‘ಬಿಜೆಪಿ ಎಂಎಲ್ಸಿ ರವಿಕುಮಾರ್ ಒಬ್ಬ ಮುಠ್ಠಾಳ‘ - ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಇನ್ನು, ಡ್ರಗ್ಸ್ ದಂಧೆ ವಿಚಾರದಲ್ಲಿ ಬಂಧನದಲ್ಲಿರುವವರ ರಕ್ಷಣೆಗೆ ತುಂಬಾ ಒತ್ತಡ ಇದೆ ಎಂದು ಸಚಿವ ಸಿ.ಟಿ.ರವಿ ಹೇಳುತ್ತಾರೆ. ಆದರೆ ಅವರಿಗೆ ಯಾರ ಒತ್ತಡವಿದೆ ಎಂದು ಬಹಿರಂಗಪಡಿಸಲಿ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದೆ. ಅವರ ಬಳಿಯೇ ಅಧಿಕಾರವಿದೆ, ಇಂಟಲಿಜೆನ್ಸಿ ಇದೆ. ಪ್ರಾಮಾಣಿಕ ತನಿಖೆ ನಡೆಸಲಿ ಎಂದರು ಸಲೀಂ ಅಹ್ಮದ್.
ಕೊಡಗು(ಸೆ.12): ಇನ್ನೆರಡು ದಿನದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರ ಬಂಧನ ಆಗಲಿದೆ ಎಂದು ಹೇಳಿರುವ ಬಿಜೆಪಿ ಎಂಎಲ್ಸಿ ರವಿಕುಮಾರ್ ಒಬ್ಬ ಮುಠ್ಠಾಳ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿರುಗೇಟು ನೀಡಿದ್ದಾರೆ. ಇಂದು ಮಡಿಕೇರಿಯಲ್ಲಿ ಡ್ರಗ್ಸ್ ದಂಧೆ ವಿಚಾರದಲ್ಲಿ ಜಮೀರ್ ಅಹಮ್ಮದ್ ಹೆಸರು ಕೇಳಿ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಜಮೀರ್ ಅವರ ಬಂಧನವಾಗಲಿದೆ ಎಂದು ಹೇಳುವುದಕ್ಕೆ ರವಿಕುಮಾರ್ ಏನು ಪೊಲೀಸ್ ಅಧಿಕಾರಿಯೇ ಇಲ್ಲ, ಮಂತ್ರಿಯೇ ಎಂದು ಪ್ರಶ್ನಿಸಿದರು. ಬಾಯಿಗೆ ಬಂದಂತೆ ಮಾತನಾಡುವ ರವಿಕುಮಾರ್ ಹೇಳಿಕೆಗಳನ್ನು ಯಾರು ಪರಿಗಣಿಸುವುದಿಲ್ಲ. ಡ್ರಗ್ಸ್ ದಂಧೆ ವಿಚಾರದಲ್ಲಿ ಈಗಾಗಲೇ ಉನ್ನತ ಮಟ್ಟದ ಸಂಸ್ಥೆಗಳು ತನಿಖೆ ನಡೆಸುತ್ತವೆ. ಜಮೀರ್ ಅವರು ತಪ್ಪು ಮಾಡಿದ್ದರೆ ಕಾನೂನಿದೆ, ಆ ಪ್ರಕಾರ ಕ್ರಮವಾಗುತ್ತೆ. ಆದರೆ ಒಬ್ಬ ಎಂಎಲ್ಸಿ ಆಗಿ ಬಾಯಿಗೆ ಬಂದಂತೆ ಮಾತನಾಡುವುದು ಮೂರ್ಖತನ ಅಲ್ಲವೇ ಎಂದರು.
ಇನ್ನು, ಡ್ರಗ್ಸ್ ದಂಧೆ ವಿಚಾರದಲ್ಲಿ ಬಂಧನದಲ್ಲಿರುವವರ ರಕ್ಷಣೆಗೆ ತುಂಬಾ ಒತ್ತಡ ಇದೆ ಎಂದು ಸಚಿವ ಸಿ.ಟಿ.ರವಿ ಹೇಳುತ್ತಾರೆ. ಆದರೆ ಅವರಿಗೆ ಯಾರ ಒತ್ತಡವಿದೆ ಎಂದು ಬಹಿರಂಗಪಡಿಸಲಿ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದೆ. ಅವರ ಬಳಿಯೇ ಅಧಿಕಾರವಿದೆ, ಇಂಟಲಿಜೆನ್ಸಿ ಇದೆ. ಪ್ರಾಮಾಣಿಕ ತನಿಖೆ ನಡೆಸಲಿ ಎಂದರು ಸಲೀಂ ಅಹ್ಮದ್.
ಹೀಗೆ ಮುಂದುವರಿದ ಅವರು, ವಾಸ್ತವ ಏನು ಎನ್ನೋದು ರಾಜ್ಯದ ಜನತೆಗೆ ಗೊತ್ತಾಗಲಿ. ಸುಮ್ಮನೆ ಕತ್ತಲಲ್ಲಿ ಗುಂಡು ಹಾರಿಸಬಾರದು. ಅವರಿವರ ಹೆಸರನ್ನು ವಿನಾಕಾರಣ ಎಳೆದು ತರಬಾರದು. ಮಾದಕವಸ್ತು ಬಳಕೆಯಿಂದ ಯುವಜನರು ಹಾಳಾಗುತ್ತಿದ್ದಾರೆ ಎಂದರು.