CM Raceನಲ್ಲಿ ಡಿಕೆ ಶಿವಕುಮಾರ್; ಪರೋಕ್ಷವಾಗಿ ಮಠಾಧೀಶರ ಆಶೀರ್ವಾದ ಕೇಳಿದ ಕೆಪಿಸಿಸಿ ಅಧ್ಯಕ್ಷ

ಇನ್ನು 2023 ಕ್ಕೆ ಸಿಎಂ ರೇಸ್ ನಲ್ಲಿರುವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಮಠಾಧಿಪತಿಗಳ ಆಶೀರ್ವಾದ ಬೇಡಿದರು. ನಿಮ್ಮ ಜೊತೆ ನಾನಿದ್ದೇನೆ, ನನಗೆ ಆಶೀರ್ವಾದ ಮಾಡಿ ಎಂದು ಬೇಡುವೆ ಎಂದು ಪರೋಕ್ಷವಾಗಿ ಸ್ವಾಮೀಜಿಗಳಿಗೆ ಕೈ ಮುಗಿದು ಬೇಡಿದರು.‌

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ರಾಮನಗರ : ಬಂಡೆಮಠದ ಚರಮೂರ್ತಿ ಶ್ರೀ ಶಿವರುದ್ರ ಸ್ವಾಮೀಜಿಗಳ ಸಂಸ್ಮರಣೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  (KPCC President DK Shivakumar) ಮಾತನಾಡಿದ್ದು, ಏನಾದ್ರೂ ಗೌರವ ಅನ್ನೋದು ಇದ್ರೆ ಅದು ಖಾವಿಗೆ, ಮಠಮಾನ್ಯ ಗುರುಗಳಿಗೆ ಮಾತ್ರ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದ ಮಠಗಳೇ ಶ್ರೇಷ್ಠ‌ ಎಂದರು. ಸರ್ಕಾರ ಮಾಡದಂತಹ ಉತ್ತಮ ಕಾರ್ಯಗಳನ್ನ ರಾಜ್ಯದ ಮಠಗಳು (Karnataka mutt) ಮಾಡಿಕೊಂಡು ಬಂದಿವೆ. ಶಿಕ್ಷಣ, ಆರೋಗ್ಯ, ಸಾಮಾಜಿಕ, ಧಾರ್ಮಿಕವಾಗಿ ಸಮಾಜದಲ್ಲಿ ಬದಲಾವಣೆ ತಂದಿವೆ. ಸಿದ್ಧಗಂಗೆ, ಸುತ್ತೂರು, ದೇಶಿಕೇಂದ್ರ ಶ್ರೀಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ, ದೇವರು ವರ ಅಥವಾ ಶಾಪ ಕೊಡೋದಿಲ್ಲ, ಅವಕಾಶ ಕೊಡುತ್ತಾನೆ. ಅಧಿಕಾರ ಬರುತ್ತೆ, ಹೋಗುತ್ತೆ ಭಗವಂತನ ಆಶೀರ್ವಾದ ಮುಖ್ಯ. ಯಾರೂ ಯಾವ ಜಾತಿಯಲ್ಲಿ (Cast) ಹುಟ್ಟುಬೇಕು ಅಂತ ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗೆಯೇ ದೇವರು ಒಬ್ಬ ನಾಮ ಹಲವಾರು ಎಂದು ಪೂಜಿಸುತ್ತೇವೆ ಎಂದರು.

ನಮ್ಮ ಹಿರಿಯರು ಮನೆ-ಮಠ ಹುಷಾರು ಎಂದು ಹೇಳಿದ್ದಾರೆ. ನಮಗೆ ಮಾರ್ಗದರ್ಶನ ನೀಡುವ ಮಠಗಳನ್ನ ನಾವು ಕಾಪಾಡಿಕೊಳ್ಳಬೇಕು ಎಂದರು. ಇನ್ನು 2023 ಕ್ಕೆ ಸಿಎಂ ರೇಸ್ ನಲ್ಲಿರುವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಮಠಾಧಿಪತಿಗಳ ಆಶೀರ್ವಾದ ಬೇಡಿದರು. ನಿಮ್ಮ ಜೊತೆ ನಾನಿದ್ದೇನೆ, ನನಗೆ ಆಶೀರ್ವಾದ ಮಾಡಿ ಎಂದು ಬೇಡುವೆ ಎಂದು ಪರೋಕ್ಷವಾಗಿ ಸ್ವಾಮೀಜಿಗಳಿಗೆ ಕೈ ಮುಗಿದು ಬೇಡಿದರು.‌

ವೆ. ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ

ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮನೆ, ಮಠ, ಗುರು ಮುಖ್ಯವಾಗಿರಬೇಕು. ಹಾಗಾಗಿ ಎಲ್ಲಾ ಸ್ವಾಮೀಜಿಗಳ ಪರವಾಗಿ ನಿಮ್ಮ ಬಳಿ ಕೇಳಿಕೊಳ್ಳುತ್ತೇನೆ. ವೇದಿಕೆ ಮೇಲಿರುವ ಸಿದ್ದಗಂಗಾ ಮಠದ ಸಿದ್ದಲೀಂಗೇಶ್ವರ ಶ್ರೀಗಳು, ಕಂಚುಗಲ್ ಬಕಡೇಮಠದ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿ ಸೇರಿದಂತೆ ಎಲ್ಲಾರಲ್ಲಿ ಬೇಡುವೆ. ನಿಮ್ಮ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಇದನ್ನೂ ಓದಿ:  DK Shivakumar: ನಮಗೆ ಪಕ್ಷವೇ ಮುಖ್ಯ ಅಂತ ಹೇಳಿ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ

ಸಿಎಂ ಯಾರೆಂದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ - ಡಾ.ಜಿ.ಪರಮೇಶ್ವರ್

ರಾಮನಗರದ ಜಯಪುರ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೆಸ್ ನಲ್ಲಿ ಯಾವತ್ತು ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಪರವಾಗಿ ಮಾತನಾಡಿಸಿದ ಪರಮೇಶ್ವರ, ಒಬ್ಬ ವ್ಯಕ್ತಿ 75 ವರ್ಷ ಪೂರೈಸುವುದು ಸುಲಭವಲ್ಲ. ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡ್ತಿದ್ದಾರೆ, ಅದು ತಪ್ಪಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ

ಸಿಎಂ ವಿಚಾರವಾಗಿ ಗೊಂದಲ ಹಿನ್ನೆಲೆ ಅದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ.  ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ನಂತರ CLP ಕರೆದು ನಿರ್ಧಾರ ಮಾಡ್ತಾರೆ.  ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಹೋಗಲಿದೆ.  ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ.

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಲು ಹಿಂದೇಟು

ಬಿಜೆಪಿಯ ಜನವಿರೋಧಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ, ಜನ ಮತ ಹಾಕಲ್ಲ. ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರವಾಗಿ ಚರ್ಚೆ ಹಿನ್ನೆಲೆ ಅದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು. ಮೊದಲು ಅಧಿಕಾರಕ್ಕೆ ಬರೋದು ಮುಖ್ಯ ಎಂದರು. ದೇವೇಗೌಡರ ವಿಚಾರವಾಗಿ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಸಿದ್ದರಾಮೋತ್ಸವ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನಾ ಅನ್ನೋ ಪ್ರಶ್ನೆಗೆ ಉತ್ತರಿಸಿ ಡಿಕೆ ಶಿವಕುಮಾರ್. ನಮ್ಮ ಪಾರ್ಟಿಗೆ ಏನೆಲ್ಲ ಅನುಕೂಲ ಬೇಕೋ ಅದನ್ನೆಲ್ಲ ಮಾಡಲಿ. ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ. ಅವರದ್ದು ಕಾರ್ಯಕ್ರಮ ಮಾಡಿ ಅಂತ ಬಂದಿದ್ದಾರೆ. ಪರಮೇಶ್ವರ ಸಹ ಅವರದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ:  Chamarajanagar: ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ;  ನಕಲಿ ಅಧಿಕಾರಿ ವಿರುದ್ದ FIR

ನನ್ನ‌ ಹುಟ್ಟುಹಬ್ಬ ಆಚರಣೆ ಮಾಡಬೇಡಿ, ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದು ನಾನು ಮೊದಲೇ ಹೇಳಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತೆ ಅದನ್ನ ತಪ್ಪು ಅಂತ ಹೇಳೋಕೆ ಆಗುತ್ತಾ ಎಂದು ಕೇಳಿದರು.
Published by:Mahmadrafik K
First published: