FDA Exam: ಎಫ್​ಡಿಎ ಪ್ರಶ್ನಾ ಪತ್ರಿಕೆ ಸೋರಿಕೆ; ನಾಳೆ ನಿಗದಿಯಾಗಿದ್ದ ಪರೀಕ್ಷೆ ರದ್ದು ಮಾಡಿದ KPSC

ನಾಳೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಸಿಸಿಬಿ ಕೆಪಿಎಸ್​ಸಿಗೆ ಮಾಹಿತಿ ನೀಡಿದೆ. ಈ ಹಿನ್ನಲೆ ನಾಳೆ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ

ಕರ್ನಾಟಕ ಲೋಕಸೇವಾ ಆಯೋಗ

  • Share this:
ಬೆಂಗಳೂರು (ಜ. 23):  ನಾಳೆ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆ ಪ್ರಶ್ನಾಪತ್ರಿಕೆ ಸೋರಿಕೆಗೊಂಡ ಹಿನ್ನಲೆ ಪರೀಕ್ಷೆಯನ್ನು ರದ್ದು ಮಾಡಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ ಆದೇಶ ಹೊರಡಿಸಿದ್ದಾರೆ. 2019ರ ವಿವಿಧ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಹೊರಡಿಸಿ ಕಳೆದ ವರ್ಷ ಕೆಪಿಎಸ್​ಸಿ ಯಿಂದ ನೇಮಕಾತಿ ಹೊರಡಿಸಲಾಗಿತ್ತು. ಇಂದು ಅಂದರೆ, ಜ. 23ರಂದು ಕಡ್ಡಾಯ ಕನ್ನಡ ಮತ್ತು ನಾಳೆ ಸ್ಪರ್ಥಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡಲಾಗಿತ್ತು. ಇಂದು ಕಡ್ಡಾಯ ಭಾಷೆ ಕನ್ನಡ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನಾಳೆಯ ಸ್ಪರ್ಧಾತ್ಮಕ ಪರೀಕ್ಷೆಯ  ಪ್ರಶ್ನಾ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಸಿಸಿಬಿ ಕೆಪಿಎಸ್​ಸಿಗೆ ಮಾಹಿತಿ ನೀಡಿದೆ. ಈ ಹಿನ್ನಲೆ ನಾಳೆ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.



ಪ್ರಶ್ನಾಪತ್ರಿಕೆ ಸೋರಿಕೆಯಾಗಿರುವ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ ಕಾರ್ಯಚಾರಣೆ ನಡೆಸಿದ್ದು, ಆರು ಜನ  ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ರಾಚಪ್ಪ ಮತ್ತು ಚಂದ್ರು ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಬಂಧಿತ ಆರೋಪಿಗಳಿಂದ 24 ಲಕ್ಷ ನಗದು , ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳ ಬಳಿಯಿದ್ದ ಪ್ರಶ್ನಾ ಪತ್ರಿಕೆಯನ್ನು ಕೆಪಿಎಸ್​ಸಿಗೆ ಪರಿಶೀಲನೆಗೆ ಕಳುಹಿಸಾಗಿದೆ. ಈ ವೇಳೆ ಈ ಪ್ರಶ್ನಾ ಪತ್ರಿಕೆಗಳು ನಾಳೆ ನಡೆಯಬೇಕಿದ್ದ ಪರೀಕ್ಷೆಯದು ಎಂದು ತಿಳಿದುಬಂದಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿದ್ದಾರೆ. ರದ್ದಾದ ಈ ಪರೀಕ್ಷೆಯನ್ನು ಮರು ನಿಗದಿ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.

ವಾಣಿಜ್ಯ ತೆರಿಗೆ ಅಧಿಕಾರಿಯಿಂದಲೇ ಪೇಪರ್​ ಸೋರಿಕೆ

ಈ ಎಫ್​ಡಿಎ ಪತ್ರಿಕೆಯನ್ನು ಕೋರಮಂಗಲದ ವಾಣಿಜ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಅಧಿಕಾರಿ ಚಂದ್ರು ಸೋರಿಕೆ ಮಾಡಿರುವುದು ಬೆಳಕಿದೆ ಬಂದಿದೆ.
ಕಮರ್ಷಿಯಲ್ ಟ್ಯಾಕ್ಸ್ ವಿಜಿಲೇನ್ಸ್ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಮಾರಾಟ ಮಾಡಿದ್ದಾರೆ. ಮೊದಲ ಹಂತದ ವ್ಯಕ್ತಿಯಿಂದ ಪಡೆದು ಬೇರೆ ಜಿಲ್ಲೆಗಳ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಎರಡನೇ ಹಂತದ ಡೀಲರ್ ಆಗಿದ್ದ ಚಂದ್ರು ಕಾರ್ಯ ನಿರ್ವಹಿಸಿದ್ದಾರೆ. ಈ ಪತ್ರಿಕೆ  ಪಡೆಯಲು  ಬೆಳಗಾವಿ, ಅಥಣಿ, ಶಿವಮೊಗ್ಗ, ಬೆಂಗಳೂರು ಸೇರಿ ಬೇರೆ ಕಡೆಗಳಿಂದ ಬಂದಿದ್ದ  ಐದು ಜನರ ಬಂಧಿಸಲಾಗಿದೆ. ಒಂದು ಪ್ರಶ್ನಾ ಪತ್ರಿಕೆಗೆ ಹತ್ತು ಲಕ್ಷ ನಿಗದಿ ಮಾಡಿ ಮಾರಾಟ ಮಾಡುವ ಯತ್ನ ನಡೆಸಲಾಗಿತ್ತು.
Published by:Seema R
First published: