ವಿದೇಶದಿಂದ ಸೋನಿಯಾ ಮರಳಿದ ನಂತರ ಕೆಪಿಸಿಸಿ ಅಧ್ಯಕ್ಷರ ನೇಮಕ; ಇದ್ರಲ್ಲಿ ಗೊಂದಲವಿಲ್ಲ: ಕೆ.ಎನ್. ರಾಜಣ್ಣ

ಮೊದಲು ಡಿಸಿಎಂ ಸ್ಥಾನವನ್ನೇ ನೀಡುತ್ತಿರಲಿಲ್ಲ. ಈಗ ಒಂದಲ್ಲಾ, ಎರಡಲ್ಲಾ ಐದು ಸ್ಥಾನದವರೆಗೂ ಮಾಡುತ್ತಿದ್ದಾರೆ. ಕಾರ್ಯಾಧ್ಯಕ್ಷ ಮಾಡಿದ ಕ್ಷಣಕ್ಕೆ ಏನು ಆಗಲ್ಲಾ, ಅಧ್ಯಕ್ಷರದ್ದೇ ಅಂತಿಮ ತೀರ್ಮಾನವಾಗಿರುತ್ತೆ.

news18-kannada
Updated:January 24, 2020, 4:33 PM IST
ವಿದೇಶದಿಂದ ಸೋನಿಯಾ ಮರಳಿದ ನಂತರ ಕೆಪಿಸಿಸಿ ಅಧ್ಯಕ್ಷರ ನೇಮಕ; ಇದ್ರಲ್ಲಿ ಗೊಂದಲವಿಲ್ಲ: ಕೆ.ಎನ್. ರಾಜಣ್ಣ
ಕೆ.ಎನ್. ರಾಜಣ್ಣ
  • Share this:
ತುಮಕೂರು(ಜ. 24): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು  ವಿದೇಶದಲ್ಲಿದ್ದು, ಅವರು ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿದ್ದಾರೆ.

ಕೆಪಿಸಿಸಿಗೆ ಕಾರ್ಯಾಧ್ಯಕ್ಷರನ್ನ ನೇಮಕ ಮಾಡುವುದರಲ್ಲಿ ತಪ್ಪೇನಿಲ್ಲಾ. ಮೊದಲು ಡಿಸಿಎಂ ಸ್ಥಾನವನ್ನೇ ನೀಡುತ್ತಿರಲಿಲ್ಲ. ಈಗ ಒಂದಲ್ಲಾ, ಎರಡಲ್ಲಾ ಐದು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲಾಗುತ್ತಿದೆ. ಕಾರ್ಯಾಧ್ಯಕ್ಷ ಮಾಡಿದ ಕ್ಷಣಕ್ಕೆ ಏನು ಆಗಲ್ಲಾ, ಅಧ್ಯಕ್ಷರದ್ದೇ ಅಂತಿಮ ತೀರ್ಮಾನವಾಗಿರುತ್ತೆ. ಆದರೆ, ಸಿಎಲ್​ಪಿ ಹಾಗೂ ವಿಪಕ್ಷ ನಾಯಕ ಬೇರೆ ಮಾಡುವ ವಿಚಾರವನ್ನ ನಾನು ಒಪ್ಪುವುದಿಲ್ಲ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಅಂತಾ ಹೇಳೋರು ಮೂರ್ಖರು. ಕೆಲವರನ್ನ ಬಿಟ್ಟು ಬಹುತೇಕ ಎಲ್ಲರೂ ಒಂದಲ್ಲಾ ಒಂದು ಕಡೆ ಓಡಾಡಿಕೊಂಡಿದ್ದವರು. ಯಾರು ಕೂಡ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳೇನಲ್ಲ ಎಂದು ವಲಸಿಗ ವಿವಾದವನ್ನು ಶಮನ ಮಾಡಲು ರಾಜಣ್ಣ ಯತ್ನಿಸಿದರು.

ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯ ವಿಳಂಬ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಜಣ್ಣ, ಸಂಪುಟ ವಿಸ್ತರಣೆ ಒಂದು ರೀತಿಯಲ್ಲಿ ಗಜಪ್ರಸವದಂತೆ ಆಗಿದೆ. ಇಷ್ಟು ದಿನ ಮುಂದೂಡುವುದರಲ್ಲಿ ಅರ್ಥ ಇರೊಲ್ಲಾ ಎಂದು ಟೀಕಿಸಿದರು.

ದೇವೇಗೌಡರನ್ನ ಕುಮಾರಸ್ವಾಮಿಯನ್ನ ವಚನ ಭ್ರಷ್ಟರು ಅಂತಾ ಯಡಿಯೂರಪ್ಪ ಭಾಷಣ ಮಾಡುತ್ತಾರೆ. ಈಗ ಬಿಜೆಪಿಗೆ ವಲಸೆ ಹೋದವರನ್ನ ಮಂತ್ರಿ ಮಾಡಲಿಲ್ಲಾ ಅಂದರೆ ಆ ಹೆಸರು ಸಿಎಂ ಬಿಎಸ್​ವೈ ಅವರಿಗೂ ಬರುತ್ತೆ. ಇವತ್ತು ಬಿಜೆಪಿ ಸರ್ಕಾರ ಇದೆ ಅಂದರೆ ಅದು ಈ ಶಾಸಕರಿಂದಲೇ. ಕೆಲ ಸಚಿವರು ಈ ಶಾಸಕರಿಗಾಗಿ ತಮ್ಮ ಸ್ಥಾನವನ್ನ ತ್ಯಾಗ ಮಾಡಬೇಕು. ಯಡಿಯೂರಪ್ಪ ಹಾಗೂ ಹೈಕಮಾಂಡ್ ತಾವು ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಕೆ.ಎನ್. ರಾಜಣ್ಣ, ಆ ಶಾಸಕರು ರಾಜೀನಾಮೆ ನೀಡಿ, ರಿಸ್ಕ್ ತೆಗೆದುಕೊಂಡು ಗೆದ್ದು ಬಂದಿದ್ದಾರೆ. ರಾಜೀನಾಮೆ ನೀಡಿದ್ದ ವೇಳೆ ಅವರು ಅನುಭವಿಸಿದ್ದ ಮಾನಸಿಕ ವೇದನೆ ಬೇರೆ ಯಾರಿಗೂ ಕೂಡ ಬರಬಾರದು ಎಂದು ಅಭಿಪ್ರಾಯಪಟ್ಟರು..

ಇದನ್ನೂ ಓದಿ : ಜಿಲ್ಲಾಧಿಕಾರಿ ಬದಲು ಕಲೆಕ್ಟರ್ ಎಂದು ಹೆಸರು ಬದಲಾವಣೆ ಮಾಡಲು ಚಿಂತನೆ: ಆರ್​ ಅಶೋಕ್ಆ ಸಂದರ್ಭದಲ್ಲಿ ನಾನು ಅವ್ರನೆಲ್ಲಾ ಭೇಟಿ ಮಾಡಿದ್ದೆ. ಅವರು ಅನುಭವಿಸುತ್ತಿದ್ದ ಮಾನಸಿಕ ವೇದನೆ ಬೇರೆಯಾವ ರಾಜಕಾರಣಿಗೂ ಬರಬಾರದು. ಚುನಾವಣೆ ಆದ ಮೇಲೆ ಗೆದ್ದ ಬಂದವರನ್ನ ತಕ್ಷಣ ಮಂತ್ರಿ ಮಾಡದೇ ಇರುವುದು ಬಿಜೆಪಿಗೆ ಒಳ್ಳೆಯ ಹೆಸರು ತರೋದಿಲ್ಲಾ ಎಂದು  ನೂತನ ಶಾಸಕರ ಪರ ಮಾಜಿ ಶಾಸಕ ಕೆ.ಎನ್.ರಾಜಣ್ಣ ಬ್ಯಾಟ್ ಬೀಸಿದರು.
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ