KRS ಸಂಪೂರ್ಣ ಭರ್ತಿ: ನವೆಂಬರ್ 2ರಂದು CM Basavaraj Bommai ಬಾಗಿನ

ಕಾವೇರಿಗೂ ಮೊದಲು ಸಿಎಂ ಕಪಿಲೆಗೆ ಬಾಗಿನ ಅರ್ಪಿಸಲಿದ್ದಾರೆ. ಕಬಿನಿ ಡ್ಯಾಂನಿಂದ ಬೆಳಗ್ಗೆ 11.35ಕ್ಕೆ ಹೆಲಿಕಾಪ್ಟರ್ ಮೂಲಕ KRS ತಲುಪಲಿದ್ದಾರೆ. ನವೆಂಬರ್ 2ರ  ಮಧ್ಯಾಹ್ನ ಸುಮಾರು 12 ಗಂಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.

ಕೆಆರ್​ಎಸ್​

ಕೆಆರ್​ಎಸ್​

  • Share this:
ಮಂಡ್ಯ: ಕೃಷ್ಣರಾಜಸಾಗರ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾವೇರಿ ನದಿಗೆ ನವೆಂಬರ್ 2ರಂದು ಬಾಗಿನ ಅರ್ಪಿಸಲಿದ್ದಾರೆ. ಮುಖ್ಯಮಂತ್ರಿಯಾದ ವರ್ಷವೇ ಕಾವೇರಿ ಹಾಗೂ ಕಪಿಲೆಗೆ ಬಾಗನ ಅರ್ಪಿಸುವ ಸೌಭಾಗ್ಯವನ್ನು ಮುಖ್ಯಮಂತ್ರಿಗಳು ಪಡೆದುಕೊಂಡಿದ್ದಾರೆ. ಕಾವೇರಿಗೂ ಮೊದಲು ಸಿಎಂ ಕಪಿಲೆಗೆ ಬಾಗಿನ ಅರ್ಪಿಸಲಿದ್ದಾರೆ. ಕಬಿನಿ ಡ್ಯಾಂನಿಂದ ಬೆಳಗ್ಗೆ 11.35ಕ್ಕೆ ಹೆಲಿಕಾಪ್ಟರ್ ಮೂಲಕ KRS ತಲುಪಲಿದ್ದಾರೆ. ನವೆಂಬರ್ 2ರ  ಮಧ್ಯಾಹ್ನ ಸುಮಾರು 12 ಗಂಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ಬಾಗಿನ ಅರ್ಪಿಸಿದ ಬಳಿಕ ಮಧ್ಯಾಹ್ನ 1.15ಕ್ಕೆ ಮುಖ್ಯಮಂತ್ರಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

ಮುಂಗಾರು ಕ್ಷೀಣಗೊಂಡ ಹಿನ್ನೆಲೆ ಜಲಾಶಯ ತುಂಬುವುದು ಅನುಮಾನ ಎಂದು ಹೇಳಲಾಗಿತ್ತು. ಆದ್ರೆ ಅಕ್ಟೋಬರ್ ಮಧ್ಯದ ವಾರದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ನೀರು ಹರಿದು ಬಂದಿತ್ತು. ವರುಣದೇವನ ಕೃಪೆಗಾಗಿ ಸಿಎಂ ವಿಶೇಷ ಪೂಜೆ ಮಾಡಿಸಿದ್ರು.

11 ವರ್ಷಗಳ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಭರ್ತಿ

11 ವರ್ಷಗಳ ಬಳಿಕ  ಅಕ್ಟೋಬರ್ ಅಂತ್ಯದಲ್ಲಿ  ಕೆಆರ್ ಎಸ್ (KRS Dam) ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿಯೇ ಕೆಆರ್ ಎಸ್ ಭರ್ತಿಯಾಗುತ್ತಿತ್ತು. 2009ರಲ್ಲಿ ಅಕ್ಟೋಬರ್ 28ರಂದು ತುಂಬಿತ್ತು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ (Monsoon Rains) ಸುರಿಯದ ಕಾರಣ ನೀರು ಹರಿದು ಬಂದಿರಲಿಲ್ಲ. ಡ್ಯಾಂ ಭರ್ತಿಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆ ಮಾಡಿತ್ತು . ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು.

ಇದನ್ನೂ ಓದಿ:  Karnataka Weather Today; ಇಂದು ಸಹ ರಾಜ್ಯದಲ್ಲಿ ಮಳೆಯ ಸಿಂಚನ

ಉತ್ತಮ ಮಳೆಗಾಗಿ ಪರ್ಜನ್ಯ ಹೋಮ

ಜಲಾಶಯ ಭರ್ತಿಯಾಗದ ಹಿನ್ನೆಲೆ ಅಕ್ಟೋಬರ್ 7ರಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಗಾಗಿ ಪೂಜೆ ನಡೆಸಿದ್ದರು. ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನಡೆದಿದ್ದ ಪರ್ಜನ್ಯ ಹೋಮ ನಡೆಸಲಾಗಿತ್ತು. ಈ  ವಿಶೇಷ ಹೋಮದಲ್ಲಿ ಸಿಎಂ  ಬೊಮ್ಮಾಯಿ ಪಾಲ್ಗೊಂಡಿದ್ದರು. ಪೂಜೆಯಲ್ಲಿ ಮುಖ್ಯಮಂತ್ರಿಗಳಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದ್ದರು. ವಿಶೇಷ ಪೂಜೆ ಬಳಿಕವೇ ಉತ್ತಮ ಮಳೆಯಾಗಿದೆ ಎಂದು ಅನ್ನದಾತರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಕೆಆರ್ ಎಸ್ ಭರ್ತಿಯಾಗುತ್ತಿರುವ ಹಿನ್ನೆಲೆ ಕೃಷಿಕ ವರ್ಗ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕ ಡ್ಯಾಂಗಳು ಭರ್ತಿ

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ (Rainfall)ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.

ಇದನ್ನೂ ಓದಿ:  KRS: ಕೆಆರ್​ಎಸ್ ಡ್ಯಾಂ ಅಡಿಪಾಯದ ಕಲ್ಲುಗಳು ಕುಸಿತ, ನಿಜವಾಗ್ಲೂ ಡ್ಯಾಂ ಬಿರುಕು ಬಿಟ್ಟಿದೆಯಾ?

ಕೆಆರ್‌ಎಸ್ ನೀರಿನ ಮಟ್ಟ                                                            

ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದು ಸಂಫೂರ್ಣ ಭರ್ತಿಯಾಗಿದೆ. ಇಂದಿನ ಒಳಹರಿವಿನ ಪ್ರಮಾಣ 6447 ಕ್ಯೂಸೆಕ್ ಗಳಿಷ್ಟಿದ್ದು, 4,859 ಕ್ಯೂಸೆಕ್ ನೀರು ಹೊರ ಹರಿವು ಇದೆ. ಜಲಾಶದ ಗರಿಷ್ಠ  ನೀರಿನ ಸಂಗ್ರಹ  49.452 ಟಿಎಂಸಿ ಇದೆ. ಕೆಆರ್​ ಎಸ್ ಭರ್ತಿಯಾದ ಹಿನ್ನೆಲೆ ನದಿಗೆ ನೀರು ಬಿಡಲಾಗುತ್ತಿದೆ. ಇಂದು ಮತ್ತು ನಾಳೆ ಸಹ ಮಳೆಯಾಗುವ ಸಾಧ್ಯತೆಗಳಿದ್ದು, ನದಿ ಪಾತ್ರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.

ಉಡುಪಿ, ಮಂಗಳೂರು ಮತ್ತು ಉತ್ತರ  ಕನ್ನಡ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ ಹಾಗಾಗಿ ಸಮುದ್ರ ತೀರದ ಮತ್ತು ಮೀನುಗಾರರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಇನ್ನುಳಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗದಲ್ಲಿಯೂ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಪ್ರತಿಬಾರಿಯಂತೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.
Published by:Mahmadrafik K
First published: