ಬೆಂಗಳೂರು(ಏ.22): ಚುನಾವಣಾ (Karnataka Assembly Elections) ಹೊಸ್ತಿಲಲ್ಲಿ ದಿನ ಬೆಳಗಾದಂತೆ ಹೊಸ ಬೆಳವಣಿಗೆಗಳು ಕಂಡು ಬರುತ್ತಿವೆ. ಈ ನಡುವೆ ರಾಜಕೀಯ ನಾಯಕರ ವಾಗ್ದಾಳಿ ಎಗ್ಗಿಲ್ಲದೆ ಸಾಗಿದ್ದು, ಹೊಸ ವಿಚಾರಗಳು ಬಯಲಾಗಲಾರಂಭಿಸಿವೆ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje)ವಿರುದ್ಧ ಮಾಡಿರುವ ಆರೋಪ ಭಾರೀ ಸಂಚಲನ ಮೂಡಿಸಿದೆ.
ಹೌದು ಡಿಕೆ ಶಿವಕುಮಾರ್ ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗುವ ಬಗ್ಗೆ ಮಾತನಾಡಿದ ಡಿಕೆಶಿ ಕಾಂಗ್ರೆಸ್ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುತ್ತಿದ್ದಾರೆ. ಯಾರ್ಯಾರು ಪಕ್ಷಕ್ಕೆ ಸೇರ್ಪಡೆ ಆಗುವವರಿದ್ದಾರೋ ಅವರು ಆಯಾ ಜಿಲ್ಲೆಯಲ್ಲಿ ಸೇರ್ಪಡೆ ಆಗಲು ಸೂಚಿಸಿದ್ದೇನೆ. ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರಿದಂತೆ ಹಲವಾರು ಮಂದಿ ಸೇರ್ಪಡೆಯಾಗುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Ramadan: ಶನಿವಾರ ಬೆಂಗಳೂರಲ್ಲಿ ರಂಜಾನ್ ಸಂಭ್ರಮ, ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ಬಿಎಸ್ವೈ ಮುಗಿಸಲು ಶೋಭಾ ಪ್ಲಾನ್
ಇನ್ನು ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗಂಭೀರ ಆರೋಪ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಯಡಿಯೂರಪ್ಪ ಮುಗಿಸಲು ಶೋಭಾ ಮುಂದಾಗಿದ್ದಾರೆ. ಬಿಜೆಪಿ ನಾಯಕರ ಜೊತೆ ಸೇರ್ಕೊಂಡು ಬಿಎಸ್ ವೈ ಮುಗಿಸಲು ಮುಂದಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಸಾಕ್ಷಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೈ ನಾಯಕ ನನ್ನ ಮೇಲಿನ ಆರೋಪದ ಬಗ್ಗೆ ಶೋಭಾ ಸಾಕ್ಷಿ ಕೊಡಲಿ, ಕೂಡಲೇ ನಾನು ಯಡಿಯೂರಪ್ಪ ಮುಗಿಸೋಕೆ ಅವರು ಹೊರಟಿರುವುದಕ್ಕೆ ಸಾಕ್ಷಿ ಕೊಡುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮಾಧ್ಯಮಗೋಷ್ಠಿ https://t.co/TjmUpa3fis
— Karnataka Congress (@INCKarnataka) April 22, 2023
ಇದೇ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು 40% ಕಮಿಷನ್ ಹೊಡೆದಿಲ್ಲ, ಅಭ್ಯರ್ಥಿಗಳ ಟಿಕೆಟ್ ಅರ್ಜಿಗೆ ಹಣ ಪಡೆದಿದ್ದೇವೆ. ಬಹಿರಂಗವಾಗಿ ಇದನ್ನು ಹೇಳುತ್ತಿದ್ದೇನೆ. ಬಿಲ್ಡಿಂಗ್ ಫಂಡ್ ಅಂತ ಪಡೆದಿದ್ದೇವೆ. ಆದರೆ ನಿಮ್ಮ 40% ಕಮಿಷನ್ ಗೆ ಹಲವು ಸಾಕ್ಷಿ ಸಿಕ್ಕಿವೆ, ಮಾಡಾಳ್ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.
ಲೀಗಲ್ ಟೀಮ್ ಅಧಿಕಾರ ದುರುಪಯೋಗ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕಚೇರಿ, ಸಿಎಂ ಲೀಗಲ್ ಟೀಮ್ ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಎಂದೂ ಆರೋಪಿಸಿದ ಡಿಕೆಶಿ ಕಾಂಗ್ರೆಸ್ ಅಭ್ಯರ್ಥಿಗಳ ಅಫಿಡವಿಟ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಗಳ ಕಾಲ್ ಡೀಟೇಲ್ಸ್ ತೆಗೆಯಬೇಕು. ಬಿಜೆಪಿ ಅವರದ್ದೇ ಅರ್ಜಿಗಳಲ್ಲಿ ಸಮಸ್ಯೆ ಇದೆ. ಆದರೂ ನಮ್ಮ ಅಫಿಡವಿಟ್ ನ್ನೇ ತಿರಸ್ಕೃತ ಮಾಡೋಕೆ ಹೊರಟ್ಟಿದ್ದಾರೆ. ಎಷ್ಟು ಬಾರಿ ನಾನು ನಾಮಪತ್ರ ಸಲ್ಲಿಸಿದ್ದೇನೆ, ನನ್ನ ಮೇಲೇ ಷಡ್ಯಂತ್ರ ಮಾಡಿದ್ದಾರೆ. ಹೀಗಿರುವಾಗ ಬೇರೆ ಅಭ್ಯರ್ಥಿಗಳ ಪರಿಸ್ಥಿತಿ ಹೇಳಿ?, ಬಿಜೆಪಿ ಅಭ್ಯರ್ಥಿಗಳ ನಾಮಿನೇಷನ್ ಅನುಮೋದಿಸಲು ಸಿಎಂ ಕಚೇರಿ ಇಂದಲೇ ಒತ್ತಡ ಹಾಕಿದ್ದಾರೆ. ಹೀಗಿರುವಾಗ ಅಧಿಕಾರಿಗಳು ಯಾವುದೇ ಒತ್ತಡದಿಂದ ಕೆಲಸ ಮಾಡದ ರೀತಿ ಆದೇಶ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ