ನಾರಾಯಣಗೌಡ-ವಿಜಯೇಂದ್ರ ಜೋಡೆತ್ತುಗಳು; ಕೆ.ಆರ್.ಪೇಟೆ ಜನ ಕೈ ಬಿಡಬೇಡಿ; ನಳಿನ್​ಕುಮಾರ್​​ ಕಟೀಲ್​

ನಾರಾಯಣಗೌಡರು ಹಣ, ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಅವರದ್ದೇ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜೀನಾಮೆ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯನ್ನ ರಾಮ ರಾಜ್ಯ ಮಾಡಲು ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪ ಜೊತೆ ಸೇರಿ ನಾರಾಯಣಗೌಡ ರಾಮ ರಾಜ್ಯ ಮಾಡುತ್ತಾರೆ.

Latha CG | news18-kannada
Updated:November 23, 2019, 4:50 PM IST
ನಾರಾಯಣಗೌಡ-ವಿಜಯೇಂದ್ರ ಜೋಡೆತ್ತುಗಳು; ಕೆ.ಆರ್.ಪೇಟೆ ಜನ ಕೈ ಬಿಡಬೇಡಿ; ನಳಿನ್​ಕುಮಾರ್​​ ಕಟೀಲ್​
ನಾರಾಯಣಗೌಡ-ವಿಜಯೇಂದ್ರ
  • Share this:
ಮಂಡ್ಯ,(ನ.23): ಉಪಚುನಾವಣಾ ಕಣದಲ್ಲಿ ಕೆ.ಆರ್​.ಪೇಟೆ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಪ್ರತಿಷ್ಠೆಯ ಕಣವಾಗಿರುವ ಕೆ.ಆರ್​.ಪೇಟೆಯಲ್ಲಿ ಕಾಂಗ್ರೆಸ್​​ ವಿರುದ್ಧ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸ್ಪರ್ಧೆಗಿಳಿದಿದ್ದಾರೆ. ಚುನಾವಣಾ ಪ್ರಚಾರವೂ ಭರದಿಂದ ಸಾಗಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​​ ಕಟೀಲ್​​ ಕೆ.ಆರ್​. ಪೇಟೆ ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮತ್ತು ಬಿಎಸ್​ವೈ ಪುತ್ರ ವಿಜಯೇಂದ್ರರನ್ನು ಜೋಡೆತ್ತಿಗೆ ಹೋಲಿಸಿ ಹೊಗಳಿದ್ದಾರೆ. 

"ನಾರಾಯಣಗೌಡ ಮತ್ತು ವಿಜಯೇಂದ್ರ ಜೋಡೆತ್ತುಗಳು. ಈ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುತ್ತದೆ. ಜೋಡೆತ್ತುಗಳನ್ನು ಕೆ.ಆರ್.ಪೇಟೆ ಜನ ಕೈ ಬಿಡಬೇಡಿ ," ಎಂದು ಕಟೀಲ್​​ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಮೇಶ್​​ ಜಾರಕಿಹೊಳಿಗೆ ಸರ್ಕಾರ ಬೀಳಿಸುವ ಶಕ್ತಿ ಇದೆ, ಆದ್ರೆ ಹಳ್ಳಿಗಳಿಗೆ ಬಸ್​ ಬಿಡಿಸುವ ಶಕ್ತಿ ಇಲ್ಲ; ಸತೀಶ್​ ಜಾರಕಿಹೊಳಿ ವ್ಯಂಗ್ಯ

ಇದೇ ವೇಳೆ, ಸಿಎಂ ಬಿ.ಎಸ್​.ಯಡಿಯೂರಪ್ಪನವರನ್ನು ನಳಿನ್​ಕುಮಾರ್ ಕಟೀಲ್​ ಹಾಡಿ ಹೊಗಳಿದ್ದಾರೆ. "ಕೇಳಿದ್ದನ್ನು ಕೊಡುವ ಕಾಮಧೇನು ಯಡಿಯೂರಪ್ಪ. ಜನರಿಗೆ  ಭಾಗ್ಯಲಕ್ಷ್ಮಿಯಂಥ ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆ ಜೊತೆಗೆ, ವಿದ್ಯಾರ್ಥಿನಿಯರಿಗೆ ಸೈಕಲ್, ವೃದ್ಧರಿಗೆ, ವಿಧವೆಯರಿಗೆ ಮಾಸಾಶನ ಕೊಟ್ಟಿದ್ದು ಯಡಿಯೂರಪ್ಪ," ಎಂದು ಅವರು ಜಾರಿಗೆ ತಂದ ಯೋಜನೆಗಳನ್ನು ಸ್ಮರಿಸಿದರು.

nalin kumar kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.


"ಕೆ.ಆರ್.ಪೇಟೆ ಒಂದು ಪುಣ್ಯ ಭೂಮಿ. ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಇದು. ರಾಜ್ಯದ ಸಮರ್ಥ ನಾಯಕನನ್ನು, ರಾಜ್ಯವನ್ನು ದೇಶದಲ್ಲೇ ಮಾದರಿ ಮಾಡಲು ಪಣ ತೊಟ್ಟಿರುವ  ಬಸವಣ್ಣನ ಅನುಯಾಯಿ ಯಡಿಯೂರಪ್ಪರನ್ನ ಕೊಟ್ಟ ನೆಲ ಇದು. ನಾಡಿನ ಸ್ವಾಭಿಮಾನಕ್ಕಾಗಿ ಅಧಿಕಾರ ತ್ಯಾಗ ಮಾಡಿದ ನಾರಾಯಣಗೌಡರ ಭೂಮಿ ಇದು. ಯಡಿಯೂರಪ್ಪ ಅವರ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿಗೆ ಮತ ನೀಡಿ. ನಿಮ್ಮ ಪುಣ್ಯ ಭೂಮಿಯ ಸ್ವಾಭಿಮಾನದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ. ಗೂಂಡಾಗಿರಿ ರಾಜಕಾರಣದ ಅಂತ್ಯಕ್ಕಾಗಿ ಬಿಜೆಪಿಗೆ ಮತ ನೀಡಿ," ಎಂದು ಮನವಿ ಮಾಡಿದರು.

ಸತ್ಯವಾಗಿಯೂ ವಿಶ್ವಾಸಮತ ಯಾಚನೆ ವೇಳೆ ಬಿಜೆಪಿ ಸೋಲಿಸಿ, ಸೇನೆ, ಎನ್​ಸಿಪಿಯೊಂದಿಗೆ ಸರ್ಕಾರ ರಚಿಸುತ್ತೇವೆ; ಅಹಮದ್ ಪಟೇಲ್"ನಾರಾಯಣಗೌಡರು ಹಣ, ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಅವರದ್ದೇ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜೀನಾಮೆ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯನ್ನ ರಾಮ ರಾಜ್ಯ ಮಾಡಲು ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪ ಜೊತೆ ಸೇರಿ ನಾರಾಯಣಗೌಡ ರಾಮ ರಾಜ್ಯ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದೆ.  ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ," ಎಂದರು.

First published: November 23, 2019, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading