Bengaluru: ಮತ್ತೊಮ್ಮೆ KPSC ವಿರುದ್ದ ಪ್ರತಿಭಟನೆ! ಅಭ್ಯರ್ಥಿಗಳಿಂದ ಹೋರಾಟ, ಲಘು ಲಾಠಿ ಪ್ರಹಾರ

ಪರೀಕ್ಷೆ ಬರೆದು ವರುಷ ಕಳೆದರೂ ಬಾರದ ಫಲಿತಾಂಶಕ್ಕೆ ಅಭ್ಯರ್ಥಿ ಬೇಸತ್ತು ಇಂದು ಹೋರಾಟ ಮಾಡಿದ್ದಾರೆ. ಕೆಪಿಎಸ್​ಸಿ ಕಚೇರಿ ಮುಂದೆ ಪ್ರತಿಭಟಿಸಿದ್ದಾರೆ.

ಅಭ್ಯರ್ಥಿಗಳಿಂದ ಪ್ರತಿಭಟನೆ

ಅಭ್ಯರ್ಥಿಗಳಿಂದ ಪ್ರತಿಭಟನೆ

  • Share this:
ಬೆಂಗಳೂರು(ಜು.26): ವಿವಿಧ ಇಲಾಖೆ ನೇಮಕಾಗಿಗಾಗಿ ಪರೀಕ್ಷೆ ಬರೆದು ವರುಷ ಕಳೆದರೂ ಬಾರದ ಫಲಿತಾಂಶಕ್ಕೆ ಅಭ್ಯರ್ಥಿ ಬೇಸತ್ತು ಇಂದು ಹೋರಾಟಕ್ಕಿಳಿದಿದ್ದರು. ಕೆಪಿಎಸ್ ಸಿ (KPSC) ಕಚೇರಿ ಮುಂದೆ ನೊಂದ ಅಭ್ಯರ್ಥಿಗಳ ಆಕ್ರೋಶ ಇಂದು ಮಡುಗಟ್ಟಿತ್ತು. ಹೋರಾಟದ ಕಿಚ್ಚಿಗೆ ಪೊಲೀಸರು  (Police) ಅಭ್ಯರ್ಥಿಗಳ ನಡುವೆ ನೂಕಾಟ, ತಳ್ಳಾಟ, ಲಘು ಲಾಠಿ ಪ್ರಹಾರವೂ ನಡೆಯಿತು. KPSC ಗೆ ಹಿಡಿದಿರೋ ಗ್ರಹಣ ಅದ್ಯಾಕೋ ಬಿಡುವಂತೆ ಕಾಣುತ್ತಿಲ್ಲ.  ಕೆಪಿಎಸ್ ಸಿ ಪರೀಕ್ಣೆ‌ ಬರೆದ ಫಲಿತಾಂಶ ಬಾರದ ನೊಂದು ಇಂದು ಮತ್ತೊಮ್ಮೆ ಆಕ್ರೋಶ ಹೋರಾಟದ ಹಾದಿ ತುಳಿದಿದ್ದರು. ಸರ್ಕಾರದ (Govt) 3 ಸಾವಿರ ಹುದ್ದೆಗಳಿಗೆ ನಡೆದಿದ್ದ ಗೆಜೆಟೆಡ್ ಪ್ರೊಬೇಶನರಿ, ಎಸ್ಡಿಎ, ಪಿಡಬ್ಲ್ಯೂಡಿ ಜೆಇ, ಎಇ ಗ್ರೂಪ್ ಸಿ, ಎಸಿಎಫ್ ಸೇರಿದಂತೆ ಹಲವು ಹುದ್ದೆಗಳಿಗಾಗಿ ಪರೀಕ್ಷೆ (Exam) ಆಗಿ 17 ತಿಂಗಳು ಕಳೆದಿದ್ರೂ ಫಲಿತಾಂಶ ಮಾತ್ರ ಬಂದಿಲ್ಲ.

ಇನ್ನು ಎಸ್ಡಿಎ ನೇಮಕಾತಿಗೆ 2021ರ ಅಕ್ಟೋಬರ್ ನಲ್ಲಿ, ಪಿಡಬ್ಲ್ಯೂಡಿ ಜೆಇ ಹಾಗು ಎಇ ನೇಮಕಾತಿಗೆ 2021 ಡಿಸೆಂಬರ್ನಲ್ಲಿ ಪರೀಕ್ಷೆ ನಡೆದು ಅದರ ಫಲಿತಾಂಶ ಬಂದಿದ್ರೂ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಂದಿಲ್ಲ ಎಂದು ಆಗ್ರಹಿಸಿ  200ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ಅಭ್ಯರ್ಥಿಗಳು ಮಾತನಾಡಿ ಬೇರೆ ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸುತ್ತಾರೆ. ರಿಸಲ್ಟ್ ತಡವಾಗಿ ಕೊಟ್ರೇ ವಯಸ್ಸಿನ ವಯೋಮಿತಿ ರಿಲ್ಯಾಕ್ಸ್ ಕೊಡ್ತಾರೆ. ಆದ್ರೇ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹತ್ತು ವರ್ಷದಲ್ಲಿ ನಾಲ್ಕು ನೇಮಕಾತಿ ಆಗಿದೆ ಅಷ್ಟೇ. ಆದ್ರೇ ಅದ್ರಲ್ಲೂ ಸಮಸ್ಯೆಗಳು ದೋಷಗಳು ಇವೆ 2021ರ ಫೆಬ್ರವರಿ ಯಲ್ಲಿ ಪರೀಕ್ಷೆ ಬರೆದಿದ್ದೇವೆ.

ಒಂದೂವರೆ ವರ್ಷವಾದ್ರೂ ರಿಸಲ್ಟ್ ಬಂದಿಲ್ಲ

ಒಂದೂವರೆ ವರ್ಷವಾದ್ರೂ ರಿಸಲ್ಟ್ ಬಂದಿಲ್ಲ ನಾವೆಲ್ಲಾ ಆರ್ಥಿಕವಾಗಿ ಹಿಂದುಳಿದವರು. ವರ್ಷಾನು ಗಟ್ಟಲೆಯಿಂದ ಕಷ್ಟಪಟ್ಟು ಓದುತ್ತಿದ್ದೇವೆ, ಸರ್ಕಾರ ವೇಕೆನ್ಸಿ ತುಂಬುವ ಕೆಲ್ಸ ಮಾಡಬೇಕು ನೇರ ವಾಗಿ ನೇಮಕಾತಿ ಮಾಡಿಕೊಳ್ಳಬಹುದು ಅದನ್ನು ಸರ್ಕಾರ ಮಾಡುತ್ತಿಲ್ಲ. ಯುಪಿಎಸ್ಸಿ ಮಾದರಿಯಲ್ಲಿ ಟೈಂ ಪ್ರೇಮ್ ಕೊಡಬೇಕು  60 ದಿನದಲ್ಲಿ ರಿಸಲ್ಟ್ ಕೊಡೋ ವ್ಯವಸ್ಥೆ ಆಗಬೇಕು ತ್ವರಿತ ರಿಸಲ್ಟ್ ನೀಡಬೇಕು, ತಕ್ಷಣ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕೆದು ಆಗ್ರಹಿಸಿದರು.

ಘೋಷಣೆ ಕೂಗಿ ಪ್ರತಿಭಟನೆ

ಉದ್ಯೋಗ ಸೌಧದ ಮುಂದೆ ಹಾಜರಾದ ಕೆಪಿಎಸ್‌ಸಿ ಅಭ್ಯರ್ಥಿಗಳು ಘೋಷಣೆ ಕೂಗಿ ಪ್ರತಿಭಟಿಸಲು ಮುಂದಾದ್ರು‌ ಈ ವೇಳೆ ಪ್ರತಿಭಟನೆ ಮಾಡದಂತೆ ಸ್ಥಳೀಯ ಪೊಲೀಸರ ಸೂಚನೆ ನೀಡಿದರು. ನೂರಾರು ಜನರು ಇಲ್ಲಿ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ.‌ ಆದರೆ ಇದಕ್ಕೆ ಅಭ್ಯರ್ಥಿಗಳು ಲಿಖಿತ ರೂಪದಲ್ಲಿ ನಮಗೆ ದಿನಾಂಕ ತಿಳಿಸೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದ ಅಭ್ಯರ್ಥಿಗಳು ಭಿತ್ತಿ ಪತ್ರ ಹಿಡಿದು ಧಿಕ್ಕಾರ ಕೂಗಿದರು. ಕೊನೆಗೆ ಕೆಪಿಎಸ್ ಸಿ ಕಾರ್ಯದರ್ಶಿ ಸುರಲ್ಕರ್ ವಿಕಾಸ್ ಕಿಶೋರ್ ಆಗಮಿಸಿ ಭರವಸೆ ನೀಡಿದರು.

ಇದನ್ನೂ ಓದಿ: Kolara: JDS ಬಿಟ್ಟು BJP ಸೇರ್ತಾರಾ ಮಾಜಿ ಶಾಸಕ ವೆಂಕಟಶಿವಾರೆಡ್ಡಿ?

ಆದರೂ ಅಲ್ಲಿಂದ ಕಾಲ್ಕಿತ್ತದ ಪರಿಣಾಮ ಪ್ರತಿಭಟನಾಕಾರರ ಅಭ್ಯರ್ಥಿಗಳ ಮೇಲೆ ವಾಗ್ವಾದ ತಾರಕಕ್ಕೇರಿತು. ಅಭ್ಯರ್ಥಿಗಳು ರೊಚ್ಚಿಗೆದ್ದು ಕೂಗಾಡಿ, ಚೀರಾಟ ನಡೆಸಿ ಉದ್ಯೋಗ ಸೌಧ ಮುತ್ತಿಗೆಗೆ ಮುಂದಾದ್ರು.‌ ಆನಂತರ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಮಹಿಳಾ ಮುಖಂಡರು, ಮಹಿಳಾ ಅಭ್ಯರ್ಥಿಗಳ ಮೇಲೆ ನೂಕಾಟ, ತಳ್ಳಾಟವಾಯಿತು. ಅಲ್ಲಿಂದ ಪ್ರತಿಭಟನಾಕಾರನ್ನು ಚದುರಿಸಿ, ಕೆಲವರನ್ನು ಒತ್ತಾಯಪೂರ್ವಕವಾಗಿ ವಶಕ್ಕೆ ಪೊಲೀಸರು ಪಡೆದರು.

ಸಿಬ್ಬಂದಿ ಆರೋಗ್ಯ ಸರಿಯಿಲ್ಲ

ಕೆಪಿಎಸ್ ಸಿ ಸೆಕ್ರಟರಿ ವಿಕಾಸ್ ಕಿಶೋರ್ ಮಾತನಾಡಿ, ಈಗ ಬೇರೆ ಬೇರೆ ಪರೀಕ್ಷೆ ವಿಚಾರವಾಗಿ ಕಾರಣ ಕೇಳಿದ್ದಾರೆ. ಪ್ರತಿಯೊಂದು ಪರೀಕ್ಷೆ ವಿಚಾರ ವೆರಿಫೈ ಆಗಿದೆ, ಕಾನ್ಫಿಡೆನ್ಶಿಯಲ್ ಸಿಬ್ಬಂದಿ ಆರೋಗ್ಯ ಸರಿಯಿಲ್ಲ. ಅವರು ಬಂದ ಕೂಡಲೇ ಲಿಸ್ಟ್ ನೀಡಲಾಗುತ್ತೆ ಜುಲೈ 15 ರಂದೇ ಲಿಸ್ಟ್ ಹೊರಬರಬೇಕಿತ್ತು. ಆದ್ರೆ ಸಿಬ್ಬಂದಿ ಕೊರತೆಯಿಂದಾಗಿ ತಡವಾಗಿದೆ ಸೋಮವಾರದ ವೇಳೆಗೆ ಗೆಜೆಟೆಡ್ ಲಿಸ್ಟ್ ಹೊರಬರಲಿದೆ. ಜಾಯಿಂಟ್ ಕಂಟ್ರೋಲರ್ಗೆ ಕೋವಿಡ್ ಆಗಿದೆ ಉಳಿದಂತೆ Pwd, SDA ಫೈಲ್ಗಳು ಪರೀಶೀಲನೆ ಆಗ್ತಿವೆ ಹಲವು ಒಳ ವಿಭಾಗಗಳ ಸಹಾಯ ಬೇಕಿದೆ, ಒಂದು ವಾರದಲ್ಲಿ ಶೆಡ್ಯೂಲ್ ತಿಳಿಸಲಾಗುತ್ತದೆ ಎಂದು ಸಮಜಾಯಿಷಿ ಕೊಟ್ಟರು.

ಇದನ್ನೂ ಓದಿ: ಸೇನೆ, ಪೋಲಿಸ್ ಸೇವೆ ಸೇರಲು ಸಿಗುತ್ತೆ ತರಬೇತಿ! ಈಗಲೇ ಹೀಗೆ ಅರ್ಜಿ ಸಲ್ಲಿಸಿ

ಸದ್ಯ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡ್ತಿರುವ ಕೆಪಿಎಸ್‌ಸಿ  ವಿರುದ್ಧ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಭಟಿಸಿದ್ರು. ಈ ಬಾರಿ ಮತ್ತೊಮ್ಮೆ ಅಭ್ಯರ್ಥಿಗಳು ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಹೀಗೆ ಫಲಿತಾಂಶ ವಿಳಂಬ ಮಾಡಿದ್ರೆ ಹೋರಾಟ ಇನ್ನಷ್ಟು ತಾರಕ್ಕೇರೋದು ಗ್ಯಾರಂಟಿ.
Published by:Divya D
First published: