ಬೆಳಗಾವಿ: ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಇಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಉದ್ದೇಶ ಎಂದು ಬೆಳಗಾವಿಯ ಪ್ರಬಲ ನಾಯಕ, ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi ಹೇಳಿದ್ದಾರೆ. ಬೆಳಗಾವಿಯಲ್ಲಿ (Belagavi) ನ್ಯೂಸ್ 18ಗೆ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಯಾವುದೇ ಭೀತಿ ಇಲ್ಲ. ಮುನ್ನೆಚ್ಚರಿಕೆ ಕ್ರಮ ವಹಿಸುವುದು ಒಳ್ಳೆಯದು. ಬಿಜೆಪಿಯವರು (BJP) ಏನು ಬೇಕಾದ್ರು ಮಾಡಲು ಹಿಂದೆ ಮುಂದೆ ನೋಡಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರುವಂತೆ ನಾಯಕರು ಸೂಚನೆ ನೀಡಿದ್ದಾರೆ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ವಿರೋಧಿಗಳು ಪ್ರಯತ್ನ ಮಾಡಿದ್ದಾರೆ. ಜನ ಅಭಿವೃದ್ಧಿ, ಪಕ್ಷ ನೋಡುತ್ತಾರೆ. ಭಾಷಣ ಮಾಡುವವರನ್ನು ಜನ ನಂಬಲ್ಲ. ಜನ ಅಂತಿಮವಾಗಿ ಕೆಲಸ ನೋಡುತ್ತಾರೆ. ರಾಜ್ಯದಲ್ಲಿ ಟಾಪ್ 10 ನಲ್ಲಿ ಯಮಕನಮರಡಿ ಬರಬೇಕು ಎಂದು ನಾವು ಪ್ರಯತ್ನ ಮಾಡಿದ್ದೇವೆ. ನಾಳೆ ಅಂತಿಮವಾಗಿ ಗೊತ್ತಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್!
ಇನ್ನು, ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ್‌ರನ್ನು ಸೋಲಿಸಲು ಸತೀಶ್ ಜಾರಕಿಹೊಳಿ ಟೀಂ ಕೆಲಸ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಹೌದು, ನಾನು ವಿಜಯಪುರದಲ್ಲಿ ಕೆಲಸ ಮಾಡಿದ್ದು ನಿಜ. ನಾಳೆ ಇದರ ಫಲಿತಾಂಶ ಹೊರ ಬರಬೇಕಿದೆ. ಪಕ್ಷದ ಆಧಾರದ ಮೇಲೆ ಕೆಲಸ ಮಾಡಿದ್ದೇನೆ. ಯತ್ನಾಳ್ ವೈಯಕ್ತಿಕವಾಗಿ ತಗೊಂಡು ನಮ್ಮಲ್ಲಿ ಬಂದ್ರು. ವಿಜಯಪುರ, ನಾಗಠಾಣಾ, ಬಾಗಲಕೋಟೆ ಸೇರಿ ಅನೇಕ ಕಡೆಗಳಲ್ಲಿ ಪ್ರಚಾರ ಮಾಡಿದ್ದಾರೆ ಎಂದರು.
ಬಿಜೆಪಿ ಎಂಇಎಸ್‌ಗೆ ಜೀವ ತುಂಬಿದೆ
ಇನ್ನು, ಬೆಳಗಾವಿಯಲ್ಲಿ ಎಂಇಎಸ್ ಬಲ ಪಡಿಸಿದ ಶ್ರೇಯಸ್ಸು ಅಭಯ ಪಾಟೀಲ್ ಗೆ ಸಲ್ಲಬೇಕು ಎಂದ ಸತೀಶ್ ಜಾರಕಿಹೊಳಿ, ಬಿಜೆಪಿ ಶಾಸಕರು ಎಂಇಎಸ್ ಸಮಿತಿಗೆ ಜೀವ ತುಂಬಿದ್ದಾರೆ. ಮರಾಠಿಗರ ಮೇಲೆ ಅತಿ ಹೆಚ್ಚು ಕೇಸ್ ದಾಖಲಿಸಿದ್ರು. ಬಿಲ್ಡರ್, ಸಬ್ ರಿಜಿಸ್ಟರ್ ನೋದಂಣಿ ಆಗಲು ಅಭಯ ಪಾಟೀಲ್ ಅನುಮತಿ ಬೇಕು. ಭಯದ ವಾತಾವರಣವನ್ನು ಕ್ಷೇತ್ರದಲ್ಲಿ ಅಭಯ ಪಾಟೀಲ್ ಸೃಷ್ಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿಯವರು ಒಂದಾದ್ರು. ಎಂಇಎಸ್ ಜಾಗೃತಿ ಮಾಡಿದ ಶ್ರೇಯಸ್ಸು ಅಭಯ ಪಾಟೀಲ್‌ಗೆ ಸಲ್ಲಬೇಕು ಎಂದು ಹೇಳಿದರು.
ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!
ಇನ್ನು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಸಹ ಅಭಯ ಪಾಟೀಲ್ ಸೋಲಿಸಲು ಮತ ಹಾಕ್ತಿವಿ ಎಂದ ಸತೀಶ್ ಜಾರಕಿಹೊಳಿ, ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಅಭಯ ಪಾಟೀಲ್‌ನನ್ನು ಸೋಲಿಸಲು ಒಂದಾಗಿದ್ರು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ