ಅನರ್ಹ ಶಾಸಕರು ಕೆಟ್ಟ ಹುಳಗಳು; ಕಾಂಗ್ರೆಸ್​​​ ಬಿಟ್ಟಿದ್ದು ಒಳ್ಳೆದಾಯ್ತು; ದಿನೇಶ್​​ ಗುಂಡೂರಾವ್​​

ಇನ್ನು ಪಕ್ಷದ್ರೋಹ ಎಸಗಿ ರಾಜೀನಾಮೆ ನೀಡಿದ ಈ ಅನರ್ಹರನ್ನು ಉಪಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್​-ಜೆಡಿಎಸ್​​ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಹೇಗಾದರೂ ಸರಿಯೇ ಈ 17 ಮಂದಿ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲೇಬೇಕೆಂದು ಹೊರಟಿದ್ದಾರೆ.

news18-kannada
Updated:November 24, 2019, 9:28 AM IST
ಅನರ್ಹ ಶಾಸಕರು ಕೆಟ್ಟ ಹುಳಗಳು; ಕಾಂಗ್ರೆಸ್​​​ ಬಿಟ್ಟಿದ್ದು ಒಳ್ಳೆದಾಯ್ತು; ದಿನೇಶ್​​ ಗುಂಡೂರಾವ್​​
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
  • Share this:
ಬೆಂಗಳೂರು(ನ.24): ಕರ್ನಾಟಕ ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳೇ ಬಾಕಿ ಇವೆ. ಈ ಉಪಚುನಾವಣೆ ಗೆಲ್ಲಲು ಭಾರೀ ಸರ್ಕಸ್ ಮಾಡುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರು ಶನಿವಾರ ತಡ ರಾತ್ರಿಯವರೆಗೂ ನಗರದ ಆಶೋಕ ಹೋಟೆಲ್​​ನಲ್ಲಿ ಸಭೆ ನಡೆಸಿದರು. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​​​ ನೇತೃತ್ವದಲ್ಲಿ ತಡರಾತ್ರಿ 12 ಗಂಟೆವರೆಗೂ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​, ಮಾಜಿ ಸಚಿವ ಕೆ.ಜೆ ಜಾರ್ಜ್​​, ಎಂ.ಬಿ ಪಾಟೀಲ್​​ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.

ಕಾಂಗ್ರೆಸ್​ ಹಿರಿಯ ನಾಯಕರ ಸಭೆಯಲ್ಲಿ ರಾಜ್ಯದ 15 ಕ್ಷೇತ್ರಗಳನ್ನು ಹೇಗೆ ಗೆಲ್ಲಬೇಕು ಎಂಬುದರ ಸುತ್ತ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಹಾಗೆಯೇ ಬಿಜೆಪಿ ಹೆಣೆಯಲು ಏನು ಮಾಡಬೇಕು? ಅಭ್ಯರ್ಥಿಗಳು ಹೇಗೆ ಗೆಲ್ಲಿಸಬೇಕು? ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅನರ್ಹ ‌ಶಾಸಕರನ್ನು ಹೇಗಾದರೂ ಸರಿಯೇ ಸೋಲಿಸಬೇಕು. ತಮಗೆ ದ್ರೋಹ ಬಗೆದಿದ್ದಕ್ಕೆ ತಕ್ಕಪಾಠ ಕಲಿಸಬೇಕೆಂದು ಮಾಸ್ಟರ್ ‌ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​, ಅನರ್ಹ ಶಾಸಕರು ಕೆಟ್ಟ ಹುಳುಗಳು. ಅವರು ಕಾಂಗ್ರೆಸ್​​ ಬಿಟ್ಟು ಒಳ್ಳೆಯದೇ ಮಾಡಿದರು. ಕರ್ನಾಟಕ ಉಪಚುನಾವಣೆ ಬಗ್ಗೆ ಎಲ್ಲಾ ನಾಯಕರು ಸೇರಿ ಚರ್ಚಿಸಿದ್ದೇವೆ. ಒಟ್ಟಿಗೆ ಉಪಚುನಾವಣೆ ಎದುರಿಸುತ್ತೇವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನಡೆಸುತ್ತಿರುವ ಹೈಡ್ರಾಮ ಜನ ನೋಡುತ್ತಿದ್ದಾರೆ. ಇವರೇ ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಥಣಿಯಲ್ಲಿ ಮಹೇಶ್​​ ಕುಮಠಳ್ಳಿ ಗೆಲ್ಲಿಸಿ; ಬಿಜೆಪಿಗರ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಕರೆ; ಉಹಾಪೋಹಾಗಳಿಗೆ ತೆರೆ

ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಮುಂಬರುವ ಡಿ.​5ರಂದು ನಡೆಯಲಿರುವ ಈ ಉಪಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್​​-ಜೆಡಿಎಸ್ ಕೂಡ ಭಾರೀ ಸರ್ಕಸ್​​ ನಡೆಸುತ್ತಿವೆ. ಇತ್ತ ಕಾಂಗ್ರೆಸ್​​ ಜೆಡಿಎಸ್​​ ಜೊತೆಗಿನ ಮೈತ್ರಿ ತೊರೆದು ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ. ಅತ್ತ ಜೆಡಿಎಸ್​​ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಈ ಮಧ್ಯೆ ಹೇಗಾದರೂ ಸರಿ ಉಪಚುನಾವಣೆ ಗೆದ್ದು ರಾಜ್ಯಾಧಿಕಾರ ಉಳಿಸಿಕೊಳ್ಳಬೇಕೆಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಜಿದ್ದಿಗೆ ಬಿದ್ದಿದೆ.

ಇನ್ನು ಪಕ್ಷದ್ರೋಹ ಎಸಗಿ ರಾಜೀನಾಮೆ ನೀಡಿದ ಈ ಅನರ್ಹರನ್ನು ಉಪಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್​-ಜೆಡಿಎಸ್​​ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಹೇಗಾದರೂ ಸರಿಯೇ ಈ 17 ಮಂದಿ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲೇಬೇಕೆಂದು ಹೊರಟಿದ್ದಾರೆ.
First published: November 24, 2019, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading