ಯುಪಿಎಸ್​ಸಿ ಮಾದರಿಯಲ್ಲೇ ಎಫ್​ಡಿಎ ಪರೀಕ್ಷೆ ನಡೆಸಿದ ಕೆಪಿಎಸ್​ಸಿ

ರಾಜ್ಯಾದ್ಯಂತ ಕೆಪಿಎಸ್​ಸಿ ನಿನ್ನೆ ಎಫ್​ಡಿಎ ಪರೀಕ್ಷೆ ನಡೆಯಿತು. ಈ ಎಫ್​ಡಿಎ ಪರೀಕ್ಷೆ ಮೇಲೆ ಸಿಸಿಬಿ ಮತ್ತು ಕೆಪಿಎಸ್​ಸಿ ಹದ್ದಿನ ಕಣ್ಞಿಟ್ಟಿತ್ತು. ಯುಪಿಎಸ್​ಸಿ ಪರೀಕ್ಷೆ ಮಾದರಿಯಲ್ಲಿ ಇಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಿಕೆಯಾಗಿದ್ದ ಎಫ್​ಡಿಎ ಪರೀಕ್ಷೆ ಕೊನೆಗೂ ರಾಜ್ಯಾದ್ಯಂತ ನಿರಾಂತಕವಾಗಿ ನಡೆದಿದೆ... ಬೆಳಗ್ಗೆ 10 ರಿಂದ 11:30 ರವರೆಗೆ ಸಾಮಾನ್ಯ ಜ್ಞಾನ ಇದ್ದು, ಮಧ್ಯಾಹ್ನ 2 ರಿಂದ 3.30 ರವರೆಗೆ ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲೀಷ್ ಪರೀಕ್ಷೆ ಇತ್ತು. ಈ ನಡುವೆ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಎಚ್ಚೆತ್ತುಕೊಂಡಿದ್ದ KPSC ಇಲಾಖೆ ಕಠಿಣ ನಿಯಮಗಳನ್ನ ನಿರ್ದಿಷ್ಟಪಡಿಸಿತ್ತು.

ಜ. 24 ರಂದೇ ಪರೀಕ್ಷೆ ನಿಗದಿಯಾಗಿದ್ದರೂ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಿಕೆಯಾಗಿತ್ತು. ರಾಜ್ಯದ 1,057 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, 433 ಕೇಂದ್ರಗಳನ್ನ ಸೂಕ್ಷ್ಮ ಎಂದು ಗುರುತು ಮಾಡಲಾಗಿತ್ತು. 1,253 ಹುದ್ದೆಗಳಿಗೆ ಒಟ್ಟು 3.74 ಲಕ್ಷ ಅಭ್ಯರ್ಥಿಗಳಿಂದ ಪರೀಕ್ಷೆಗೆ ಅರ್ಜಿ  ಹಾಕಿದ್ರು. ಬೆಂಗಳೂರಿನಲ್ಲಿ 78ಕ್ಕೂ ಅಧಿಕ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆಯಾಗಿದ್ದು, ಶೇಷಾದ್ರಿಪುರಂ ಕಾಲೇಜಲ್ಲೂ ಕಠಿಣ ರೂಲ್ಸ್ ಫಾಲೋ ಮಾಡಲಾಗಿತ್ತು. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಎಚ್ಚೆತ್ತಿರೋ ಕೆಪಿಎಸ್​ಸಿ ಅಧಿಕಾರಿಗಳು ಸಾಕಷ್ಟು ಟಫ್ ರೂಲ್ಸ್ ಮಾಡಿದ್ರು‌.

ಎಲ್ಲಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಮಾಡಿದ್ದು, ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿತ್ತು. ಪಿಯು ಪರೀಕ್ಷಾ ಮಂಡಳಿಯ‌ ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಳವಡಿಕೆ ಮಾಡಿತ್ತು. ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಬ್ಲೂ ಟೂತ್, ವೈಫೈ, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ಹಾಗೂ ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ನಿಗಾವಹಿಸಲಾಗಿತ್ತು. ಪರೀಕ್ಷಾ ಸಾಮಾಗ್ರಿ ಸಾಗಿಸುವ ವಾಹನಗಳಿಗೆ GPS ಅಳವಡಿಸಿದ್ದು, ಪ್ರತೀ ಪರೀಕ್ಷಾ ಕೇಂದ್ರಗಳಲ್ಲೂ ನಿರೀಕ್ಷಕರ ನೇಮಕ ಮಾಡಲಾಗಿತ್ತು. ಈ ನಡುವೆ ಶೇಷಾದ್ರಪುರಂ ಪರೀಕ್ಷಾ ಕೇಂದ್ರದಲ್ಲಿ 600 ಮಂದಿ ಅಭ್ಯರ್ಥಿಗಳು ಬಹಳ ಸಂತೋಷದಿಂದ ಪರೀಕ್ಷೆ ಬರೆದರು.

ಇದನ್ನೂ ಓದಿ: ಕೋಲಾರ: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಲೂರಿನ ರಾಮೇಗೌಡ

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ವೇಣುಗೋಪಾಲ್ ನೇತೃತ್ವದ ವಿಶೇಷ ತಂಡ ಕಳೆದ ಒಂದು ತಿಂಗಳಿಂದ ನಿಗಾ ವಹಿಸಿತ್ತು. ನಕಲಿ ಪೇಪರ್ ಕೊಟ್ಟು ಆಸಲಿ ಅಂತಾ ನಂಬಿಸಿ ಹಣ ಮಾಡಲು ಕೆಲವರು ಪ್ಲಾನ್ ಮಾಡಿದ್ದು, ನಕಲಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪ್ರಶ್ನ ಪತ್ರಿಕೆ ಪ್ರಿಂಟಿಂಗ್​ನಿಂದ ಎಕ್ಸಾಂ ಹಾಲ್ ತನಕ  ಪೊಲೀಸರೇ ಉಸ್ತುವಾರಿ ವಹಿಸಿದ್ರು. ಮೊನ್ನೆ ರಾತ್ರಿಯೇ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಸಿಸಿಬಿ ವಶಕ್ಕೆ ಪಡೆದಿತ್ತು. ಇನ್ನು, ಕೆಲವು ಜೈಲಿನಲ್ಲಿ ಇರುವ ಆರೋಪಿಗಳ ಮೇಲೂ ನಿಗಾವಹಿಸಿತ್ತು. ಕಳೆದ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಏಳು ಸರ್ಕಾರಿ ಅಧಿಕಾರಿಗಳು ಸೇರಿದಂತೆ 25 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕೆಲವರನ್ನ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಅದಲ್ಲದೆ ಹಳೇ ಕೇಸ್​ನಲ್ಲಿರೋ ಕೆಲವರ ಸಂಪರ್ಕಿತ ವ್ಯಕ್ತಿಗಳಿದ್ದು, ಎಲ್ಲರ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕ್ತಿದೆ. ಸದ್ಯ ನಿನ್ನೆ ಏನೂ ಸಮಸ್ಯೆ ಇಲ್ಲದೇ ಪರೀಕ್ಷೆ ಮುಗಿದಿದ್ದು, ಅಭ್ಯರ್ಥಿಗಳು ಖುಷ್ ಆಗಿದ್ದಾರೆ.

ವರದಿ: ಗಂಗಾಧರ್ ವಾಗಟ
Published by:Vijayasarthy SN
First published: