11 ವರ್ಷಗಳ ಬಳಿಕ ಅಕ್ಟೋಬರ್ ಅಂತ್ಯದಲ್ಲಿ KRS Dam ಬಹುತೇಕ ಭರ್ತಿ:  ಮುಂದಿನ ವಾರ CM Bommai ಬಾಗಿನ

11 ವರ್ಷಗಳ ಬಳಿಕ  ಅಕ್ಟೋಬರ್ ಅಂತ್ಯದಲ್ಲಿ  ಕೆಆರ್ ಎಸ್ (KRS Dam) ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿಯೇ ಕೆಆರ್ ಎಸ್ ಭರ್ತಿಯಾಗುತ್ತಿತ್ತು. 2009ರಲ್ಲಿ ಅಕ್ಟೋಬರ್ 28ರಂದು ತುಂಬಿತ್ತು.

KRS Dam

KRS Dam

  • Share this:
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ, ಬೆಂಗಳೂರಿನ (Bengaluru) ದಾಹ ನೀಗಿಸುವ ಕನ್ನಂಬಾಡಿ ಕಟ್ಟೆ (Krishna Raja Sagara)ಬಹುತೇಕ ಭರ್ತಿಯಾಗಿದೆ. 11 ವರ್ಷಗಳ ಬಳಿಕ  ಅಕ್ಟೋಬರ್ ಅಂತ್ಯದಲ್ಲಿ  ಕೆಆರ್ ಎಸ್ (KRS Dam) ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿಯೇ ಕೆಆರ್ ಎಸ್ ಭರ್ತಿಯಾಗುತ್ತಿತ್ತು. 2009ರಲ್ಲಿ ಅಕ್ಟೋಬರ್ 28ರಂದು ತುಂಬಿತ್ತು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ (Monsoon Rains) ಸುರಿಯದ ಕಾರಣ ನೀರು ಹರಿದು ಬಂದಿರಲಿಲ್ಲ. ಡ್ಯಾಂ ಭರ್ತಿಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆ ಮಾಡಿತ್ತು . ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು. ಮುಂಗಾರು ಅಂತ್ಯದಲ್ಲಿ ಮಳೆ ಬಿರುಸು ಪಡೆದುಕೊಂಡ ಪರಿಣಾಮ ಒಳ ಹರಿವು ಹೆಚ್ಚಳವಾಗಿತ್ತು. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂ ಇಂದು 124.04 ಅಡಿ ತಲುಪಿದೆ.  ಸಂಪೂರ್ಣ ಭರ್ತಿಗೆ ಕೇವಲ 0.76 ಅಡಿ ಅಷ್ಟೇ ಬಾಕಿ ಇದೆ.

ಉತ್ತಮ ಮಳೆಯಾಗಿ ಸಿಎಂ ಬೊಮ್ಮಾಯಿ ವಿಶೇಷ ಪೂಜೆ

ಜಲಾಶಯ ಭರ್ತಿಯಾಗದ ಹಿನ್ನೆಲೆ ಅಕ್ಟೋಬರ್ 7ರಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಗಾಗಿ ಪೂಜೆ ನಡೆಸಿದ್ದರು. ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನಡೆದಿದ್ದ ಪರ್ಜನ್ಯ ಹೋಮ ನಡೆಸಲಾಗಿತ್ತು. ಈ  ವಿಶೇಷ ಹೋಮದಲ್ಲಿ ಸಿಎಂ  ಬೊಮ್ಮಾಯಿ ಪಾಲ್ಗೊಂಡಿದ್ದರು. ಪೂಜೆಯಲ್ಲಿ ಮುಖ್ಯಮಂತ್ರಿಗಳಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದ್ದರು. ವಿಶೇಷ ಪೂಜೆ ಬಳಿಕವೇ ಉತ್ತಮ ಮಳೆಯಾಗಿದೆ ಎಂದು ಅನ್ನದಾತರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಕೆಆರ್ ಎಸ್ ಭರ್ತಿಯಾಗುತ್ತಿರುವ ಹಿನ್ನೆಲೆ ಕೃಷಿಕ ವರ್ಗ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಭರ್ತಿಗೆ ಮುಕ್ಕಾಲು ಅಡಿ ಬಾಕಿ

ಜಲಾಶಯ ಭರ್ತಿಯಾಗಲು ಕೇವಲ ಮುಕ್ಕಾಲು ಅಡಿ ಬಾಕಿ ಇದೆ.  ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದೆ. ಜಲಾಶಯದ ಇಂದಿನ ನೀರಿನ ಮಟ್ಟ 124.04 ಅಡಿಗಳಷ್ಟಿದೆ. ಸದ್ಯ ಡ್ಯಾಂಗೆ 13,984 ಕ್ಯೂಸೆಕ್ ಒಳ ಹರಿವು ಇದ್ದು, ಡ್ಯಾಂನಿಂದ 3544 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. ಜಲಾಶದಲ್ಲಿನ ಒಟ್ಟು 48.391 ನೀರು ಶೇಖರಣೆ ಇದೆ. 49.452 ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:  Karnataka Weather Today: ಮುಂದಿನ 24 ಗಂಟೆಯೊಳಗೆ ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ

ಮುಂದಿನ ವಾರ ಸಿಎಂ ಬಾಗಿನ

ಸಂಪ್ರದಾಯದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಮುಂದಿನ ವಾರ ಬಾಗಿನ ಅರ್ಪಿಸಲಿದ್ದಾರೆ. ಸದ್ಯ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದಾರೆ. ಚುನಾವಣೆ ಪ್ರಚಾರದ ಬಳಿಕ ಸಿಎಂ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಹುತೇಕ ಡ್ಯಾಂಗಳು ಭರ್ತಿ

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ (Rainfall)ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.

ಇದನ್ನೂ ಓದಿ:  Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..

ಕೇರಳ, ತಮಿಳುನಾಡಿಗೆ ಮತ್ತೆ ಮಳೆಯ ಅಲರ್ಟ್

ನಿರಂತರ ಮಳೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಕೇರಳದಲ್ಲಿ ಮತ್ತೆ ವರುಣ ದೇವ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಮತ್ತು ಮಾಹೆ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್ ಭಾಗಗಳಲ್ಲಿ ಅಕ್ಟೋಬರ್ 26 ರಿಂದ 30ರವರೆಗೆ ಗುಡುಗು-ಸಿಡಿಲು ಸಹಿತ ವ್ಯಾಪಕ ಮಳೆಯಾಗಲಿದೆ. ಇದೇ ಅಕ್ಟೋಬರ್ 29 ಮತ್ತು 30 ರಂದು ಆಂಧ್ರಪ್ರದೇಶದ ಕರಾವಳಿ ಹಾಗೂ ರಾಯಲಸೀಮೆ ಪರಿಸರದಲ್ಲಿ ಮಳೆಯಾಗಲಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ (ವಾಯುಭಾರ ಕುಸಿತ) ಪ್ರದೇಶ ನಿರ್ಮಾಣಗೊಳ್ಳಲಿದೆ. ತದನಂತರ ಮಳೆರಾಯ ಅಬ್ಬರಿಸಲಿದ್ದಾನೆ
Published by:Mahmadrafik K
First published: