• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಸ್ವಲ್ಪ ಮೆಂಟಲ್ ಡಿಸ್ಟರ್ಬ್ ಆಗಿದ್ದಾರೆ: ಡಿಕೆ ಶಿವಕುಮಾರ್‌

DK Shivakumar: ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಸ್ವಲ್ಪ ಮೆಂಟಲ್ ಡಿಸ್ಟರ್ಬ್ ಆಗಿದ್ದಾರೆ: ಡಿಕೆ ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಜೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಹೆಸರು ಇಡೋದಕ್ಕೆ ನಮ್ಮ ತಕರಾರು ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಬಿಎಸ್‌ವೈ ಹೆಸರು ಇಡೋದಕ್ಕೆ ನಮ್ಮ ತಕರಾರು ಇಲ್ಲ ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಮುಂದೆ ಓದಿ ...
  • Share this:

ಶಿವಮೊಗ್ಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಕೆಎಸ್ ಈಶ್ವರಪ್ಪ (KS Eshwarappa) ಅವರು ಸಚಿವ ಸ್ಥಾನ ಸಿಗದೆ ವಿಚಲಿತರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಡಿದ್ದಾರೆ. ಪಕ್ಷದ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗ (Shivamogga) ಜಿಲ್ಲೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವ ಸ್ಥಾನ ಸಿಗದೆ ಇರುವುದರಿಂದ ಕೆಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಇಬ್ಬರೂ ಸ್ವಲ್ಪ ಮೆಂಟಲ್ ಡಿಸ್ಟರ್ಬ್ ಆಗಿದ್ದಾರೆ ಎಂದು ಕಿಚಾಯಿಸಿದರು.


ಶಿವಮೊಗ್ಗದ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿದೆ ಎಂದ ಡಿಕೆ ಶಿವಕುಮಾರ್, ಎರಡೂ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಬೇರೆ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುವ ಬಗ್ಗೆ ಸದ್ಯದಲ್ಲೇ ದಿನಾಂಕ ನಿಗದಿ ಮಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಅನೇಕ ಬಡವರ ಪರ ಯೋಜನೆ ತಂದಿದ್ದೆವು ಎಂದ ಡಿಕೆ ಶಿವಕುಮಾರ್, ಈಗ ಬಿಜೆಪಿ ಸರ್ಕಾರ ಕೆಲವು ಜನಪರ ಯೋಜನೆಗಳನ್ನು ಸ್ಥಗಿತ ಮಾಡಿದ್ದಾರೆ. ಸರ್ಕಾರ ಒಂದು ಪ್ರಸ್ತಾವನೆ ಸಿದ್ಧಪಡಿಸಿದ್ದರು. ಮದ್ಯ ಖರೀದಿಗೆ 21 ವರ್ಷದಿಂದ 18ಕ್ಕೆ ಇಳಿಸುವ ನಿರ್ಧಾರದ ಬಗ್ಗೆ. ರಾಜ್ಯ ಸರ್ಕಾರದ ಮನಸ್ಥಿತಿ ಇದರಿಂದ ಗೊತ್ತಾಗುತ್ತೆ. ಸರ್ಕಾರದ ನೀತಿ ಚಿಂತನೆ ಗೊತ್ತಾಗುತ್ತೆ ಎಂದು ಟೀಕಿಸಿದರು.


ಇದನ್ನೂ ಓದಿ: DK Shivakumar: ಮತ್ತೆ ED, CBI ಇಕ್ಕಳದಲ್ಲಿ ಡಿಕೆ ಶಿವಕುಮಾರ್; ಫೆ.22ರ ಒಳಗೆ ಹಾಜರಾಗುವಂತೆ DK ಮಗಳಿಗೆ CBI ನೋಟಿಸ್​


'ಸಿಬಿಐಗೆ ಪತ್ರ ಬರೆಯುತ್ತೇನೆ'


ಇನ್ನು ಅದಾನಿ ಗ್ರೂಪ್ ಕಂಪನಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅದರ ಬಗ್ಗೆ ನಾನು ಮಾತಾಡುವುದಿಲ್ಲ, ಯಾಕೆಂದರೆ ಇ.ಡಿ ಬಗ್ಗೆಯಾಗಲಿ, ಅದರ ಒಳಗೆ ಯಾರ್ಯಾರಿದ್ದಾರೆ ಅನ್ನೋದರ ಬಗ್ಗೆಯಾಗಲಿ ಎಲ್ಲವೂ ನನಗೆ ಗೊತ್ತಿದೆ ಎಂದು ಹೇಳಿದರು. ಇನ್ನು ಇಡಿ ಕಿರುಕುಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡಿ ಅಧಿಕಾರಿಗಳು ಯಂಗ್ ಇಂಡಿಯಾ ಕುರಿತು ಪ್ರಶ್ನೆ ಕೇಳಿದ್ದಾರೆ, ನನ್ನ ಮಗಳ ಸ್ಕೂಲ್ ಫೀಸ್ ಬಗ್ಗೆ ಕೇಳಿದ್ದಾರೆ. ನಾನು ಸಿಬಿಐಗೆ ಪತ್ರ ಬರೆಯುತ್ತೇನೆ, ಅವರಿಗೆ ದೊಡ್ಡ ದೊಡ್ಡ ಕೆಲಸವಿದೆ, ಅದನ್ನು ಮಾಡಿ ಅಂತ ಪತ್ರ ಬರೆದು ಸಲಹೆ ಮಾಡ್ತೀನಿ ಎಂದು ಹೇಳಿದರು.


ಇದನ್ನೂ ಓದಿ: Araga Jnanendra: ವೋಟರ್ ಐಡಿ ಹಗರಣಕ್ಕೂ, ಕುಕ್ಕರ್ ಬಾಂಬ್ ಬ್ಲಾಸ್ಟಿಗೂ ಏನು ಸಂಬಂಧ? ಡಿಕೆ ಶಿವಕುಮಾರ್​​ ಹೇಳಿಕೆಗೆ ಗೃಹ ಸಚಿವರ ತಿರುಗೇಟು


ಇನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುರಿತು ಟೀಕೆ ಮಾಡಿದ ಡಿಕೆ ಶಿವಕುಮಾರ್, ಈಶ್ವರಪ್ಪ ಈಗ ಎಲ್ಲಿದ್ದಾರೆ? ಅವರು ಮನೆಯಲ್ಲಿದ್ದಾರೆ. ಅವರು ಪಕ್ಷ ಸಂಘಟನೆಯಲ್ಲಿ ಇಲ್ಲ, ಒಂದು ವಾರದಲ್ಲಿ ಶಿವಮೊಗ್ಗದ ಟಿಕೆಟ್ ಫೈನಲ್ ಆಗುತ್ತೆ, ಆಗ ಗೊತ್ತಾಗುತ್ತೆ ಎಂದು ಹೇಳಿದರು.


ಬಿಎಸ್‌ವೈ ಹೆಸರಿಗೆ ನಮ್ಮ ತಕರಾರಿಲ್ಲ


ಶಿವಮೊಗ್ಗದಲ್ಲಿ ಸಿದ್ಧಗೊಂಡಿರುವ ನೂತನ ವಿಮಾನ ನಿಲ್ದಾಣಕ್ಜೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಹೆಸರು ಇಡೋದಕ್ಕೆ ನಮ್ಮ ತಕರಾರು ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಬಿಎಸ್‌ವೈ ಹೆಸರು ಇಡೋದಕ್ಕೆ ನಮ್ಮ ತಕರಾರು ಇಲ್ಲ, ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಇನ್ನು ವಿಐಎಸ್ಎಲ್ ಕುರಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ವಿಐಎಸ್ಎಲ್‌ ಮೈನಿಂಗ್‌ಗೆ ಲೈಸನ್ಸ್ ನೀಡಿದರೆ ಆ ಸಂಸ್ಥೆ ಮುಂದುವರಿಸುತ್ತೆ. 7 ವರ್ಷದಿಂದ ಬಿಜೆಪಿ ಸರ್ಕಾರ ಕೇಂದ್ರದಲ್ಲಿದೆ. ಈವರೆಗೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.


ಇನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅರಣ್ಯ ಕಾಯ್ದೆ ಸಕ್ರಮ ತಿದ್ದುಪಡಿ ಮಾಡ್ತೀವಿ ಎಂದು ಹೇಳಿದ ಡಿಕೆಶಿ, ಎಲ್ಲ ವರ್ಗಕ್ಕೂ 25 ವರ್ಷಕ್ಕೆ ಮಾಡಲು ಶಿಫಾರಸ್ಸು ಮಾಡುತ್ತೇವೆ. ಯಾರನ್ನೂ ಒಕ್ಕಲೆಬ್ಬಿಸಲು ಪ್ರಯತ್ನ ಮಾಡಬಾರದು, ರೈತರನ್ನು ಒಕ್ಕಲೆಬ್ಬಿಸದಂತೆ ಒತ್ತಾಯ ಮಾಡ್ತೇವೆ ಎಂದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು