ವಿಧಾನಸಭಾ ಉಪಚುನಾವಣೆ: ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಕೆ.ಆರ್.ಪೇಟೆಯಲ್ಲಿ ಸಿದ್ದರಾಮಯ್ಯ ಪ್ರಚಾರ

ಬಿಜೆಪಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಪರವಾಗಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ಇಂದಿನಿಂದ ತಾಲೂಕು ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರವನ್ನು ನಡೆಸಲಿದ್ದಾರೆ

G Hareeshkumar | news18-kannada
Updated:November 21, 2019, 9:46 AM IST
ವಿಧಾನಸಭಾ ಉಪಚುನಾವಣೆ: ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಕೆ.ಆರ್.ಪೇಟೆಯಲ್ಲಿ ಸಿದ್ದರಾಮಯ್ಯ ಪ್ರಚಾರ
ಸಿದ್ದರಾಮಯ್ಯ
  • Share this:
ಮಂಡ್ಯ(ನ.21): ವಿಧಾನಸಭಾ ಉಪ ಚುನಾವಣಾ ಕಾವು ಜೋರಾಗುತ್ತಿದೆ. ಕೆ ಆರ್​ ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಚಂದ್ರಶೇಖರ್ ಪರ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಕನಕದಾಸರ ವಿಚಾರದಲ್ಲಿ ಬಿಜೆಪಿ ವಿವಾದಕ್ಕೆ ಸಿಲುಕಿದೆ. ಇದನ್ನೆ ಮುಂದಿಟ್ಟುಕೊಂಡು ಪ್ರಚಾರ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. 

ಇತ್ತಿಚೇಗಷ್ಟೆ ಕನಕದಾಸರ ವಿಚಾರದಲ್ಲಿ ಬಿಜೆಪಿ ವಿವಾದಕ್ಕೆ ಸಿಲುಕಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಮುಗಿಬೀಳಲು ಸಿದ್ದರಾಮಯ್ಯ ಸಿದ್ದತೆ ನಡೆಸಿದ್ದಾರೆ. ಸಿದ್ದರಾಮಯ್ಯ ಈ ಪ್ರಯೋಗಕ್ಕೆ ಬಿಜೆಪಿ ತಲೆಕೆಡಿಸಿಕೊಂಡಿದೆ. ಹಿರಿಕಳಲೇ, ಕಿಕ್ಕೇರಿ, ಮಂದಗೆರೆ, ಬೀರುವಳ್ಳಿ, ಅಕ್ಕಿ ಹೆಬ್ಬಾಳು, ಆಲಂಬಾಡಿ ಕಾವಲ್ ಮತ್ತು ಗಂಜಿಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ

ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರ್ ವೃತ್ತದಿಂದ ಕನಕದಾಸರ ಹೆಸರು ಕೈಬಿಟ್ಟಿರುವುದು ಈ ವಿವಾದಕ್ಕೆ ಮೂಲ ಕಾರಣ. 20 ವರ್ಷಗಳ ಹಿಂದೆ ಕನಕ ಯುವ ಸೇನೆಯ ಯುವಕರು ಹುಳಿಯಾರ್​ ಸರ್ಕಲ್‍ಗೆ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿದ್ದರು. ಕನಕದಾಸ ಸರ್ಕಲ್​ ಎಂದು ಮರುನಾಮಕರಣ ಮಾಡಲು ಗ್ರಾಮಪಂಚಾಯಿತಿ ಸಭೆಯಲ್ಲಿ ಒಪ್ಪಿಗೆ ಕೂಡ ಸಿಕ್ಕಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಬಿ.ಕೆ. ಹರಿಪ್ರಸಾದ್ ಔಟ್; ಸಿದ್ದರಾಮಯ್ಯಗೆ ಮೇಲುಗೈ?

ಇತ್ತೀಚೆಗೆ ಹೈವೇ ಕಾಮಗಾರಿ ಹಿನ್ನೆಲೆಯಲ್ಲಿ ಈ ಬೋರ್ಡ್​ಅನ್ನು ತೆಗೆಯಲಾಗಿತ್ತು. ಈ ಕಾಮಾಗಾರಿ ಪೂರ್ಣಗೊಂಡಿದ್ದು, ಸರ್ಕಲ್​ಗೆ ಮತ್ತೆ ಕನಕದಾಸರ ಹೆಸರನ್ನು ಹಾಕಲು ಮುಂದಾದಾಗ ಲಿಂಗಾಯತ ಸಮುದಾದಯದವರು ಡಾ. ಶಿವಕುಮಾರಸ್ವಾಮಿ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಭಾರೀ ಗಲಭೆ ಕೂಡ ಉಂಟಾಗಿತ್ತು. ಈ ವೇಳೆ ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯನ್ನು‌ ಮಾಧುಸ್ವಾಮಿ ನಿಂದಿಸಿದ್ದರು. ಅಲ್ಲದೆ, ಕ್ಷಮೆಯಾಚಿಸುವ ಮಾತೇ ಇಲ್ಲ ಎಂದಿದ್ದರು.

ಸಕ್ಕರೆನಾಡಲ್ಲಿಂದು ರಂಗೇರಲಿದೆ ಉಪಚುನಾವಣೆ ಅಖಾಡ 

ಬಿಜೆಪಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಪರವಾಗಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ಇಂದಿನಿಂದ ತಾಲೂಕು ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರವನ್ನು ನಡೆಸಲಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ರೇವಣ್ಣ ಸೇರಿ ಜಿಲ್ಲೆಯ ಶಾಸಕರು ತಾಲೂಕಿನಲ್ಲಿ ಪ್ರಚಾರ ಮಾಡುವರು.ಮಾಧುಸ್ವಾಮಿ ಪ್ರಚಾರಕ್ಕೆ ಬಂದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕುರುಬ ಸಮುದಾಯದ ನಾಯಕರು ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಕೆಆರ್‌ಪೇಟೆ ಉಪಚುನಾವಣೆ ಉಸ್ತುವಾರಿಯನ್ನು ಸಚಿವ ಮಾಧುಸ್ವಾಮಿಯವರನ್ನು ತೆಗೆದು ಅವರ ಬದಲಿಗೆ ಡಿಸಿಎಂ ಅಶ್ವತ್ಥ್‌ನಾರಾಯಣ್‌ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ.

ಇದನ್ನೂ ಓದಿ : ನ. 30ರ ನಂತರ ಕನ್ನಡ ನಾಮಫಲಕ ಇಲ್ಲದಿದ್ದರೆ ಲೈಸೆನ್ಸ್ ರದ್ದು: 13 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟೀಸ್

ಕುರುಬ ಸಮುದಾಯದ ಮತಗಳ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಮುಂದಾಗಿದೆ. ಸಚಿವ ಮಾಧುಸ್ವಾಮಿಯಿಂದ ಕುರುಬ ಮತಗಳ ಮೇಲೆ ಪ್ರಭಾವ ಬೀರಬಾರದು ಎಂದು ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.

First published: November 21, 2019, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading