ದೆಹಲಿ ಘರ್ಷಣೆಗೆ ಬಿಜೆಪಿಯೇ ಕಾರಣ; ಕೂಡಲೇ ಅಮಿತ್​ ಶಾರನ್ನು ವಜಾಗೊಳಿಸಬೇಕು: ಈಶ್ವರ್ ಖಂಡ್ರೆ

ಇಡೀ ಗಲಭೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು.  ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ರಾತ್ರೋ ರಾತ್ರಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದ್ದು ಪ್ರಜಾಪ್ರಭುತ್ವದ ಮೇಲಿನ ಪ್ರಹಾರವಾಗಿದೆ.  ನ್ಯಾಯಾಧೀಶರನ್ನು ಬೆದರಿಸುವ ಕೆಲಸವೂ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಆಕ್ರೋಶ ಹೊರಹಾಕಿದರು.

news18-kannada
Updated:February 28, 2020, 1:14 PM IST
ದೆಹಲಿ ಘರ್ಷಣೆಗೆ ಬಿಜೆಪಿಯೇ ಕಾರಣ; ಕೂಡಲೇ ಅಮಿತ್​ ಶಾರನ್ನು ವಜಾಗೊಳಿಸಬೇಕು: ಈಶ್ವರ್ ಖಂಡ್ರೆ
ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ.
  • Share this:
ಬೆಂಗಳೂರು(ಫೆ. 28): ದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್​ಸಿ ವಿರೋಧಿ ಪ್ರತಿಭಟನೆ ತಾರಕಕ್ಕೇರಿರುವ ಹಿನ್ನೆಲೆ, ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ದೆಹಲಿಯಲ್ಲಿ ಗಲಭೆ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಇಡೀ ಘಟನೆಗೆ ನೇರ, ಪರೋಕ್ಷವಾಗಿ ಬಿಜೆಪಿ ಸರ್ಕಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆಗಳಿಂದ ಕೋಮುಭಾವನೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೆಹಲಿಯಲ್ಲಿ ನಡೆದ ಘಟನೆ ಇಡೀ ದೇಶದ ಜನರಿಗೆ ಆಘಾತಕಾರಿಯಾಗಿದೆ. ಮತಗಳನ್ನು ಧೃವೀಕರಣ ಮಾಡಲು ಜನರ ಸಮಾಧಿ ಮೇಲೆ ಅಧಿಕಾರ ಮಾಡುವ ಹುನ್ನಾರ ಬಿಜೆಪಿಯದ್ದು. ದೆಹಲಿ ಘರ್ಷಣೆಗೆ ಬಿಜೆಪಿಯೇ ಕಾರಣ. ಕಾನೂನು ಸುವ್ಯವಸ್ಥೆ ಕೇಂದ್ರ ಗೃಹ ಸಚಿವರ ಪರಿಧಿಯಲ್ಲಿ ಬರುತ್ತದೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.

ದೆಹಲಿ ಹಿಂಸಾಚಾರ; ಸಾವಿನ ಸಂಖ್ಯೆ 38ಕ್ಕೆ ಏರಿಕೆ; ವಿಚಾರಣೆಗಾಗಿ 514 ಜನ ಪೊಲೀಸ್ ವಶಕ್ಕೆ

ಮುಂದುವರೆದ ಅವರು, ಇಡೀ ಗಲಭೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು.  ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ರಾತ್ರೋ ರಾತ್ರಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದ್ದು ಪ್ರಜಾಪ್ರಭುತ್ವದ ಮೇಲಿನ ಪ್ರಹಾರವಾಗಿದೆ.  ನ್ಯಾಯಾಧೀಶರನ್ನು ಬೆದರಿಸುವ ಕೆಲಸವೂ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಆಕ್ರೋಶ ಹೊರಹಾಕಿದರು.

ಯತ್ನಾಳ್​ರನ್ನು ಪಕ್ಷದಿಂದ ಉಚ್ಚಾಟಿಸಲಿ

ಇದೇ ವೇಳೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ ಬಗ್ಗೆ ಕೀಳಾಗಿ ಮಾತಾಡಿರುವ ಯತ್ನಾಳ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮಾಡಿದರು. ಕ್ಷಮೆ ಕೇಳದಿದ್ದರೆ ವಿಧಾನಸಭೆ ಅಧಿವೇಶನ ನಡೆಸಲು ಬಿಡಲ್ಲ.  ಬಿಜೆಪಿಯವರು ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದರು.ದೊರೆಸ್ವಾಮಿಯವರ ಬಳಿ ಯತ್ನಾಳ್ ಕ್ಷಮೆ ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತೆ: ಎಚ್​.ಕೆ. ಪಾಟೀಲ್​
First published: February 28, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading