ಕೆಆರ್ ಪೇಟೆ ಶಾಸಕ ನಾರಾಯಣಗೌಡ ರಾಜೀನಾಮೆ ಹಿನ್ನೆಲೆ, ಹೊಸ ಜೆಡಿಎಸ್ ನಾಯಕನಿಗಾಗಿ ಶೋಧ

ನಾರಾಯಣಗೌಡ ರಾಜೀನಾಮೆ ನಂತರ ಕೆಆರ್ ಪೇಟೆಯ ಜೆಡಿಎಸ್ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಪರ್ಯಾಯ ನಾಯಕನಿಗಾಗಿ ಶೋಧ ನಡೆಸಲು ನಿರ್ಧರಿಸಿದ್ಧಾರೆ.

news18
Updated:July 7, 2019, 7:34 PM IST
ಕೆಆರ್ ಪೇಟೆ ಶಾಸಕ ನಾರಾಯಣಗೌಡ ರಾಜೀನಾಮೆ ಹಿನ್ನೆಲೆ, ಹೊಸ ಜೆಡಿಎಸ್ ನಾಯಕನಿಗಾಗಿ ಶೋಧ
ಜೆಡಿಎಸ್​ ಶಾಸಕ ನಾರಾಯಣಗೌಡ
  • News18
  • Last Updated: July 7, 2019, 7:34 PM IST
  • Share this:
ಮಂಡ್ಯ(ಜುಲೈ 07):  ರಾಜ್ಯ ರಾಜಕೀಯದಲ್ಲಿ ನಿನ್ನೆ‌ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರಲ್ಲಿ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕ ನಾರಾಯಣಗೌಡ ಕೂಡ ಒಬ್ಬರು. ಕೆಆರ್ ಪೇಟೆ ಶಾಸಕರ ಈ ನಡೆಯಿಂದಾಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಆಘಾತಕೊಳಗಾಗಿದ್ದು, ಕಾರ್ಯಕರ್ತರಲ್ಲಿ ನೀರವ ಮೌನ‌ ಆವರಿಸಿದೆ. ಶಾಸಕರ ವರ್ತನೆಗೆ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡಿ ದ್ರೋಹ ಬಗೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಶಾಸಕ ಸ್ಥಾನಕ್ಜೆ ರಾಜೀನಾಮೆ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಕೆ.ಆರ್. ಪೇಟೆಯಲ್ಲಿಂದು‌ ಕ್ಷೇತ್ರದ ಜೆಡಿಎಸ್ ಮುಖಂಡರು ಸಭೆ ನಡೆಸಿ ಚರ್ಚಿಸಿದರು. ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ಯಾರೂ ಧೃತಿಗೆಡಬಾರದು. ಕ್ಷೇತ್ರದಲ್ಲಿ ಮುಂದೆ ಜೆಡಿಎಸ್ ಟಿಕೆಟ್ ಯಾರಿಗೆ ಕೊಡಬೇಕೆಂದು ತೀರ್ಮಾನ ಮಾಡೋಣ. ಈ ವಿಚಾರದಲ್ಲಿ ವರಿಷ್ಠರ ಸಲಹೆ ಪಡೆಯೋಣ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ವೇಳೆ ಕೆಲ ಸ್ಥಳೀಯ ಮುಖಂಡರು ತಾವು ಟಿಕೆಟ್ ಆಕಾಂಕ್ಷಿಗಳಾಗಿರುವುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿರು. ಈ ಸಭೆಯಲ್ಲಿ ಕ್ಷೇತ್ರದ ಜೆಡಿಎಸ್ ಮುಖಂಡರಾದ ಕೃಷ್ಣೇಗೌಡ, ಸುಬ್ಬೇಗೌಡ, ರಾಜಾಹುಲಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ರೆಬೆಲ್​ ಶಾಸಕರಿಗೆ ಹೆಣೆಯಲಾಗ್ತಿದೆಯಾ ಮಹಾ ಬಲೆ?; ತಮಿಳುನಾಡು ಮಾದರಿ ಬಾಣ ಪ್ರಯೋಗಿಸಲು ಕಾಂಗ್ರೆಸ್ ಚಿಂತನೆ?

ನಿತ್ರಾಣಗೊಂಡಿರುವ ಶಾಸಕರ ಮುದ್ದಿನ ನಾಯಿ:

ನಾರಾಯಣಗೌಡ ರಾಜೀನಾಮೆ ನೀಡುತ್ತಿದ್ದಂತೆ ಕೆ.ಆರ್. ಪೇಟೆ ಪಟ್ಟಣದಲ್ಲಿರುವ ಶಾಸಕರ ಮನೆ ಮತ್ತು ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದ್ರೆ ಶಾಸಕರ ಮನೆಯಲ್ಲಿ ಅವರ ಸಾಕು ನಾಯಿ ಹೊರತುಪಡಿಸಿ ಯಾರೂ ಇರಲಿಲ್ಲ. ನಾರಾಯಣ ಗೌಡರು ಪ್ರೀತಿಯಿಂದ ಸಾಕಿದ್ದ ನಾಯಿ ಅನಾಥವಾಗಿ ಕೂತಿತ್ತು. ಕಳೆದ ಮೂರು ದಿನದಿಂದ ಅನ್ನಾಹಾರ ಇಲ್ಲದೆ ನಿಶಕ್ತವಾಗಿ ತೆವಳುತ್ತಿರುವ ದೃಶ್ಯ ಕರಳು ಹಿಂಡುವಂತಿತ್ತು. ಪ್ರೀತಿಯ ಮಾಲೀಕನಿಲ್ಲದೆ ಅನ್ನಾಹಾರ ತೊರೆದಿರುವ ನಾಯಿಯ ಸ್ಥಿತಿ ಕಂಡು ನೆರೆಹೊರೆ ಸೇರಿದಂತೆ ಭದ್ರತೆಯ ಪೊಲೀಸರು ಮರುಕ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ರಾಜೀನಾಮೆ ವಾಪಸ್ಸು​​ ತೆಗೆದುಕೊಳ್ಳಿ: ಶಿಷ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಾಕೀತು

ಒಟ್ಟಾರೆ, ಮಂಡ್ಯ ಜಿಲ್ಲೆಯ  ಕೆ.ಆರ್. ‌ಪೇಟೆ ಶಾಸಕನ ನಡೆಯಿಂದ ಜೆಡಿಎಸ್ ಭದ್ರಕೋಟೆ ಎನಿಸಿದ್ದ ಜಿಲ್ಲೆಯಲ್ಲಿ‌ ಇದೀಗ ಬಿರುಕು ಕಾಣಿಸಿಕೊಂಡಿದೆ. ಇದರ ನಡುವೆ ಕೆ.ಆರ್. ಪೇಟೆಯಲ್ಲಿ ಮುಂದಿನ ನಾಯಕ ಯಾರಾಗಬೇಕು ಅನ್ನೋದಕ್ಕೆ ಈಗಾಗಲೇ ಅಲ್ಲಿನ ಮುಖಂಡರು ಸಿದ್ದತೆ ನಡೆಸಿದ್ಧಾರೆ. ಆ ಕ್ಷೇತ್ರದ ನಾಯಕನಾಗಿ ಯಾರು ಚುಕ್ಕಾಣಿ ಹಿಡೀತಾರೆ ಅನ್ನೋದು ಕುತೂಹಲ ಮೂಡಿಸಿದೆ.(ವರದಿ: ರಾಘವೇಂದ್ರ ಗಂಜಾಮ್)
First published:July 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ