ರಾಣೆಬೆನ್ನೂರು ಜನ ನೀವು ಎಂಥ ಪುಣ್ಯವಂತ್ರಪ್ಪ, ಯಾರು ಸಿಗ್ಲಿಲ್ಲ ಅಂತಾ ಶಂಕರ್​ನನ್ನು ಆರಿಸಿದ್ರಾ?; ರಮೇಶ್ ಕುಮಾರ್

ಈ ವಯಸ್ಸಲ್ಲಿ ಯಡಿಯೂರಪ್ಪನವರಿಗೆ ಇದು ಬೇಕಿತ್ತಾ? ಇದೆ ಧೈರ್ಯವನ್ನು ನರೆ ವಿಚಾರದಲ್ಲಿ ಮಾಡಿದ್ರೆ ಚರಿತ್ರೆಯ ಒಂದು ಭಾಗವಾಗ್ತಾ ಇದ್ರು. ಅನರ್ಹರರನ್ನು ಮನೆ, ಮಠ ಹೆಂಡ್ತಿ, ಮಕ್ಳನ್ನು ಬಿಟ್ಟಿರುವಂತೆ ಮಾಡಿದ್ರಿ. ಅವರಿಗೂ ನಮಗೂ ಸಂಬಂಧವಿಲ್ಲ ಅಂದೋರು ಅವರನ್ನೇ ಸೇರಿಸಿಕೊಂಡು ನಾನು ಸತ್ಯವಂತ ಅಂತಾ ಹೇಳ್ತಿರಿ ಎಂದು ಸಿಎಂ ಬಿಎಸ್​ವೈ ಅವರನ್ನು ರಮೇಶ್ ಕುಮಾರ್ ಟೀಕೆ ಮಾಡಿದರು.

HR Ramesh | news18-kannada
Updated:November 18, 2019, 3:10 PM IST
ರಾಣೆಬೆನ್ನೂರು ಜನ ನೀವು ಎಂಥ ಪುಣ್ಯವಂತ್ರಪ್ಪ, ಯಾರು ಸಿಗ್ಲಿಲ್ಲ ಅಂತಾ ಶಂಕರ್​ನನ್ನು ಆರಿಸಿದ್ರಾ?; ರಮೇಶ್ ಕುಮಾರ್
ಮಾಜಿ ಸ್ಪೀಕರ್ ರಮೇಶ್ ಕುಮಾರ್.
  • Share this:
ಹಾವೇರಿ: ಅನರ್ಹ ಶಾಸಕ ಆರ್. ಶಂಕರ್ ಕೆಜೆಪಿಯಿಂದ ಆರಿಸಿ ಬಂದರು, ಆನಂತರ ನಮ್ಮ ಪಕ್ಷಕ್ಕೆ ಬರುತ್ತೇನೆ ಅಂದು ಬಂದರು. ಬಸ್ ಹತ್ತಿ ಟವೆಲ್ ಹಾಕಿ ಸೀಟ್ ಹಿಡಿದು ಕುಳಿತ ಮೇಲೆ ಕುಳಿತ ಸೀಟು ನಂದೇ ಅಂತ ಹೇಳಿದ. ಶ್ರೀಮಾನ್ ಶಂಕರ್ ಅವರು ನಮ್ಮೊಂದಿಗೆ ವಿಲೀನಗೊಳ್ಳುತ್ತೇವೆ ಅಂದ್ರು ವಿಲೀನವಾದರು. ಹಳೇ ಮನೆ ಬಿಟ್ಟು ಹೊಸ ಮನೆಗೆ ಬಂದು ಸಂಸಾರಕ್ಕೆ ರೆಡಿಯಾದರು. ಇವರಿಗೆ ಕಾಂಗ್ರೆಸ್ ಶಾಸಕಾಂಗದಲ್ಲಿ ಶಾಸಕ ಸ್ಥಾನ ಕೊಟ್ಟೆವು.  ಬೆಂಗಳೂರಿಂದ ರಾಣೆಬೆನ್ನೂರಿಗೆ ಓಡಾಡೋರು ವಿಮಾನದಲ್ಲಿ ಬಾಂಬೆಗೆ ಹೋದರು. ತಾಳಿ ಕಟ್ಟಿದ ಮೇಲೆ ಲಗ್ನ ಆದಮೇಲೆ ಸಂಸಾರ ಮಾಡಲೇಬೇಕು. ಆದರೆ ಇವರು ಓಡಿಹೋದರು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕೆ ಮಾಡಿದರು.

ರಾಣೆಬೆನ್ನೂರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಮೇಶ್ ಕುಮಾರ್ ನಗುತ್ತಲೇ ಅನರ್ಹ ಶಾಸಕ ಆರ್. ಶಂಕರ್ ಕಾಲೆಳೆದರು. ರಾಣೆಬೆನ್ನೂರು ಜನ ನೀವು ಎಂಥ ಪುಣ್ಯವಂತ್ರಪ್ಪ, ಯಾರು ಸಿಗ್ಲಿಲ್ಲ ಅಂತಾ ಈತನನ್ನು ಕರ್ಕೊಂಡು ಬಂದ್ರಿ.  ಸಂವಿಧಾನದ ಪ್ರಾಥಮಿಕ ಜ್ಞಾನವಿಲ್ಲದ, ಅಕ್ಷರವಿಲ್ಲದವನನ್ನು ನೀವು ಆರಿಸಿ ಕಳಿಸಿದ್ದಿರಿ.  ಊರ ಮಂದಿ ಪಾಯಕಾನೆ ಮಾಡಿ ಹೋದರೆ ನಾವು ಸಫಾಯಿ ಮಾಡೋಕೆ ಹೋಗ್ತಿವಿ.  ನನಗೆ ಸಂವಿಧಾನ, ನನ್ನ ತಾಯಿ ಮುಖ್ಯ. ಹೀಗಾಗಿ ಈ ಭೂಮಿಗೆ ನಾನು ನಿಷ್ಠೆಯಿಂದ ಇದ್ದೇನೆ. ಹೀಗಾಗಿ ಆತ್ಮ ಸಾಕ್ಷಿಗೊಳಗಾಗಿ ಯಾವುದೇ ಪ್ರಲೋಭನೆಗೊಳಗಾಗದೇ ಅನರ್ಹರು ಅಂತಾ ತೀರ್ಮಾನ ಮಾಡಿದೆ. ಅನರ್ಹರು ಅಂತಾ ಅಷ್ಟೇ ಅಲ್ಲ ಪುನಃ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ ಅಂತಾ ಸುಪ್ರೀಂಕೋರ್ಟ್​ಗೆ ಹೋದೆ. ಆದರೆ ಸುಪ್ರೀಂಕೋರ್ಟ್ ಅವರು ಸ್ಪರ್ಧೆ ಮಾಡಬಹುದು ಅಂತಾ ಹೇಳಿತು. ಸುಪ್ರೀಂಕೋರ್ಟ್ ಬಗ್ಗೆ ಗೌರವ ಇರೋದ್ರಿಂದ ಸುಮ್ಮನಾದೆ. ಆರ್. ಶಂಕರ್​ ವ್ಯವಹಾರ ಈ ಬಾರಿ ನಡೆಯೊದಿಲ್ಲ ಅಂತಾ ಗೊತ್ತಾಗಿದೆ. ಹೀಗಾಗಿ ಬೇರೆಯವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಇದ್ದಕ್ಕಿದ್ದಂತೆ ಸಹಾಯ ಮಾಡುತ್ತೇನೆ ಎಂದು ಬಂದರೆ ಸಹಕಾರ ನೀಡಲು ಸಾಧ್ಯವಿಲ್ಲ; ಜೆಡಿಎಸ್​ ಬೆಂಬಲ ತಿರಸ್ಕರಿಸಿದ ಬಿಎಸ್​ವೈ

ಯಡಿಯೂರಪ್ಪ ಅವರು ಮೊದಲು ಅನರ್ಹರಿಗು ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ವಯಸ್ಸಾದ ಮನುಷ್ಯ ಅಂತಾ ಅವರ ಮಾತನ್ನು ನಂಬಿದ್ವಿ. ಅದಾದ ಮೇಲೆ ನಿಮ್ಮ ಪಕ್ಷದ ಸಭೆಯಲ್ಲೇ ಅವರೇ ಅದರ ಬಗ್ಗೆ ಮಾತಾಡಿದ್ರು. ಯಾರನ್ನ ನಾವು ಅನರ್ಹರು ಅಂತಾ ತಿಳಿದಿದ್ವೊ ಅಂತಹವರನ್ನ ವಿಜೃಂಭಣೆಯಿಂದ ಸ್ವಾಗತ ಮಾಡಿದ್ರು. ಈ ವಯಸ್ಸಲ್ಲಿ ಯಡಿಯೂರಪ್ಪನವರಿಗೆ ಇದು ಬೇಕಿತ್ತಾ? ಇದೆ ಧೈರ್ಯವನ್ನು ನರೆ ವಿಚಾರದಲ್ಲಿ ಮಾಡಿದ್ರೆ ಚರಿತ್ರೆಯ ಒಂದು ಭಾಗವಾಗ್ತಾ ಇದ್ರು. ಅನರ್ಹರರನ್ನು ಮನೆ, ಮಠ ಹೆಂಡ್ತಿ, ಮಕ್ಳನ್ನು ಬಿಟ್ಟಿರುವಂತೆ ಮಾಡಿದ್ರಿ. ಅವರಿಗೂ ನಮಗೂ ಸಂಬಂಧವಿಲ್ಲ ಅಂದೋರು ಅವರನ್ನೇ ಸೇರಿಸಿಕೊಂಡು ನಾನು ಸತ್ಯವಂತ ಅಂತಾ ಹೇಳ್ತಿರಿ ಎಂದು ಸಿಎಂ ಬಿಎಸ್​ವೈ ಅವರನ್ನು ರಮೇಶ್ ಕುಮಾರ್ ಟೀಕೆ ಮಾಡಿದರು.

First published: November 18, 2019, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading