ಕೆ.ಆರ್​. ಪೇಟೆಯಲ್ಲಿ ಯಡವಟ್ಟು; ಜೆಡಿಎಸ್​ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಯಾಚಿಸಿದ ಎಚ್​.ಡಿ. ರೇವಣ್ಣ!

ಜೆಡಿಎಸ್​ ಪರವಾಗಿ ಮತ ಯಾಚಿಸುವ ಭರದಲ್ಲಿ ಎಚ್​.ಡಿ. ರೇವಣ್ಣ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ಕೆ.ಆರ್​. ಪೇಟೆಯ ಕಿಕ್ಕೇರಿ ಜೆಡಿಎಸ್​ ಸಮಾವೇಶದಲ್ಲಿ ಎಚ್​.ಡಿ. ರೇವಣ್ಣ ಬಿಜೆಪಿಗೆ ಮತಯಾಚನೆ ಮಾಡುವ ಮೂಲಕ ವೇದಿಕೆಯಲ್ಲಿದ್ದ ನಾಯಕರಿಗೆ ಮುಜುಗರ ಉಂಟುಮಾಡಿದ್ದಾರೆ.

news18-kannada
Updated:November 27, 2019, 5:07 PM IST
ಕೆ.ಆರ್​. ಪೇಟೆಯಲ್ಲಿ ಯಡವಟ್ಟು; ಜೆಡಿಎಸ್​ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಯಾಚಿಸಿದ ಎಚ್​.ಡಿ. ರೇವಣ್ಣ!
ಹೆಚ್.ಡಿ. ರೇವಣ್ಣ
  • Share this:
ಕೆ.ಆರ್​. ಪೇಟೆ (ನ. 27): ರಾಜ್ಯ ವಿಧಾನಸಭಾ ಉಪಚುನಾವಣೆಗೆ ಕೇವಲ 1 ವಾರ ಬಾಕಿ ಇರುವುದರಿಂದ ಈಗಾಗಲೇ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು 15 ಕ್ಷೇತ್ರಗಳಲ್ಲೂ ಮತಯಾಚನೆ ನಡೆಸುತ್ತಿದ್ದಾರೆ. ಅವರಿಗೆ ಆಯಾ ಪಕ್ಷಗಳ ನಾಯಕರು ಕೂಡ ಜೊತೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಪ್ರಯತ್ನದಲ್ಲಿದ್ದಾರೆ.

ಇಂದು ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆಯ ಕಿಕ್ಕೇರಿಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳಿಂದ ಭಾರೀ ಪ್ರಚಾರ ಕಾರ್ಯ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಪರ ಯತೀಂದ್ರ ಸಿದ್ದರಾಮಯ್ಯ ಮತ ಯಾಚನೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ಪರವಾಗಿ ಬಿ.ವೈ ವಿಜಯೇಂದ್ರ, ಸಿ.ಪಿ. ಯೋಗೇಶ್ವರ್ ಪ್ರಚಾರ ನಡೆಸಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಬಿ.ಎಲ್. ದೇವರಾಜು ಪರವಾಗಿ ಮಾಜಿ ಸಚಿವ ಎಚ್​.ಡಿ. ರೇವಣ್ಣ ಮತ ಯಾಚನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹುಳಿಮಾವು ಕೆರೆ ಒಡೆದ ಪ್ರಕರಣ; ಎಚ್ಚರ ವಹಿಸದ ಬಿಬಿಎಂಪಿ, ಬಿಡಿಎಗೆ ಹೈಕೋರ್ಟ್​ ತರಾಟೆ

ಜೆಡಿಎಸ್​ ಪರವಾಗಿ ಮತ ಯಾಚಿಸುವ ಭರದಲ್ಲಿ ಎಚ್​.ಡಿ. ರೇವಣ್ಣ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ಕೆ.ಆರ್​. ಪೇಟೆಯ ಕಿಕ್ಕೇರಿ ಜೆಡಿಎಸ್​ ಸಮಾವೇಶದಲ್ಲಿ ಎಚ್​.ಡಿ. ರೇವಣ್ಣ ಬಿಜೆಪಿಗೆ ಮತಯಾಚನೆ ಮಾಡುವ ಮೂಲಕ ವೇದಿಕೆಯಲ್ಲಿದ್ದ ನಾಯಕರಿಗೆ ಮುಜುಗರ ಉಂಟುಮಾಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮತ ಯಾಚನೆ ಮಾಡುವಾಗ ಕ್ರಮ ಸಂಖ್ಯೆ 2ರ ಬದಲು 3ನೇ ಸಂಖ್ಯೆಗೆ ಮತ ಹಾಕಿ ಎಂದು ಎಚ್​.ಡಿ. ರೇವಣ್ಣ ಮನವಿ ಮಾಡಿದ್ದಾರೆ. 3ನೇ ಕ್ರಮ ಸಂಖ್ಯೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡರದ್ದಾಗಿದ್ದು, 2ನೇ ಕ್ರಮ ಸಂಖ್ಯೆ ಜೆಡಿಎಸ್​ ಅಭ್ಯರ್ಥಿ ಬಿ.ಎಲ್. ದೇವರಾಜು ಅವರದ್ದಾಗಿತ್ತು. ತಮ್ಮ ಕ್ರಮ ಸಂಖ್ಯೆ 2 ಎಂದು ಜೆಡಿಎಸ್​ ಅಭ್ಯರ್ಥಿ ಎಚ್ಚರಿಸಿದ ನಂತರ ತಕ್ಷಣ ಎಚ್ಚೆತ್ತ ಎಚ್​.ಡಿ. ರೇವಣ್ಣ 3ಕ್ಕೆ ಅಲ್ಲ 2ನೇ ಕ್ರಮ ಸಂಖ್ಯೆಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ