ಬೆಳಗಾವಿ(ಆ.30): ಪೀರನವಾಡಿ ಗ್ರಾಮ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ನಿರ್ಮಾಣ ಸಂಬಂಧ ದೊಡ್ಡ ವಿವಾದ ಸೃಷ್ಠಿಯಾಗಿತ್ತು. ಸದ್ಯ ಅದೇ ಸ್ಥಳದಲ್ಲಿಯೇ ರಾಯಣ್ಣನ ಪ್ರತಿಮೆ ಸ್ಥಾಪನೆಯಾಗಿದೆ. ಜತೆಗೆ ಸ್ಥಳೀಯವಾಗಿ ಪರ ವಿರೋಧ ಮಾಡಿದ್ದ ಎರಡು ಗುಂಪುಗಳ ನಡುವೆ ಸಂಧಾನ ಸಭೆಯನ್ನು ಸಹ ನಡೆಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇನ್ನೂ ಅನಗತ್ಯ ಚರ್ಚೆಗಳನ್ನು ಮಾಡುವ ಮೂಲಕ ಗೊಂದಲಗಳನ್ನು ಸೃಷ್ಟಿಸುವ ಯತ್ನ ನಡೆಯುತ್ತಿದೆ.
ಪೀರನವಾಡಿ ವೃತ್ತದಲ್ಲಿ ಸ್ಥಾಪನೆ ಆಗಿರೋ ರಾಯಣ್ಣ ಪ್ರತಿಮೆ ಹಾಗೂ ಶಿವಾಜಿ ಪ್ರತಿಮೆಗೆ ಸಮಾನ ಗೌರವ ಸಲ್ಲಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಪೀರನವಾಡಿ ವೃತ್ತವನ್ನು ಛತ್ರಪತಿ ಶಿವಾಜಿ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಈಗಾಗಲೇ ಗ್ರಾಮಸ್ಥರು ನಿರ್ಣಯ ಮಾಡಕೊಂಡಿದ್ದಾರೆ. ಈ ಮೂಲಕ ವಿವಾದನ್ನು ಸೌಹಾರ್ದತೆಯಿಂದ ಇತ್ಯರ್ಥ ಪಡಿಸಲಾಗಿದೆ.
ವಿವಾದ ಇತ್ಯರ್ಥದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಶಿವಾಜಿ ಪರವಾಗಿ ಅನೇಕರು ಪೋಸ್ಟ್ ಗಳನ್ನು ಹಾಕಿದ್ರೆ, ರಾಯಣ್ಣನ ಪರವಾಗಿಯೂ ಅನೇಕರು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಠಿಯಾಗುತ್ತಿದೆ. ಹೀಗಾಗಿ ಇಂಥವರ ಮೇಲೆ ಪೊಲೀಸರು ನಿಗಾ ವಹಿಸಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.
Unlock 4.0: ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್?; ನಾಳೆ ಅಧಿಕೃತ ಆದೇಶ
ಪೀರನವಾಡಿ ವೃತ್ತದಲ್ಲಿ ಇನ್ನೂ ಸಹ ಪೊಲೀಸ್ ಬಂದೋಬಸ್ತನ್ನು ಆಯೋಜನೆ ಮಾಡಲಾಗಿದೆ. ರಾತ್ರಿ, ಹಗಲು ಎರಡು ಸರದಿಯಲ್ಲಿ ಪೊಲೀಸರು ಭದ್ರತೆಯನ್ನು ಕೈಗೊಂಡಿದ್ದಾರೆ. ಇನ್ನೂ ಕೆಲದಿನಗಳವರೆಗೆ ಭದ್ರತೆಯನ್ನು ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರು ಹಾಗೂ ಕೆಎಸ್ಆರ್ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿನ ಕೆಲ ಕನ್ನಡ ಪರ ಹೋರಾಟಗಾರು ಇತ್ಯರ್ಥವಾದ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡುದ್ದಾರೆ. ಗುಂಪುಗಳನ್ನು ಪ್ರಚೋದನೆ ಮಾಡುವ ರೀತಿಯಲ್ಲಿ ಈ ಹೇಳಿಕೆಗಳು ಇವೆ. ಹೀಗಾಗಿ ಈ ಬಗ್ಗೆ ಬೆಳಗಾವಿ ಪೊಲೀಸರು ನಿಗಾ ವಹಿಸಬೇಕು ಎನ್ನುವ ಆಗ್ರಹವು ವ್ಯಕ್ತವಾಗಿದೆ. ಇದು ಪೀರನವಾಡಿ ಗ್ರಾಮದ ಜನರ ನೆಮ್ಮದಿಗೆ ಮತ್ತೆ ಭಂಗ ತರುವ ಹಾಗೆ ಆಗಬಾರದು. ಈ ನಿಟ್ಟಿನಲ್ಲಿ ಪೊಲೀಸರು ಮುಂಜಾಗೃತಾ ಕ್ರಮವನ್ನು ವಹಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ