SDA Exam: ಮಾ.20, 21ರಂದು ನಡೆಯಬೇಕಿದ್ದ ಎಸ್​ಡಿಎ ಪರೀಕ್ಷೆ ಮುಂದೂಡಿದ ಕೆಪಿಎಸ್​ಸಿ; ಕಾರಣವೇನು?

ಕೊರೋನಾ ವೈರಸ್​ ಹಿನ್ನಲೆ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ ತಿಳಿಸಿದ್ದಾರೆ.

ಕೆಪಿಎಸ್​ಸಿ

ಕೆಪಿಎಸ್​ಸಿ

  • Share this:
    ಬೆಂಗಳೂರು (ಮಾ. 10): ಇದೇ ಮಾರ್ಚ್​ 20 ಮತ್ತು 21ರಂದು ನಿಗದಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್​ಡಿಎ) ಪರೀಕ್ಷೆಯನ್ನು ಮುಂದೂಡಲಾಗಿದೆ.  ಕೊರೋನಾ ವೈರಸ್​ ಹಾಗೂ ಪರೀಕ್ಷೆಗೆ ಸಿದ್ಧತೆ ನಡೆಸಲು ಕಾಲಾವಕಾಶ ಬೇಕಿರುವ ಹಿನ್ನಲೆ  ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ ತಿಳಿಸಿದ್ದಾರೆ. ಮುಂದೂಡಲ್ಪಟ್ಟಿರುವ ಎಸ್​ಡಿಎ ಪರೀಕ್ಷೆಯನ್ನು ಯಾವಾಗ ನಡೆಸುವುದು ಎಂಬ ಬಗ್ಗೆ ಶೀಘ್ರದಲ್ಲಿಯೇ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಜನವರಿಯಲ್ಲಿ ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿತ್ತು. ಈ ಪರೀಕ್ಷೆಯನ್ನು ಕಳೆದ ಫೆ. 28ರಂದು ನಡೆಸಲಾಗಿತ್ತು.

    ಪ್ರಶ್ನೆ ಪತ್ರಿಕೆ ಸೋರಿಕೆ ನಡೆಯುತ್ತಿರುವ ಹಿನ್ನಲೆ ಆಯೋಗ ಎಚ್ಚರವಹಿಸಿದ್ದು, ಇದಕ್ಕಾಗಿ ಪೂರ್ವ ಸಿದ್ಧತೆ ನಡೆಸಿದೆ. ಅಲ್ಲದೇ ಫೆ. 28ರಂದು ನಡೆದ ಎಫ್​ಡಿಎ ಪರೀಕ್ಷೆಯನ್ನು ಯುಪಿಎಸ್​ಸಿ ಮಾದರಿಯಲ್ಲಿ ಕಟ್ಟು ನಿಟ್ಟಾಗಿ ನಡೆಸಲಾಗಿತ್ತು.



    ಎಲ್ಲಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಮಾಡಿ, ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿತ್ತು. ಪಿಯು ಪರೀಕ್ಷಾ ಮಂಡಳಿಯ‌ ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಳವಡಿಕೆ ಮಾಡಿತ್ತು. ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಬ್ಲೂ ಟೂತ್, ವೈಫೈ, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ಹಾಗೂ ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ನಿಗಾವಹಿಸಲಾಗಿತ್ತು. ಪರೀಕ್ಷಾ ಸಾಮಾಗ್ರಿ ಸಾಗಿಸುವ ವಾಹನಗಳಿಗೆ GPS ಅಳವಡಿಸಿದ್ದು, ಪ್ರತೀ ಪರೀಕ್ಷಾ ಕೇಂದ್ರಗಳಲ್ಲೂ ನಿರೀಕ್ಷಕರ ನೇಮಕ ಮಾಡಲಾಗಿತ್ತು.

    ಈ ಹಿನ್ನಲೆ ಪರೀಕ್ಷೆಗೆ ಸಿದ್ಧತೆ ನಡೆಸಲು ಕಾಲಾವಕಾಶ ಬೇಕಿರುವ ಹಿನ್ನಲೆ  ಜೊತೆ ಕಡಿಮೆಯಾಗಿದ್ದ ಕೊರೋನಾ ಪ್ರಕರಣಗಳು ಮತ್ತೆ ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಳಗೊಂಡಿದೆ. ಈ ಕುರಿತು ಇತ್ತೀಚೆಗೆ ಮಾತನಾಡಿದ ಆರೋಗ್ಯ ಸಚಿವ ಕೆ ಸುಧಾಕರ್​, ಕೊರೋನಾ ಹಿನ್ನಲೆ ಸಿಲಿಕಾನ್​ ಸಿಟಿಯಲ್ಲಿ ಯಾವುದೇ ಪ್ರತಿಭಟನೆ, ಜನಸಂದಣಿ, ಜನ ಹೆಚ್ಚು ಸೇರುವ ಸಮಾರಂಭಗಳನ್ನು ಎರಡು ತಿಂಗಳ ಮಟ್ಟಿಗೆ ಮುಂದೂಡುವುದು ಒಳಿತು ಎಂದಿದ್ದರು. ಈ ಹಿನ್ನಲೆ ಲೋಕಸೇವಾ ಆಯೋಗವು ಪರೀಕ್ಷೆ ಮುಂದೂಡಿದೆ.
    Published by:Seema R
    First published: