ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಗೆ ರಾಜ್ಯಪಾಲರ ಅಂಕಿತ: ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್​ಗೆ ಬ್ರೇಕ್​


Updated:January 6, 2018, 8:48 AM IST
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಗೆ ರಾಜ್ಯಪಾಲರ ಅಂಕಿತ: ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್​ಗೆ ಬ್ರೇಕ್​
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಗೆ ರಾಜ್ಯಪಾಲರ ಅಂಕಿತ: ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್​ಗೆ ಬ್ರೇಕ್​
  • Share this:
-ನ್ಯೂಸ್ 18 ಕನ್ನಡ

ಬೆಂಗಳೂರು(ಜ.06): ಕಳೆದ ನವೆಂಬರ್​ 2ನೇ ವಾರದಲ್ಲಿ ಕರ್ನಾಟಕದಲ್ಲಿ 10 ಜನ ಅಮಾಯಕರು ಜೀವ ಬಿಟ್ಟಿದ್ದರು. ಇದಕ್ಕೆ ಕಾರಣವಾಗಿದ್ದು ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ. ಅವತ್ತು ಯಾವ ಕಾಯ್ದೆ ಬೇಡ ಅಂತ ವೈದ್ಯರು ಬೀದಿಗಿಳಿದಿದ್ದರೋ ಇವತ್ತು ಆ ಜನಪರ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸಿಕ್ಕಾಪಟ್ಟೆ ಬಿಲ್​ಗೆ ಕಡಿವಾಣ ಬೀಳಲಿದೆ.

ಕೆಪಿಎಂಇ ಆ್ಯಕ್ಟ್​, ಅರ್ಥಾತ್​ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿರ್ಬಂಧ ವಿಧೇಯಕ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಿದ್ದ ಕಾಯ್ದೆಯನ್ನು ತಿಂಗಳ ಹಿಂದೆ ರಾಜ್ಯಪಾಲರ ಅಂಗಳಕ್ಕೆ ಕಳಿಸಲಾಗಿತ್ತು. ಇದಕ್ಕೆ ರಾಜ್ಯಪಾಲರು ಸಹಿ ಹಾಕಿ ಕೆಪಿಎಂಇ ಜಾರಿಗೆ ಒಪ್ಪಿಗೆ ನೀಡಿದ್ದಾರೆ. ಇದನ್ನು ಖುದ್ದು ಆರೋಗ್ಯ ಸಚಿವರೇ ಸ್ಪಷ್ಟಪಡಿಸಿದ್ದಾರೆ..

ನಿನ್ನೆ ಸಂಜೆ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ರಾಜ್ಯಪಾಲ ವಿ.ಆರ್​.ವಾಲಾ ಚರ್ಚಿಸಿ ಸಹಿ ಹಾಕಿದ್ದಾರೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಇಂಥಾ ಚಿಕಿತ್ಸೆಗೆ ಸರ್ಕಾರವೇ ಇಂತಿಷ್ಟು ದರ ನಿಗದಿ ಮಾಡುತ್ತದೆ. ಸರ್ಕಾರ ನಿಗದಿ ಪಡಿಸಿದ ದರದಲ್ಲೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು, ತುರ್ತು ಚಿಕಿತ್ಸೆ ವೇಳೆ ಮೊದಲೇ ಹಣ ಕಟ್ಟಬೇಕು ಎನ್ನುವ ನಿಯಮ ಇರಲ್ಲ. ರೋಗಿ ಸಾವನ್ನಪ್ಪಿದ್ರೆ ಹಣ ಕಟ್ಟಬೇಕು ಎಂದು ಒತ್ತಡ ಹಾಕುವಂತಿಲ್ಲ. ದರ ನಿಗದಿಯ ಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಹಾಕುವುದು ಕಡ್ಡಾಯ.

ಹೀಗೆ ಸರ್ಕಾರ ಹಲವು ನಿಯಮ ರೂಪಿಸಿದೆ. ಆದರೆ ಕಾಯ್ದೆ ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗುವ ನಿಯಮವನ್ನು ಸಡಿಲಿಸಲಾಗಿದೆ. ಈ ಕೆಪಿಎಂಇ ಕಾಯ್ದೆಗೆ ಈಗ ರಾಜ್ಯಪಾಲರು ಅಂಕಿತ ಹಾಕಿದ್ದು ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳ ಅನಿಯಮಿತ ದರಪಟ್ಟಿಗೆ ಬ್ರೇಕ್​ ಬೀಳಲಿದೆ..
First published:January 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading