ನಾಳೆ ಕೆಆರ್​ಪೇಟೆ ಅಧ್ಯಕ್ಷಗಾದಿಗೆ ಚುನಾವಣೆ; ಅಧಿಕಾರ ಗದ್ದುಗೆಗಾಗಿ ಸಚಿವ ನಾರಾಯಣಗೌಡ ರಣತಂತ್ರ

ಪಟ್ಟಣ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗಾಗಿ  ಕಸರತ್ತು ನಡೆಸಿದೆ. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್​ ವಿಪ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸಚಿವ ನಾರಾಯಣಗೌಡ

ಸಚಿವ ನಾರಾಯಣಗೌಡ

  • Share this:
ಮಂಡ್ಯ (ಅ.30): ಜಿಲ್ಲೆಯ ಕೆ.ಆರ್.ಪೇಟೆ ಪುರಸಭಾ ಅಧ್ಯಕ್ಷಗಾದಿಗಾಗಿ ಮತ್ತೆ ರಾಜಕೀಯ ಗುದ್ದಾಟ ಶುರು ಆಗಿದೆ. ಈ ಬಾರಿ  ಕೆ.ಆರ್.ಪೇಟೆ ಪಟ್ಟಣ ಪುರಸಭೆಯ ಅಧಿಕಾರ ಹಿಡಿಯಲು ಸಚಿವ ನಾರಾಯಣಗೌಡ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಜೆಡಿಎಸ್​ನಿಂದ ಗೆದ್ದ8 ಜನ ಪುರಸಭಾ ಸದಸ್ಯರನ್ನು ಬಿಜೆಪಿಗೆ ಕರೆ ತಂದಿದ್ದಾರೆ.  ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್​ ವಿಪ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ನಡೆದ   23 ಸದಸ್ಯ ಬಲ  ಪುರಸಭಾ ಚುನಾವಣೆಯಲ್ಲಿ ಜೆಡಿಎಸ್​ 11, ಕಾಂಗ್ರೆಸ್​ 10, ಒಬ್ಬ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪುರಸಭೆ ಸದಸ್ಯರಿ ಗೆ ಯಾವುದೇ ಅಧಿಕಾರ ಸಿಕ್ಕಿರಲಿಲ್ಲ.

 ಜೆಡಿಎಸ್​ ತೊರೆದ ನಾರಾಯಣಗೌಡ ತಮ್ಮೊಟ್ಟಿಗೆ 8 ಜನ ಪುರಸಭಾ ಸದಸ್ಯರನ್ನು ಬಿಜೆಪಿಗೆ ಕರೆತಂದರು. ಜೊತೆಗೆ  ಸರ್ಕಾರ ಪ್ರಕಟಿಸಿರುವ ಮೀಸಲಾತಿ ಕೂಡ ಸಚಿವರಿಗೆ ವರದಾನವಾಯಿತು. ಅಲ್ಲದೇ ಅಧ್ಯಕ್ಷ ಸ್ಥಾನ ಎಸ್​ಟಿಗೆ ಮೀಸಲಾಗಿದ್ದು, ಬಿಜೆಪಿ ನಟರಾಜು ಅಥವಾ ಜೆಡಿಎಸ್​ನಿಂದ ಗೆದ್ದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮಹದೇವಮ್ಮ ಅವರಿಗೆ ಅಧಿಕಾರ ಸಿಗುವುದು ಬಹುತೇಕ ಖಚಿತವಾಗಿದೆ. 

ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ  ಪುರಸಭೆ ಅಧಿಕಾರ ಈ ಬಾರಿ ಕೈ ತಪ್ಪುವ  ಸಾಧ್ಯತೆ ಎಂಬ ಮಾತು ಕೇಳಿಬರುತ್ತಿದೆ.  ಸಚಿವ ನಾರಾಯಣಗೌಡ ಕೂಡ ಇದಕ್ಕಾಗಿ ರಣತಂತ್ರ ರೂಪಿಸಿದ್ದಾರೆ. ಮೀಸಲಾತಿ ಬಳಸಿಕೊಂಡು ಜೆಡಿಎಸ್​ನಿಂದ ಬಂಧ ಮಹದೇವಮ್ಮನವರನ್ನು ಅಧಿಕಾರ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಪ್ರತಿತಂತ್ರ  ರೂಪಿಸಿರುವ ಕಾಂಗ್ರೆಸ್​ ಬಿಜೆಪಿ ಸದಸ್ಯ ನಟರಾಜನನ್ನು ಎತ್ತಿ ಕಟ್ಟಿದೆ. ಅಲ್ಲದೇ ಮತದಾನದಲ್ಲಿ ಕಾಂಗ್ರೆಸ್​ ನಿಮಗೆ ಬೆಂಬಲ ನೀಡುತ್ತದೆ. ಈ ಮೂಲಕ ಅಧ್ಯಕ್ಷ ಪಟ್ಟಕ್ಕೆ ಏರಬಹುದು ಎಂದು ಎಂದು ಆಮಿಷ ಒಡ್ಡಿದೆ. ಅಷ್ಟೇ ಅಲ್ಲದೇ  ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕೈ ಪಕ್ಷದ ಸದಸ್ಯರಿಗೆ ಚುನಾವಣೆಯಲ್ಲಿ  ಬಿಜೆಪಿ ಸದಸ್ಯ ನಟರಾಜುಗೆ ಮತ ಹಾಕಿವಂತೆ ವಿಪ್ ಜಾರಿಗೊಳಿಸಿದೆ. ಕೈಗೆ ಸಿಗದ ಸದಸ್ಯರ ಮನೆ ಬಾಗಿಲಿಗೆ ಪಕ್ಷದ ವಿಪ್ ಅಂಟಿಸಿ ಸಚಿವರ ಮುಖಭಂಗಕ್ಕೆ ಪ್ರತಿತಂತ್ರ  ಹೆಣೆದಿದೆ.

ಇದನ್ನು ಓದಿ: 20 ವರ್ಷಗಳ ಬಳಿಕ ಆನೇಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಈ ಆರೋಪವನ್ನು ಬಿಜೆಪಿ ಪಕ್ಷದ ಏಕೈಕ ಸದಸ್ಯ  ನಟರಾಜು ಅಲ್ಲಗೆಳೆದಿದ್ದು ತಾನು ಪಕ್ಷದಲ್ಲಿಯೇ ಇದ್ದೇನೆ. ನನಗೆ ಕಾಂಗ್ರೆಸ್​​ ಬೆಂಬಲ ಬೇಡ. ಏನೇ ಆದರೂ ಪಕ್ಷದ ಆದೇಶ ಪಾಲಿಸುತ್ತೇನೆ  ಎಂದಿದ್ದಾರೆ.

ಇನ್ನು ಜೆಡಿಎಸ್ ಕೂಡ ಬಿಜೆಪಿಗೆ ಅಧಿಕಾರ ತಪ್ಪಿಸಲು ಕಸರತ್ತು ನಡೆಸಿದೆ.  ಪಕ್ಷದಿಂದ  ಗೆದ್ದಿದ್ದ 11 ಜನರಲ್ಲಿ 8 ಜನ ಬಿಜೆಪಿಗೆ ಹೋಗಿರುವುದು ಜೆಡಿಎಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ  ಮತ್ತೆ ಆ ಸದಸ್ಯರನ್ನು ವಾಪಸ್ಸು ಕರೆತರಲು ಇದೀಗ ಮತದಾನ ದ ವೇಳೆ ಸದಸ್ಯರಿಗೆ ವಿಪ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಸಚಿವ ನಾರಾಯಣಗೌಡರ ಜೊತೆ ಗುರ್ತಿಸಿಕೊಂಡಿರೋ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ ಮಹದೇವಮ್ಮರನ್ನು ಅಭ್ಯರ್ಥಿ ಮಾಡಿ ಗೆಲ್ಲಿಸುವ ಭರವಸೆ ನೀಡಿದ್ದು, ಪಕ್ಷಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಗಾಯತ್ರಿ ಸ್ಪರ್ಧಿ ಮಾಡಲಿದ್ದಾರೆ. ಪಕ್ಷದಿಂದ ಗೆದ್ದಿರುವ ಈ ಇಬ್ಬರನ್ನು ಗೆಲ್ಲಿಸಿಕೊಂಡು ಅಸ್ತಿತ್ವ  ಪಕ್ಷದ ಉಳಿಸಿಕೊಳ್ಳಲು  ಜೆಡಿಎಸ್ ಕೂಡ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.  ವಿಪ್ ಉಲ್ಲಂಘನೆ ಮಾಡಿದರೆ ಜೆಡಿಎಸ್​ನಿಂದ ಗೆದ್ದವರ ಸದಸ್ಯತ್ವ ಆ ಪಕ್ಷಾಂತರಿಗಳ  ಅನರ್ಹತೆಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಹೇರಿ ಸದಸ್ಯತ್ವ ಅನರ್ಹತೆಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಹಿನ್ನಲೆ ನಾಳೆ ಸೆಕ್ಷನ್ 144ನ್ನು ಜಾರಿ ಗೊಳಿಸಲಾಗಿದ್ದು, ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
Published by:Seema R
First published: