲಿ ನಡೆದಿತ್ತು.


ಇದನ್ನೂ ಓದಿ: Transgenders Love: ಆಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದವ ಹುಡುಗನೇ ಅಲ್ವಂತೆ! 4 ವರ್ಷದ ಲವ್‌ಗೆ 'ಮಂಗಳ' ಹಾಡಿದ ಯುವತಿ


ಭಗವಾನ್ ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್


ದೂರುದಾರ ಮಹಾಬಲ  ಇವರ ಪರವಾಗಿ ವಕೀಲ ಪ್ರವೀಣ್​ ಎಂಬುವರು ವಕಾಲತ್ತು ವಹಿಸಿದ್ದರು. ಇದರ ವಿಚಾರಣೆ ನಡೆಸಿದ ಸಾಗರ ಜೆಎಂಎಫ್‌ಸಿ ಕೋರ್್ ನ್ಯಾಯಾಧೀಶ ಶ್ರೀಶೈಲ ಭೀಮಸೇನ್ ಭಗಾಡೆ ವಿಚಾರಣೆ ನಡೆಸಿದರು. IPC ಸೆಕ್ಷನ್ 295(a) ರ ಅಡಿಯಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ಸಂಬಂದ ಪ್ರಕರಣ ದಾಖಲು ಮಾಡಿ ಆಗಸ್ಟ್ 3ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸಮನ್ಸ್​ ಜಾರಿ ಮಾಡಿದೆ.


ವಿವಾದಗಳಿಂದಲೇ ಗುರುತಿಸಿಕೊಂಡಿರುವ ಭಗವಾನ್


ಕಟುವಾದ ಎಡಪಂಥೀಯ ಹಾಗೂ ಹಿಂದೂ ವಿರೋಧಿ ಆಲೋಚನಾ ಧಾಟಿಯನ್ನು ಹೊಂದಿರುವ ಆರೋಪ ಹೊತ್ತಿರುವ ಭಗವಾನ್ ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಶಂಕರಾಚಾರ್ಯರು, ಶ್ರೀರಾಮ, ಭಗವದ್ಗೀತೆಯನ್ನು  ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಗಳನ್ನು ಸೃ‌ಷ್ಟಿಸಿದರು.


 ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ


ಈ ಹಿಂದೆ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಗವಾನ್, ವಿವಾದ ಸೃಷ್ಟಿಸಿದ್ದರು. ಹಾಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ದೂರುಗಳೂ ಅವರ ವಿರುದ್ಧ ದಾಖಲಾದವು. ಇವರಿಗೆ ನೀಡಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ವಿರೋಧ ಮತ್ತು ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕೆಂಬ ಆಗ್ರಹ ಅನೇಕ ಜನರಿಂದ ವ್ಯಕ್ತವಾಗಿತ್ತು.


ಇದನ್ನೂ ಓದಿ: Kodagu: ಮತ್ತೆ ಜಲಸ್ಫೋಟಕ್ಕೆ ತತ್ತರಿಸಿದ ಕೊಡಗು, ನೋಡ ನೋಡುತ್ತಿದ್ದಂತೇ ಕುಸಿಯಿತು ಬೆಟ್ಟ!


“ಹಿಂದೂ ಶಬ್ದವೇ ಅಪಮಾನಕರ” ಎಂದಿದ್ದ ಭಗವಾನ್


ಹಿಂದೊಮ್ಮೆ ಮೈಸೂರಿನಲ್ಲಿ ಮಾತನಾಡಿದ್ದ ಭಗವಾನ್, ಹಿಂದೂ ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ.  ಗ್ರಾಮೀಣ ಜನರಿಗೆ ಹಿಂದೂ ಎಂದರೆ ಗೊತ್ತೆ ಇಲ್ಲ. ನೀವು ಯಾವ ಧರ್ಮ ಎಂದರೆ ವಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ.  ಹಿಂದೂ ಎಂಬ ಶಬ್ದ ಅವಮಾನಕರ. ಹಿಂದೂ ಧರ್ಮ ಧರ್ಮವೇ  ಅಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Published by:Annappa Achari
First published: