HOME » NEWS » State » KPCC PRESIDENT DK SHIVAKUMAR SUPPORTS CONGRESS MLA SOWMYA REDDY AFTER FIR REGISTERED AGAINST HER SCT

ಆತ್ಮರಕ್ಷಣೆಗೆ ಕೈ ಮಾಡಿದ ಸೌಮ್ಯ ರೆಡ್ಡಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ; ಡಿಕೆ ಶಿವಕುಮಾರ್

ಶಾಸಕರೊಬ್ಬರ ವಿರುದ್ಧ ತಮಗೆ ಬೇಕಾದ ಹಾಗೆ ಕೇಸ್​ ದಾಖಲಿಸಿರುವುದು ಸರಿಯಲ್ಲ. ನಾನು ಸೌಮ್ಯ ರೆಡ್ಡಿ ಪರವಾಗಿ ನಿಲ್ಲುತ್ತೇನೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

news18-kannada
Updated:January 23, 2021, 12:50 PM IST
ಆತ್ಮರಕ್ಷಣೆಗೆ ಕೈ ಮಾಡಿದ ಸೌಮ್ಯ ರೆಡ್ಡಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ; ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.
  • Share this:
ಬೆಂಗಳೂರು (ಜ. 23): ರೈತ ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್​ನಿಂದ ರಾಜಭವನ ಚಲೋ ನಡೆಸುತ್ತಿದ್ದಾಗ ಕಾಂಗ್ರೆಸ್​ ನಾಯಕರನ್ನು ಪೊಲೀಸರು ತಡೆದಿದ್ದರು. ಈ ವೇಳೆ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೊಲೀಸ್ ಸಿಬ್ಬಂದಿಯ ಕೆನ್ನೆಗೆ ಹೊಡೆದಿದ್ದರು. ಈ ಬಗ್ಗೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಸೌಮ್ಯ ರೆಡ್ಡಿ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕರೊಬ್ಬರ ವಿರುದ್ಧ ತಮಗೆ ಬೇಕಾದ ಹಾಗೆ ಕೇಸ್​ ದಾಖಲಿಸಿರುವುದು ಸರಿಯಲ್ಲ. ನಾನು ಸೌಮ್ಯ ರೆಡ್ಡಿ ಪರವಾಗಿ ನಿಲ್ಲುತ್ತೇನೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಶಾಸಕಿ ಸೌಮ್ಯ ರೆಡ್ಡಿ ಅವರನ್ನು ನಾನು ನೋಡುತ್ತಿದ್ದೆ. ಸೌಮ್ಯ ರೆಡ್ಡಿ ಅವರನ್ನು ಪೊಲೀಸರು ಎಳೆದಾಡಿದ್ದರು. ಅದನ್ನು ನೀವು ಯಾರೂ ನೋಡಲಿಲ್ಲ. ಸೌಮ್ಯ ಆತ್ಮ ರಕ್ಷಣೆಗೋಸ್ಕರ ಹಾಗೆ ವರ್ತಿಸಿದರು. ಸೌಮ್ಯ ರೆಡ್ಡಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ. ಸೌಮ್ಯ ಹೇಗೆ ಕೆಳಗೆ ಬಿದ್ದರು ಅಂತ ನಾನು ನೋಡಿದ್ದೇನೆ. ಪೊಲೀಸರು ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಮಾಡಿರುವ ಎಫ್ಐಆರ್​ಗೆ ಸರ್ಕಾರದ ಬೆಂಬಲವಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕಬ್ಬಾಳದ ಹುಡುಗನಿಗೆ ಪೊಲೀಸರು ಹೊಡೆದರು. ಚನ್ನಪಟ್ಟಣ ಹುಡುಗನ ಬಟ್ಟೆ ಹರಿದುಹಾಕಿದರು. ಇದೆಲ್ಲವೂ ವ್ಯವಸ್ಥಿತ ಸಂಚು. ಆರ್​ಆರ್​ ನಗರದಲ್ಲಿ ಯಾಕೆ ಸಿದ್ದರಾಮಯ್ಯನವರ ಮೇಲೆ ಮಾತ್ರ ಕೇಸ್ ಹಾಕಿದರು? ಸೌಮ್ಯ ರೆಡ್ಡಿ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶ ಮಾಡಬೇಕು. ಓರ್ವ ಶಾಸಕಿ ಮೇಲೆ ಬೇಕಾದ ಹಾಗೆ ಕೇಸ್ ಹಾಕೋಕೆ ಆಗುವುದಿಲ್ಲ. ನಮ್ಮ ಬಳಿ ಕೂಡ ವಿಡಿಯೋ ಫೂಟೇಜ್ ಇದೆ. ಅದನ್ನು ನಾವು ಕೂಡ ತೋರಿಸ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: Bangalore Crime: ವಂಚಕ ಯುವರಾಜ್ ಸ್ವಾಮಿ ಆಸ್ತಿ ಮುಟ್ಟುಗೋಲಿಗೆ ಸಿಟಿ ಸಿವಿಲ್ ಕೋರ್ಟ್ ಆದೇಶ

ರೈತ ಕಾಯ್ದೆ ಜಾರಿಯಾಗಿ ಇಷ್ಟು ದಿನ ಆದಮೇಲೆ ಕಾಂಗ್ರೆಸ್ ಪ್ರತಿಭಟನೆ ಮಾಡಲು ಎಚ್ಚೆತ್ತುಕೊಂಡಿದೆ ಎಂಬ ಬಿಜೆಪಿ ನಾಯಕರ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಮ್ಮ ಪಕ್ಷವೇ ಇಲ್ಲ. ನಾವು ಡೆಡ್, ನಿರುದ್ಯೋಗಿಗಳಾಗಿದ್ದೇವೆ ಎಂದು ಸಾಮ್ರಾಟ್ ಅಶೋಕಣ್ಣ ಹೇಳಿದ್ದಾರೆ. ಬಿಜೆಪಿಯವರ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಕ್ಕೊಳಗಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳಲಿ. ಹಾಗಾಗಿ, ನಾವು ಕೂಡ ನಿರುದ್ಯೋಗಿಗಳೇ ಆಗಿದ್ದೇವೆ. ನಾವು ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಿಲ್ಲ. ರಾಜ್ಯದ ರಾಷ್ಡ್ರದ ರೈತರ ಪರ ನಾವು ದನಿ ಎತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Youtube Video

ಸೌಮ್ಯ ರೆಡ್ಡಿ ಆತ್ಮರಕ್ಷಣೆಗೆ ತಮ್ಮನ್ನು ಮುಟ್ಟಬೇಡಿ ಎಂದು ಹಲವು ಬಾರಿ ಎಚ್ಚರಿಸಿದರೂ ಪೊಲೀಸರು ಅವರನ್ನು ತಳ್ಳಾಡಿದರು. ಪೋಲಿಸರು ದೌರ್ಜನ್ಯ ಮಾಡಬೇಕು ಅಂತಲೇ ಹೀಗೆಲ್ಲ ಮಾಡಿದ್ದಾರೆ. ಉಪಚುನಾವಣೆ, ಕೋವಿಡ್ ಸಮಯದಲ್ಲಿ ಪೊಲೀಸರು ಬೇಕಾಬಿಟ್ಟಿ ನಡೆದುಕೊಂಡಿದ್ದಾರೆ. ಬೈ ಎಲೆಕ್ಷನ್ ಸಮಯದಲ್ಲಿ ಬಿಜೆಪಿ ಶಾಸಕರು ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ ಆದರೂ ಅವರ ವಿರುದ್ಧ ಕೇಸ್ ದಾಖಲಿಸಲಿಲ್ಲ. ಆರ್​ಆರ್​ ನಗರ ಉಪಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನವರ ಮೇಲೆ ಕೇಸ್ ಹಾಕಿದ್ದಕ್ಕೆ ಕಾರಣವೇನು? ಬೇರೆಯವರ ಮೇಲೆ ಯಾಕೆ ಪೋಲಿಸರು ಕೇಸ್ ಹಾಕಿಲ್ಲ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
Published by: Sushma Chakre
First published: January 23, 2021, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories