ರಾಯಚೂರಿನಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣೆ; ನದಿ ಪಾತ್ರದ 72 ಗ್ರಾಮಗಳು ಪ್ರವಾಹ ಭೀತಿಯಲ್ಲಿ

ಇನ್ನೊಂದು ಕಡೆ ದೇವದುರ್ಗಾದ ಬಳಿಯಲ್ಲಿರುವ ಹೂವಿನಹೆಡಗಿ ಸೇತುವೆ ಈಗ ಮುಳಗುವ ಹಂತದಲ್ಲಿದೆ. ಇದರಿಂದಾಗಿ ದೇವದುರ್ಗಾ ಮೂಲಕ ರಾಯಚೂರು ಹಾಗೂ ಕಲಬುರಗಿಗೆ ಹೋಗುವ ಬಸ್ ಗಳ ಸ್ಥಗಿತಗೊಳಿಸಿ ಈ ಬಸ್ ಗಳು ತಿಂಥಣಿ ಸೇತುವೆಯ ಮೂಲಕ ಹೋಗಬೇಕಾಗಿದೆ.

news18-kannada
Updated:August 7, 2020, 8:17 PM IST
ರಾಯಚೂರಿನಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣೆ; ನದಿ ಪಾತ್ರದ 72 ಗ್ರಾಮಗಳು ಪ್ರವಾಹ ಭೀತಿಯಲ್ಲಿ
ರಕ್ಷಣಾ ಸಿಬ್ಬಂದಿ
  • Share this:
ರಾಯಚೂರು(ಆ.07): ಮಹಾರಾಷ್ಟ್ರ, ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಕೃಷ್ಣಾ ನದಿಯ ಎಲ್ಲಾ ಉಪನದಿಗಳು ಸೇರಿಕೊಂಡು ಕೃಷ್ಣಾ ನದಿಯು ರಾಯಚೂರು ಜಿಲ್ಲೆಯ ಮುಖಾಂತರ ಹಾಯ್ದು ಹೋಗಿ, ಕೊನೆಗೆ ತೆಲಂಗಾಣ, ಆಂಧ್ರಪ್ರದೇಶ ತಲುಪುತ್ತದೆ. ಇದರಿಂದಾಗಿ ಮೇಲ್ಭಾಗದಲ್ಲಿ ಮಳೆಯಾದರೆ ಸಾಕು ರಾಯಚೂರು ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕ ಮೂಡುತ್ತದೆ. ಅದೇ ರೀತಿ ಈಗ ಆತಂಕ ಸೃಷ್ಠಿಯಾಗಿದೆ.

ಆಲಮಟ್ಟಿಯಿಂದ‌ ಬರುವ ಕೃಷ್ಣಾ ನದಿಗೆ ಮಲಪ್ರಭಾ ನದಿಯೂ ಸೇರುವುದರಿಂದ ನಾರಾಯಣಪುರದ ಬಸವಸಾಗರ ಜಲಾಶಯವು ಮೈದುಂಬಿ ಹೆಚ್ಚುವರಿ ನೀರು ನದಿಗೆ ಬಿಡಲಾಗಿದೆ. ಇಂದು ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು ಜಲಾಶಯದಿಂದ ಈಗ 1.83 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಿದೆ. ಇದರಿಂದಾಗಿ ಯರಗೋಡ, ಹಂಚಿನಾಳ, ಕಡದರಗಡ್ಡೆ ಸೇರಿದಂತೆ ಹಲವು ಗ್ರಾಮದ ಜನ ಈಗ ಸುತ್ತಿ ಬಳಸಿ ಲಿಂಗಸಗೂರಿಗೆ ಬರಬೇಕಾಗಿದೆ.

ಪ್ರವಾಹ ಸಂತ್ರಸ್ತರಿಗೆ ಸಂತೈಸಿದ ಆರ್. ಅಶೋಕ್; ಪರಿಹಾರದ ವಿಚಾರದಲ್ಲಿ ಮೊಣಕೈಗೆ ತುಪ್ಪ ಸವರಿ ಹೋದ ಸಚಿವರು

ಇನ್ನೊಂದು ಕಡೆ ದೇವದುರ್ಗಾದ ಬಳಿಯಲ್ಲಿರುವ ಹೂವಿನಹೆಡಗಿ ಸೇತುವೆ ಈಗ ಮುಳಗುವ ಹಂತದಲ್ಲಿದೆ. ಇದರಿಂದಾಗಿ ದೇವದುರ್ಗಾ ಮೂಲಕ ರಾಯಚೂರು ಹಾಗೂ ಕಲಬುರಗಿಗೆ ಹೋಗುವ ಬಸ್ ಗಳ ಸ್ಥಗಿತಗೊಳಿಸಿ ಈ ಬಸ್ ಗಳು ತಿಂಥಣಿ ಸೇತುವೆಯ ಮೂಲಕ ಹೋಗಬೇಕಾಗಿದೆ.

ಈ ಮಧ್ಯೆ ಇಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆ ನಡೆಸಿದರು. ಕೃಷ್ಣಾ ನದಿ ಪಾತ್ರದ 72 ಗ್ರಾಮಗಳ ಪ್ರವಾಹ ಸಂದರ್ಭದಲ್ಲಿ ಅಗತ್ಯ ಕ್ರಮ‌ಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ದೋಣಿಗಳು ಹಾಗು ಲೈವ್ ಜಾಕೆಟ್​​ಗಳನ್ನು ಸುಸಜ್ಜಿತವಾಗಿಡಬೇಕು ಎಂದು ಹೇಳಿದರು.

ಈ‌ ಮಧ್ಯೆ ಈಗಾಗಲೇ ಜಿಲ್ಲಾಡಳಿತವು ರಬ್ಬರ್ ದೋಣಿಗಳು ಸುಸಜ್ಜಿತವಾಗಿರುವ ಬಗ್ಗೆ ಪರೀಕ್ಷೆ ಮಾಡಿದೆ.  ಇನ್ನೂ ಐದು ದೋಣಿಗಳನ್ನು ಖರೀದಿಸಲು ಜಿಲ್ಲಾಡಳಿತ ಸಿದ್ದವಾಗಿದೆ.  ಜಿಲ್ಲಾ ಮಟ್ಟದ ಅಧಿಕಾರಿಗಳು ಮೊನ್ನೆ ಕುರ್ವಾಕುಲ ಹಾಗೂ ಅತ್ಕೂರ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಸ್ಥಿತಿ ಅವಲೋಕಿಸಿದ್ದಾರೆ.
ಇಂದು ಕೃಷ್ಣಾ ನದಿಯ ಪ್ರವಾಹ ಆರಂಭವಾಗಿದ್ದು ಪಕ್ಕದ ಜಮೀನುಗಳಿಗೆ ನೀರೊದಗಿಸುವ ಪಂಪುಸೆಟ್ಟುಗಳೂ ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ಮುಂದಿನ ದಿನಗಳಲ್ಲಿ ಪ್ರವಾಹ ಯಾವ ಅವಾಂತರ ಸೃಷ್ಟಿಸುತ್ತದೆ ಎಂಬ ಆತಂಕ ನದಿ‌ ಪಾತ್ರದ ಜನರಲ್ಲಿದೆ.
Published by: Latha CG
First published: August 7, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading