KPL ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಳ್ಳಾರಿ ಟಸ್ಕರ್ಸ್​​ ತಂಡದ ಇಬ್ಬರು ಆಟಗಾರರ ಬಂಧನ

ಬಂಧಿತ ಆಟಗಾರ ಸಿ.ಎಂ.ಗೌತಮ್​ ರಣಜಿ, ಐಪಿಎಲ್​ನ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ಹಾಗೂ ದೆಹಲಿ ಡೇರ್​ ಡೆವಿಲ್ಸ್​ ತಂಡದ ಪರವಾಗಿ ಆಡಿದ್ದರು. ಅಬ್ರಾರ್​​​​ ಖಾಜಿ ಕರ್ನಾಟಕದ ಪರವಾಗಿ ರಣಜಿ ಪಂದ್ಯದಲ್ಲಿ ಆಡಿದ್ದರು. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿ ಸಿಸಿಬಿ ಪೊಲೀಸರು  ವಿಚಾರಣೆ ನಡೆಸುತ್ತಾರೆ.

G Hareeshkumar | news18-kannada
Updated:November 7, 2019, 2:59 PM IST
KPL ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಳ್ಳಾರಿ ಟಸ್ಕರ್ಸ್​​ ತಂಡದ ಇಬ್ಬರು ಆಟಗಾರರ ಬಂಧನ
ಬಂಧಿತ ಆಟಗಾರರು
G Hareeshkumar | news18-kannada
Updated: November 7, 2019, 2:59 PM IST
ಬೆಂಗಳೂರು(ನ.07): ಕೆಪಿಎಲ್​​​​​​ ಸ್ಪಾಟ್​​​ ಫಿಕ್ಸಿಂಗ್​​ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಪ್ರಮುಖ ಇಬ್ಬರು ಆಟಗಾರರನ್ನು ಬಂಧಿಸಿದ್ದಾರೆ. ಬಳ್ಳಾರಿ ಟಸ್ಕರ್ಸ್​​ ​​​​ ತಂಡದ ನಾಯಕ ಸಿ ಎಂ ಗೌತಮ್ ಹಾಗೂ ಅಬ್ರಾರ್​​​​ ಘಾಸಿ ಬಂಧಿತ ಆಟಗಾರರಾಗಿದ್ದಾರೆ.

ಇವರಿಬ್ಬರು 2019ರ ಕೆಪಿಎಲ್​​​​​ ಟೂರ್ನಿಯಲ್ಲಿ ಬಳ್ಳಾರಿ -ಹುಬ್ಬಳ್ಳಿ ನಡುವೆ ನಡೆದ ಫೈನಲ್​​​​ ಪಂದ್ಯದಲ್ಲಿ ಸ್ಪಾಟ್​​​ ಫಿಕ್ಸಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ 8 ರನ್ ಗಳಿಂದ ಗೆದ್ದು ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿತ್ತು. ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್​​​​ ಮಾಡುವುದಾಗಿ ಹೇಳಿ ಬಕ್ಕಿಗಳ ಬಳಿ 20 ಲಕ್ಷ ರೂಪಾಯಿ ಪಡೆದಿದ್ದರು. ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲೂ ಮ್ಯಾಚ್​​ ಫಿಕ್ಸಿಂಗ್​​ ಮಾಡಿದ್ದರು. ನಿನ್ನೆ ವಿಚಾರಣೆ ಕರೆದು ಇಬ್ಬರನ್ನು ಬಂಧಿಸಲಾಗಿದೆ. ತೀವ್ರ ವಿಚಾರಣೆ ನಡೆಸಿ ಬುಕ್ಕಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಬಂಧಿತ ಆಟಗಾರ ಸಿ.ಎಂ.ಗೌತಮ್​ ರಣಜಿ, ಐಪಿಎಲ್​ನ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ಹಾಗೂ ದೆಹಲಿ ಡೇರ್​ ಡೆವಿಲ್ಸ್​ ತಂಡದ ಪರವಾಗಿ ಆಡಿದ್ದರು. ಅಬ್ರಾರ್​​​​ ಘಾಸಿ ಕರ್ನಾಟಕದ ಪರವಾಗಿ ರಣಜಿ ಪಂದ್ಯದಲ್ಲಿ ಆಡಿದ್ದರು. ಅವರು ಈಗ ಮಿಜೋರಾಂ ತಂಡದ ಪರವಾಗಿ ಆಡುತ್ತಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿ ಸಿಸಿಬಿ ಪೊಲೀಸರು  ವಿಚಾರಣೆ ನಡೆಸುತ್ತಿದ್ದಾರೆ.

ಸಿಎಂ ಗೌತಮ್ ಒಂದು ಕಾಲದ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸಮನ್ ವಿಕೆಟ್ ಕೀಪರ್ ಆಗಿ ತನ್ನ ಕೈಚಳಕವನ್ನು ತೋರುತ್ತಿದ್ದರು. ಕರ್ನಾಟಕ ತಂಡದ ಪರ 94 ಪಂದ್ಯ ಆಡಿರುವ ಗೌತಮ್ 94 ಪಂದ್ಯದಿಂದ 4716 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಶತಕ ಹಾಗೂ 24 ಅರ್ಧ ಶತಕಗಳು ಕೂಡ ಸೇರಿವೆ. ಸದ್ಯ ಕರ್ನಾಟಕ ರಣಜಿ ತಂಡವನ್ನು ತೊರೆದು ಗೋವಾ ತಂಡದ ಪರ ಸದ್ಯ ರಣಜಿಯಲ್ಲಿ ಆಡುತ್ತಿದ್ದಾರೆ.

 

ಇದನ್ನೂಓದಿ : ಎಂಎಲ್​ಸಿ​ ಪುಟ್ಟಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ ಆದೇಶ

40 ಟ್ವಿ-20 ಪಂದ್ಯವಾಡಿರುವ  ಗೌತಮ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 264 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕರ್ನಾಟಕ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದಾರೆ.  2012 -13 ಸಾಲಿನ ರಣಜಿ ಪಂದ್ಯದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಮಾಡಿದ್ದಾರೆ. ಆ ಸೀಸನ್ ನ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದು, ಭಾರತ 'ಎ' ತಂಡದಲ್ಲೂ ಕಾಣಿಸಿಕೊಂಡಿದ್ದರು.
Loading...

 

First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...