KPTCL Exam Scam: ಪರೀಕ್ಷಾ ಅಕ್ರಮದ ತನಿಖೆ ಚುರುಕು; ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದ ಅಭ್ಯರ್ಥಿ ಅರೆಸ್ಟ್

ರಾಜ್ಯಶಾಸ್ತ್ರ ವಿಷಯದಲ್ಲಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಆದೇಶ್​ ನಾಗನೂರಿಯನ್ನ ಅದೇ ದಿನವೇ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಬೆಳಗಾವಿ ಜಿಲ್ಲಾ ಪೊಲೀಸರು ಹಗಲು ರಾತ್ರಿಯನ್ನದೇ ತನಿಖೆ ಕೈಗೊಂಡಿದ್ದಾರೆ.

ಬಂಧಿತ ಅತಿಥಿ ಉಪನ್ಯಾಸಕ ಆದೇಶ್

ಬಂಧಿತ ಅತಿಥಿ ಉಪನ್ಯಾಸಕ ಆದೇಶ್

  • Share this:
ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ (KPTCL Recruitment Exam Scam) ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಈವರೆಗೂ ಬಂಧಿತ 17 ಜನರಲ್ಲಿ ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದವನು ಜೈಲು ಪಾಲಾಗಿದ್ದಾನೆ. ಬೆಳಗಾವಿ ಎಸ್​ಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ವಿಶೇಷ ತಂಡಗಳು ಸದ್ಯದಲ್ಲೇ ಇನ್ನಷ್ಟು ಆರೋಪಿಗಳನ್ನ (Accused) ಬಂಧಿಸುವ ಸಾಧ್ಯತೆಯಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪಿಎಸ್​​ಐ, ಪೊಲೀಸ್ ಪೇದೆ ಪರೀಕ್ಷಾ ಅಕ್ರಮದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಪೊಲೀಸರು (Belagavi Police) ಈಗ ಕೆಪಿಟಿಸಿಎಲ್ ಕಿರಿಯ ಸಹಾಯಕ ಎಂಜಿನಿಯರ್ (Junior Assistance Post) ಪರೀಕ್ಷೆ ಅಕ್ರಮದ ಬೆನ್ನು ಬಿದ್ದಿದ್ದಾರೆ. ಈಗಾಗಲೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಕಿಂಗ್ ಪಿನ್ ಸಂಜು ಭಂಡಾರಿ, ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ ಮಹಮ್ಮದ್ ಸೇರಿ 17 ಜನ ಆರೋಪಿಗಳನ್ನ ಬಂದಿದ್ದಾರೆ. ಇದರಲ್ಲಿ ಪರೀಕ್ಷಾರ್ಥಿಗಳು ಇದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಮಾಡಿದ್ದವನು ಹಿಡಿದು, ಅವುಗಳಿಗೆ ಉತ್ತರ ಸಿದ್ಧ ಪಡೆಸಿದವನನ್ನು ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ.

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಪ್ರಕರಣವನ್ನ ಬೆಳಗಾವಿ ಎಸ್​​ಪಿ ಡಾ.ಸಂಜೀವ್ ಪಾಟೀಲ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಹೆಚ್ಚುವರಿ ಎಸ್​​ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನ ರಚಿಸಿ ತನಿಖೆಯನ್ನ ಮುಂದುವರಿಸಿದ್ದಾರೆ. ಪರೀಕ್ಷಾ ಅಕ್ರಮದ ಜಾಲವನ್ನ ಬುಡಸಮೇತ ಮಟ್ಟ ಹಾಕಲು ಎಸ್​​ಪಿ ಸಂಜೀವ ಪಾಟೀಲ್  ಆಂಡ್ ಟೀಮ್ ಕಾರ್ಯಪ್ರವೃತ್ತವಾಗಿದೆ.

ಬಂಧನವಾದ ದಿನವೇ ನೆಟ್​ ಪರೀಕ್ಷೆಯಲ್ಲಿ ಉತ್ತೀರ್ಣ

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಬಂಧಿತ ಆರೋಪಿ ಅತಿಥಿ ಉಪನ್ಯಾಸಕನ ಹಿಸ್ಟರಿ ರೋಚಕವಾಗಿದೆ. ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂಭ್ರಮದಲ್ಲಿದ್ದವನೇ ಈಗ ಜೈಲು ಪಾಲಾಗಿದ್ದಾನೆ. ನೆಟ್ ಎಕ್ಸಾಂನಲ್ಲಿ 46 ನೇ ರ‍್ಯಾಂಕ್ ಪಡೆದರೂ ಸಂಭ್ರಮಿಸದ ಪರಿಸ್ಥಿತಿ ಹುಕ್ಕೇರಿ ಸರ್ಕಾರಿ ‌ಕಾಲೇಜಿನ‌ ಅತಿಥಿ ಉಪನ್ಯಾಸಕ ಆದೇಶ್​ ನಾಗನೂರಿ.

KPTCL Recruitment scam main accused arrest csb mrq
ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಉತ್ಪನ್ನಗಳು


ಈ ಆದೇಶ್​ ನಾಗನೂರಿ ಹುಕ್ಕೇರಿ ‌ತಾಲೂಕಿನ‌ ಶಿರಹಟ್ಟಿ ಗ್ರಾಮದ ‌ನಿವಾಸಿಯಾಗಿದ್ದು, ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಅರೆಸ್ಟ್ ಆಗಿದ್ದಾನೆ. ಈಗ ಉತ್ತರ ತಯಾರಿಸಿ ಅಭ್ಯರ್ಥಿಗಳಿಗೆ ಹೇಳಿದ್ದನು.
ಅಲ್ಲದೇ ಇಬ್ಬರು ಅಭ್ಯರ್ಥಿಗಳಿಗೆ ಡಿವೈಸ್ ನೀಡಿದ್ದ ಆರೋಪದಲ್ಲಿ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ:  Nikhil Kumaraswamy: ಜೆಡಿಎಸ್‌ಗೆ ಇದೇ ಕೊನೆ ಎಲೆಕ್ಷನ್ನಾ? ನಿಖಿಲ್ ಕುಮಾರಸ್ವಾಮಿ ಮಾತಿನ ಅರ್ಥವೇನು?

ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರ ಬಲೆ

ಆದೇಶ್​ ಬಂಧನದ ದಿನದಂದೇ ನೆಟ್ ಪರೀಕ್ಷೆ ಫಲಿತಾಂಶ ಕೂಡ‌ ಬಂದಿತ್ತು. ರಾಜ್ಯಶಾಸ್ತ್ರ ವಿಷಯದಲ್ಲಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಆದೇಶ್​ ನಾಗನೂರಿಯನ್ನ ಅದೇ ದಿನವೇ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಬೆಳಗಾವಿ ಜಿಲ್ಲಾ ಪೊಲೀಸರು ಹಗಲು ರಾತ್ರಿಯನ್ನದೇ ತನಿಖೆ ಕೈಗೊಂಡಿದ್ದಾರೆ.

N-95 ಮಾಸ್ಕ್​​, ಬನಿಯನ್​ಗಳಲ್ಲಿ ಇಲೆಕ್ಟ್ರಾನಿಕ್ ಡಿವೈಸ್

ಅಕ್ರಮದ ಜಾಲಾಡುತ್ತಿರುವ ಪೊಲೀಸರು ಆರೋಪಿತರನ್ನು ಖೆಡ್ಡಾಕ್ಕೆ ಕೆಡುವುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಡೆದ ವಿವಿಧ ನೇಮಕಾತಿ ನಡೆದಿವೆ. ಈ ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಬೆಳಗಾವಿ ಪೊಲೀಸರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ದೇವಸಂದ್ರದ ನಿವಾಸಿ, ಎಸ್​ಪಿ ರಸ್ತೆಯಲ್ಲಿ ‘ಸ್ಪೈ ಜೋನ್‌’ ಎಂಬ ಎಲೆಕ್ಟ್ರಾನಿಕ್‌ ಮಳಿಗೆ ಇಟ್ಟುಕೊಂಡ ಮಹಮ್ಮದ್‌ ಅಜೀಮುದ್ದೀನ್‌ (37) ಬಂಧಿತ.

Nine Arrested In KPTCL Exam Scam csb mrq
ಪರೀಕ್ಷಾ ಅಕ್ರಮಕ್ಕೆ ಬಳಸಿದ ಉತ್ಪನ್ನ


ಇದನ್ನೂ ಓದಿ:  Doctor: ಟ್ರಾಫಿಕ್‌ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!

ಇಡೀ ಮಳಿಗೆ ಸೀಜ್

ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ಅಕ್ರಮ ಎಸಗಲು ಪೂರೈಸಿದ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳನ್ನೂ ಈತನಿಂದ ವಶಕ್ಕೆ ಪಡೆಯಲಾಗಿದ್ದು, ಮಳಿಗೆ ಸೀಜ್‌ ಮಾಡಲಾಗಿದೆ
Published by:Mahmadrafik K
First published: