ತಗ್ಗಿದ ಕೃಷ್ಣಾ ನದಿ ಪ್ರವಾಹ; ಕೊಳ್ಳುರು-ಹೂವಿನಹೇಡಗಿ ಸೇತುವೆ ಮೇಲೆ ಮತ್ತೆ ಜನ‌ ಸಂಚಾರ...! 

ಇಷ್ಟು ದಿವಸ ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿವು ಹಿನ್ನೆಲೆ ನದಿ ತೀರದ ಜನರು ಆತಂಕಕ್ಕೆ ಒಳಗಾಗಿದ್ದರು. ಇಂದು ನೀರಿನ ಹರಿವು ಕಡಿಮೆಯಾದ ಹಿನ್ನೆಲೆ ಜನರು ನೆಮ್ಮದಿಯಾಗಿರುವಂತಾಗಿದೆ.

ಕೊಳ್ಳುರು-ಹೂವಿನಹೇಡಗಿ ಸೇತುವೆ

ಕೊಳ್ಳುರು-ಹೂವಿನಹೇಡಗಿ ಸೇತುವೆ

  • Share this:
ಯಾದಗಿರಿ(ಆ.23): ಮಹಾರಾಷ್ಟ್ರದಿಂದ ನೀರಿನ ಒಳಹರಿವು ಕಡಿಮೆಯಾಗಿದ್ದು, ಕೃಷ್ಣಾ ನದಿಯ ಪ್ರವಾಹ ಸ್ವಲ್ಪ ತಗ್ಗಿದೆ. ಈಗ ಕೃಷ್ಣಾ ನದಿ ತೀರದ ಜನರು ಸದ್ಯಕ್ಕೆ ನಿಟ್ಟಿಸಿರು ಬಿಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಇಂದು ಬೆಳಿಗ್ಗೆ 127680 ಕ್ಯೂಸೆಕ್ ನೀರು 12 ಗೇಟ್ ಗಳನ್ನು ತೆಗೆದು ನೀರು ಬಿಡಲಾಗುತ್ತಿದೆ. ಇಂದು ಜಲಾಶಯದಿಂದ ‌ಕೃಷ್ಣಾ ನದಿಗೆ ನೀರು ಬಿಡುವ ಪ್ರಮಾಣ ತಗ್ಗಿಸಲಾಗಿದೆ.

ಬಸವಸಾಗರ ಜಲಾಶಯದಲ್ಲಿ 2 ಲಕ್ಷ ನೀರು ಒಳಹರಿವು ಇದೆ. ಜಲಾಶಯವು 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ವಿದ್ದು ಈಗ ಜಲಾಶಯದಲ್ಲಿ 26.23 ಟಿಎಂಸಿ ನೀರು ಸಂಗ್ರಹವಾಗಿದೆ. ಇಷ್ಟು ದಿವಸ ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿವು ಹಿನ್ನೆಲೆ ನದಿ ತೀರದ ಜನರು ಆತಂಕಕ್ಕೆ ಒಳಗಾಗಿದ್ದರು. ಇಂದು ನೀರಿನ ಹರಿವು ಕಡಿಮೆಯಾದ ಹಿನ್ನೆಲೆ ಜನರು ನೆಮ್ಮದಿಯಾಗಿರುವಂತಾಗಿದೆ.

ಸಚಿವ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರವಾಸ

ಕೊಳ್ಳೂರು- ಹೂವಿನಹೆಡಗಿ ಸೇತುವೆ ಸಂಚಾರಕ್ಕೆ ಅವಕಾಶ

ಯಾದಗಿರಿ - ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೊಳ್ಳುರು -ಹೂವಿನಹೆಡಗಿ ಸೇತುವೆಯು ಕಳೆದ ಒಂದುವಾರದಿಂದ ಕೃಷ್ಣಾ ನದಿಯ ಪ್ರವಾಹ ಹಿನ್ನೆಲೆ ಸೇತುವೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಯಾದಗಿರಿ- ರಾಯಚೂರು ಜಿಲ್ಲೆಗೆ ತೆರಳುವ ಸಾರ್ವಜನಿಕರು ಪ್ರಯಾಸ ಪಡುವಂತಾಗಿತ್ತು. ಇಂದು ಕೃಷ್ಣಾ ನದಿಯಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆಯಾದ ಹಿನ್ನೆಲೆ ಕೃಷ್ಣಾ ನದಿ ನೀರು ಸೇತುವೆ ಕೆಳಭಾಗದಿಂದ ಹರಿಯುತ್ತಿದೆ.ಇಂದು ಬೆಳಿಗ್ಗೆಯಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕೊಳ್ಳುರು ಗ್ರಾಮದ ಮುಖಂಡ ಶಿವಾರೆಡ್ಡಿ ಪಾಟೀಲ ಮಾತನಾಡಿ, ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಈಗ  ಕೆಳಭಾಗದಿಂದ ನೀರು ಹರಿಯುತ್ತಿವೆ. ಕೃಷಿ ಸಲಕರಣೆಗಳು ತರಲು ದೇವ ದುರ್ಗಕ್ಕೆ ಹೋಗಿ ಬರಲು ಈಗ ಅನಕೂಲವಾಗಿದೆ ಎಂದರು.

ಜನರು ಯಾದಗಿರಿ - ರಾಯಚೂರಗೆ ತೆರಳುತ್ತಿದ್ದಾರೆ.ಈ  ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ .ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿದೆ. ಆದರೆ, ಪ್ರವಾಹ ಸ್ವಲ್ಪ ತಗ್ಗಿದ ಹಿನ್ನೆಲೆ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.
Published by:Latha CG
First published: