news18-kannada Updated:January 14, 2021, 3:39 PM IST
ಡಿಕೆ ಶಿವಕುಮಾರ್.
ಬೆಂಗಳೂರು (ಜ. 14): ಕೇಂದ್ರದ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದ ರೈತರು ನಡೆಸಿರುವ ಪ್ರತಿಭಟನೆಗೆ ಕಾಂಗ್ರೆಸ್ ಇಡೀ ಪ್ರಪಂಚದ ಗಮನಸೆಳೆದಿದೆ. ದೇಶದ ರೈತರಿಗೆ ಬೆಂಬಲ ಸೂಚಿಸಲು ಕರ್ನಾಟಕ ಕಾಂಗ್ರೆಸ್ ತೀರ್ಮಾನ ನೀಡಿದೆ. ಇದೇ ಕಾರಣಕ್ಕೆ ಜ. 20 ರಂದು ರಾಜಭವನ ಚಲೋ ನಡೆಸಲು ಉದ್ದೇಶಿಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 20ರಂದು ರಾಜ್ಯದಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಿ, ರಾಜಭವನ ಮುತ್ತಿಗೆ ಹಾಕಲಾಗುವುದು. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ವಿವಿಧ ಭಾಗಗಳಿಂದ ಬಂದು ಸೇರಲಿದ್ದಾರೆ ಎಂದರು.
ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ನೋವು ಸುಪ್ರೀಂ ಕೋರ್ಟ್ಗೆ ಅರಿವಾಗಿದೆ. ಕೇಂದ್ರದ ಕಾಯ್ದೆ ವಿರುದ್ಧ ಸರ್ವೋಚ್ಛ ನ್ಯಾಯಾಲಯ ಕಾಯ್ದೆಗೆ ತಡೆ ನೀಡಿದರೂ ರೈತರಿಗೆ ಸಮಧಾನ ತಂದಿಲ್ಲ. ಕಾಂಗ್ರೆಸ್ ಕೂಡ ಸಮಿತಿ ರಚನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದರು.
ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ
ಸಿಎಂ ಯಡಿಯೂರಪ್ಪ ಅವರು ದೇಶಕ್ಕೆ ಕಾಂಗ್ರೆಸ್ ಮಾರಕ ಎಂದು ಹೇಳುತ್ತಾರೆ. ಯಡಿಯೂರಪ್ಪ ಅವರೇ, ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು. ಅಲ್ಲದೇ ಬಿಜೆಪಿಯಲ್ಲಿರುವ ಶಾಸಕರು, ಸಚಿವರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ.
ಅವರ ಇತಿಹಾಸ ಹೇಳುವುದಕ್ಕೆ ಶುರು ಮಾಡಿದರೆ ಸಮಯ ಸಾಕಾಗುವುದಿಲ್ಲ ಎಂದರು
ಬ್ಲಾಕ್ಮೇಲ್ ಜನತಾ ಪಾರ್ಟಿ
ಬಿಜೆಪಿ ಎಂದರೇ ಭಾರತೀಯ ಜನತಾ ಪಕ್ಷವಲ್ಲ. ಅದು ಬ್ಲಾಕ್ಮೇಲ್ ಜನತಾ ಪಾರ್ಟಿ. ಇದು ಬಿಜೆಪಿಯ ಧ್ವನಿ. ಇದನ್ನೇ ಬಿಜೆಪಿ ನಾಯಕರು ಹೇಳಿದ್ದಾರೆ. ಇದರಲ್ಲಿನ ಭ್ರಷ್ಟಾಚಾರ ವ್ಯವಹಾರ ಬಯಲಿಗೆ ಬರಬೇಕು. ಬಿಜೆಪಿ ನಾಯಕರು ಹೇಳಿದ ಸಿಡಿ ತನಿಖೆಯಾಗಬೇಕು. ಸಿಡಿ ಒಳಗೆ ಏನಿದೆ ಎಂದು ಅವರಿಗೆ ಗೊತ್ತಿದೆ. ಈ ಬಗ್ಗೆ ಇಡಿ, ಎಸಿಬಿ ಯಾಕೆ ಸುಮೋಟೊ ಕೇಸ್ ಹಾಕುತ್ತಿಲ್ಲ. ಸಿಡಿ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಮೂರ್ತಿಗಳ ನೇತೃತ್ವದ ತನಿಖೆ ಆಗಬೇಕು. ಬಿಜೆಪಿಯವರೇ ಸಿಡಿ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ. ದೆಯೇ ಸಚಿವ ಈಶ್ವರಪ್ಪ ಪಿಎ ವಿನಯ್ ಸಿಡಿ ಬಿಡುಗಡೆ ಮಾಡಿದ್ದರು. ಅದನ್ನ ಮುಚ್ಚಿ ಹಾಕಿದರು. ಈಶ್ವರಪ್ಪ ಪಿಎ ವಿನಯ್ ಪೊಲೀಸ್ ದೂರು ನೀಡಿದ್ದರು. ಅವರ ಬಾಯಿಯನ್ನೇ ಮುಚ್ಚಿಸಿದರು. ಇದನ್ನು ಮೊದಲು ಗೃಹ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಆಗ ಸಿಡಿ ಯಾರ ಬಳಿ ಇದೆಯೋ ಅದನ್ನೆಲ್ಲಾ ತಂದು ಕೊಡುತ್ತಾರೆ ಎಂದರು
Published by:
Seema R
First published:
January 14, 2021, 3:28 PM IST