ಬೆಳಗಾವಿ(ಮಾ.8): ಬೆಳಗಾವಿ (Belagavi) ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಪ್ರತಿಷ್ಠೆಯ ರಾಜಕಾರಣ ಆರಂಭವಾಗಿದ್ದು, ಈಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar) ಎಂಟ್ರಿಯಾಗಿದ್ದಾರೆ. ಸೈಲೆಂಟ್ ಆಗಿಯೇ ಡಿ ಕೆ ಶಿವಕುಮಾರ್ ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೇ ಡಿಕೆಶಿ ಗೋಕಾಕ್ ಕ್ಷೇತ್ರದಲ್ಲಿ (Gokak Constituency) ನಿರ್ಮಾಣವಾಗುತ್ತಿರೋ ಡ್ಯಾಂ ಕಾಮಗಾರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬರಲಿ ತನಿಖೆ ಮಾಡಿಸ್ತೀನಿ, ಏನೆಲ್ಲ ಅಕ್ರಮ ಎಸಗಿದ್ದಾರೆ ಎಂಬುದು ನನಗೆ ಗೊತ್ತು ಎಂದು ಗುಡುಗಿದ್ದಾರೆ.
ಬೆಳಗಾವಿ ಗ್ರಾಮೀಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಜಾರಕಿಹೊಳಿ ಶತಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನಿಗಳ ಬಳದ ಹೆಸರಿನಲ್ಲಿ ಈಗಾಗಲೇ ಅನೇಕ ಕಡೆಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ವಾಗ್ದಾಳಿ ಸಹ ಮಾಡಿದ್ದಾರೆ. ಜೊತೆಗೆ ಸಿಡಿ ವಿಚಾರದಲ್ಲಿ ಡಿಕೆಶಿ ಕೈವಾಡವಿದೇ ಎಂದು ಜಾರಕಿಹೊಳಿ ಅನೇಕ ಸಲ ಆರೋಪ ಮಾಡಿದ್ದರು. ಈಗ ರಮೇಶ ಜಾರಕಿಹೊಳಿ ವಿರುದ್ದ ಗೋಕಾಕ್ ಕ್ಷೇತ್ರದ ನೀರಾವರಿ ಕಾಮಗಾರಿಯೊಂದರ ಬಗ್ಗೆ ಪ್ರಸ್ತಾಪ ಮಾಡಿ, ನಮ್ಮ ಕಾಲದಲ್ಲಿ 300 ಕೋಟಿ ರೂಪಾಯಿ ಇದ್ದ ವೆಚ್ಚ ಈಗ ಡಬಲ್ ಆಗಿದೆ. ಆರ್ಡರ್ ಕೊಟ್ಟು ಕೆಲಸ ಆರಂಭ ಮಾಡಲಿ, ದೊಡ್ಡ ಮಟ್ಟದ ತನಿಖೆ ಮಾಡಿಸ್ತೀವಿ. ಅರ್ಹರಲ್ಲದವರು ಅರ್ಜಿ ಹಾಕಿರೋದು ನಮಗೆ ಗೊತ್ತಿದೆ. ಗೋಕಾಕ್ ಕ್ಷೇತ್ರದಲ್ಲಿ 969 ಕೋಟಿ ವೆಚ್ಚದ ಡ್ಯಾಂ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Women's Day: ಅಮೆರಿಕಾ ಬ್ಯಾಂಕ್ vs ಮಹಿಳೆಯರ ಜೀರಿಗೆ ಡಬ್ಬಿ; ಯಾರಿಗೆ ಗೆಲುವು ಅಂತ ವಿವರಿಸಿದ ಸಿಎಂ ಬೊಮ್ಮಾಯಿ!
ಗೋಕಾಕ್ ತಾಲೂಕಿನ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಜಾರಕಿಹೊಳಿ ಭೂಮಿ ಪೂಜೆ ನಡೆಸಲಾಗಿದ್ದು, ಈ ವೇಳೆ ಅಳಿಯ ಅಂಬಿರಾವ್, ಪುತ್ರ ಅಮರಾಥ್ ಭಾಗವಹಿಸಿದ್ದರು. ಗೋಕಾಕ್ ತಾಲೂಕಿನ ಯೋಗಿಕೊಳ್ಳದ ಬಳಿ ಮಾರ್ಕಂಡಯ್ಯ ನದಿಗೆ ಡ್ಯಾಂ ನಿರ್ಮಾಣ ಕೆಲಸ ಆರಂಭಿಸಲಾಗಿದೆ. 6tmc ನೀರು ಶೇಖರಣೆಯ ಸಾಮರ್ಥ್ಯವುಳ್ಳ ಗಟ್ಟಿ ಬಸವಣ್ಣ ಡ್ಯಾಂ ನಿಂದ ಗೋಕಾಕ್, ಬೈಲಹೊಂಗಲ, ಹುಕ್ಕೇರಿ ತಾಲೂಕಿನ 131 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ: Kantara Hero: ಕಾಡು ಸುತ್ತಿ ಬಂದು ಸಿಎಂ ಭೇಟಿಯಾದ ರಿಷಬ್ ಶೆಟ್ಟಿ! ಕಾರಣವೇನು?
ಯೋಜನೆ ಆರಂಭಕ್ಕೂ ಮೊದಲೇ ಡಿ. ಕೆ. ಶಿವಕುಮಾರ್ ಆರೋಪಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿಮ್ಮ ಬೆಳಗಾವಿಯಲ್ಲಿ ನಮ್ಮ ಕಾಲದಲ್ಲಿ ಯಾವುದೋ ಒಂದು 300 ಕೋಟಿ ಎಷ್ಟಿಮೇಟ್ ಇತ್ತು, ಈಗ ಡಬಲ್ ಎಷ್ಟಿಮೇಟ್ ಆಗಿದೆ. 969 ಕೋಟಿ ರೂಪಾಯಿ ಎಷ್ಟಿಮೇಟ್ ಮಾಡಿದ್ದಾರೆ. ಅವರು ಕೊಡಲಿ ಆರ್ಡರ್, ಕೆಲಸ ಆರಂಭ ಮಾಡಲಿ, ನಾವು ಕಾಯ್ಕೊಂಡು ಕುಳಿತಿದ್ದೇವೆ. ದೊಡ್ಡ ಇನ್ವೆಸ್ಟಿಗೇಶನ್ ಮಾಡಿಸ್ತೀವಿ, ಇದರಲ್ಲಿ ಯಾರೆಲ್ಲ ಹಿಂದೆ ಇದ್ದಾರೆ ಅನ್ನೋದು ನನಗೆ ಗೊತ್ತಿದೆ. ಎಲಿಜಿಬಿಲಿಟಿ ಇಲ್ಲದವರು ಅರ್ಜಿ ಹಾಕಿದ್ದಾರೆ. ಯಾರು ಯಾರಿಂದ ಅರ್ಜಿ ಹಾಕಿದ್ದಾರೆ ಎಲ್ಲವೂ ನನಗೆ ಗೊತ್ತಿದೆ ಎಂದಿದ್ದಾರೆ.
ಅಲ್ಲದೇ ಯಾರು ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಯಾರು ಈ ರೀತಿ ಮಾಡುತ್ತಿದ್ದಾರೆ, ಎಲ್ಲವೂ ನನಗೆ ಗೊತ್ತಿದೆ. ಎಲ್ಲವೂ ನನ್ನ ಬಳಿ ದಾಖಲೆಗಳಿವೆ. ನೀರಾವರಿ ಇಲಾಖೆ ಯಲ್ಲಿ ನಡೆಯುತ್ತಿದೆ. ಬೇರೆ ಬೇರೆ ಇಲಾಖೆ ಎಲ್ಲಾ ಮಾಹಿತಿ
ಅಧಿಕಾರಿಗಳು ಸರ್ ನಾವು ಜೈಲಿಗೆ ಹೋಗ್ಬಿಡ್ತೀವಿ ಅಂತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳು ಶಾಸಕರಿಗೆ ಕರೆದು ಕೆಲಸ ಕೊಡ್ತಿದ್ದಾರೆ. ಅವರು ಕೆಲಸ ಕೊಡಲಿ ಅಧಿಕಾರಿಗಳು, ಕಾಂಟ್ರಾಕ್ಟ್ ಗಳು ಮನೆಗೆ ಹೋಗ್ತಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ