ಅನರ್ಹ ಶಾಸಕರಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರ ಮನೆ ಬಾಗಿಲಿಗೆ ಹಾಕಿದ ಕೆ.ಆರ್.ಪೇಟೆಯ ಹೆಮ್ಮನಹಳ್ಳಿ ಗ್ರಾಮಸ್ಥರು

ಊರಿನಲ್ಲಿ ಅಶಾಂತಿ ಮತ್ತು ಪ್ರಚೋದನಾಕಾರಿ ಪೋಸ್ಟರ್​ ಮನೆ ಬಾಗಿಲಿಗೆ ಹಾಕಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರು‌ ಮತ್ತು ಚುನಾವಣಾಧಿಕಾರಿಗಳು ಮನೆಯ ಮಾಲೀಕರು ಮತ್ತು ಜೆಡಿಎಸ್ ಮುಖಂಡರಿಗೆ ಕರ್ನಾಟಕ ರಾಜ್ಯ ಸಾರ್ವಜನಿಕ ಹಿತಾದೃಷ್ಟಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದ್ದಾರೆ.

HR Ramesh | news18-kannada
Updated:December 4, 2019, 7:30 AM IST
ಅನರ್ಹ ಶಾಸಕರಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರ ಮನೆ ಬಾಗಿಲಿಗೆ ಹಾಕಿದ ಕೆ.ಆರ್.ಪೇಟೆಯ ಹೆಮ್ಮನಹಳ್ಳಿ ಗ್ರಾಮಸ್ಥರು
ಹೆಮ್ಮನಹಳ್ಳಿ ಗ್ರಾಮಸ್ಥರು ಅಂಟಿಸಿರುವ ಭಿತ್ತಿಪತ್ರ
  • Share this:
ಕೆ.ಆರ್.ಪೇಟೆ:  15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯ ಬಹಿರಂಗ ಪ್ರಚಾರ ನೆನ್ನೆಗೆ ಅಂತ್ಯಗೊಂಡಿದೆ. ಮತದಾನಕ್ಕೆ ಇನ್ನು ಕೇವಲ ೨೪ ಗಂಟೆ ಬಾಕಿ ಇದ್ದು, ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ ಇದೆ. ಅದರಂತೆ ಅಭ್ಯರ್ಥಿ ಮತದಾರನ ಮನೆ ಮನೆಗೂ ಹೋಗಿ ಮತ ಯಾಚನೆ ಮಾಡಬಹುದಾಗಿದೆ. ಆದರೆ ಕೆ.ಆರ್.ಪೇಟೆಯ ಒಂದು ಹಳ್ಳಿಯಲ್ಲಿ  ಅನರ್ಹ ಶಾಸಕರಿಗೆ ಪ್ರವೇಶವಿಲ್ಲ ಎಂಬ ಚೀಟಿಯನ್ನು ಮನೆ ಬಾಗಿಲಿಗೆ ಹಾಕುವ ಮೂಲಕ  ಬಹಿಷ್ಕಾರ ವಿಧಿಸಿದ್ದಾರೆ.

ಕೆ.ಆರ್.ಪೇಟೆ ಹೆಮ್ಮನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಅನರ್ಹ ಶಾಸಕರ ವಿರುದ್ದ ಭಿತ್ತಿಪತ್ರ ಚಳವಳಿ ಆರಂಭಿಸಿದ್ದಾರೆ. ಮನೆ ಮನೆ ಪ್ರಚಾರಕ್ಕೆ ಬರುವ ಬಿಜೆಪಿ ಅಭ್ಯರ್ಥಿ ಮತ್ತು ಕಾರ್ಯಕರ್ತರಿಗೆ ಮುಜಗರ ಉಂಟು ಮಾಡಲು ಹೀಗೆ ಮಾಡಲಾಗಿದೆ.

ಕೆ.ಆರ್‌.ಪೇಟೆ ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಬಹುತೇಕ ಜೆಡಿಎಸ್ ಪ್ರಾಬಲ್ಯವಿರುವ ಹಳ್ಳಿ. ಗ್ರಾಮದ ಪ್ರತಿಯೊಂದು ಮನೆ ಬಾಗಿಲಿಗೆ ಅನರ್ಹ ಶಾಸಕನಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂಬ ಪತ್ರವನ್ನು ಅಂಟಿಸಿದ್ದಾರೆ. ಅಲ್ಲದೇ, ಕರಪತ್ರದಲ್ಲಿ, ಸರ್ವೋಚ್ಚ ನ್ಯಾಯಾಲಯ ಅನರ್ಹಗೊಳಿಸಿರುವ ಶಾಸಕ ಎಂದು ಬರೆಯಲಾಗಿದೆ.

ಇದನ್ನು ಓದಿ: ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆ ಮನೆಮನೆ ಪ್ರಚಾರ; ಮತದಾನಕ್ಕೆ ಒಂದೂವರೆ ದಿನ ಬಾಕಿ

ಊರಿನಲ್ಲಿ ಅಶಾಂತಿ ಮತ್ತು ಪ್ರಚೋದನಾಕಾರಿ ಪೋಸ್ಟರ್​ ಮನೆ ಬಾಗಿಲಿಗೆ ಹಾಕಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರು‌ ಮತ್ತು ಚುನಾವಣಾಧಿಕಾರಿಗಳು ಮನೆಯ ಮಾಲೀಕರು ಮತ್ತು ಜೆಡಿಎಸ್ ಮುಖಂಡರಿಗೆ ಕರ್ನಾಟಕ ರಾಜ್ಯ ಸಾರ್ವಜನಿಕ ಹಿತಾದೃಷ್ಟಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಪೋಸ್ಟರ್ ಚಳವಳಿಯಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲಿದೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿಲ್ಲ‌. ಆ ಕಾರಣಕ್ಕೆ ನೊಟೀಸ್ ಜಾರಿ‌ಮಾಡಿ, ಕ್ರಮ ಜರುಗಿಸಲಾಗಿದೆ  ಎಂದು ಮಂಡ್ಯ ಎಸ್ಪಿ ಪರಶುರಾಮ್ ಹೇಳಿದ್ದಾರೆ.

 
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ