ನಾಳೆ ಭಾರತ ಬಂದ್: ಕಾಂಗ್ರೆಸ್ ವತಿಯಿಂದ ವಿಧಾನಸೌಧದ ಬಳಿ ಪ್ರತಿಭಟನೆ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಇದೇ ವೇಳೆ, ತಲೆಕೆಟ್ಟವರು ಕ್ರಾಸ್ ಬ್ರೀಡಿಂಗ್ ಬಗ್ಗೆ ಮಾತಾಡ್ತಾರೆ, ನಾನ್ಯಾಕೆ ಮಾತಾಡಲಿ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪಗೆ ಡಿಕೆಶಿ ತಿರುಗೇಟು ನೀಡಿದರು. ಸೋನಿಯಾ ಗಾಂಧಿ, ಇಂದಿರಾಗಾಂಧಿ, ರಾಬರ್ಟ್ ವಾದ್ರಾ ಕ್ರಾಸ್ ಬ್ರೀಡಿಂಗ್ ಹೇಳಿಕೆಗೆ ಡಿಕೆಶಿ ಗರಂ ಆದರು.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು(ಡಿ.07): ನಾಳೆ ನಡೆಯಲಿರುವ ಭಾರತ ಬಂದ್​​​ಗೆ ಕಾಂಗ್ರೆಸ್​ ಪಕ್ಷ ದೇಶಾದ್ಯಂತ ಬೆಂಬಲ ನೀಡುತ್ತದೆ.  ನಾನು ಸಹ ತಾಲೂಕು, ಜಿಲ್ಲಾಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ರೈತರ ಪರವಾಗಿ ನಿಲ್ಲಬೇಕು ಅಂತ ಹೇಳಿದ್ದೇನೆ. ಬಹಳ ಶಾಂತ ರೀತಿಯಿಂದ, ಯಾರಿಗೂ ತೊಂದರೆಯಾಗದಂತೆ ನಾವು ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತೇವೆ. ನಾಳೆ ಕಾಂಗ್ರೆಸ್ ವತಿಯಿಂದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

  ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ, ಬಂದ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.  2.80 ಲಕ್ಷ ರೈತರು ಕೇಂದ್ರ ಸರಕಾರಕ್ಕೆ ಪೋಸ್ಟ್ ಕಾರ್ಡ್ ಮೂಲಕ‌ ಸಿಗ್ನೇಚರ್ ಕ್ಯಾಂಪೇನ್ ಮಾಡಿ ನಮಗೆ ಕಳಿದ್ದಾರೆ. ಇವುಗಳನ್ನು ನಾವು ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ. ಕೇಂದ್ರದ ವಿರುದ್ಧ ಸಹಿ ಸಂಗ್ರಹ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

  ನಾಳೆ ರೈತರು ಭಾರತ್ ಬಂದ್​ಗೆ ಕರೆ ಕೊಟ್ಟಿದ್ದಾರೆ. ಈ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲ ಇದೆ.  ರೈತರ ಬಂದ್ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಲಿದೆ ಎಂದು ಮತ್ತೊಮ್ಮೆ ಉಚ್ಛರಿಸಿದರು.

  ಎನ್​ಕೌಂಟರ್​​ ಬಳಿಕ ಐವರು ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

  ಇದೇ ವೇಳೆ, ತಲೆಕೆಟ್ಟವರು ಕ್ರಾಸ್ ಬ್ರೀಡಿಂಗ್ ಬಗ್ಗೆ ಮಾತಾಡ್ತಾರೆ, ನಾನ್ಯಾಕೆ ಮಾತಾಡಲಿ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪಗೆ ಡಿಕೆಶಿ ತಿರುಗೇಟು ನೀಡಿದರು. ಸೋನಿಯಾ ಗಾಂಧಿ, ಇಂದಿರಾಗಾಂಧಿ, ರಾಬರ್ಟ್ ವಾದ್ರಾ ಕ್ರಾಸ್ ಬ್ರೀಡಿಂಗ್ ಹೇಳಿಕೆಗೆ ಡಿಕೆಶಿ ಗರಂ ಆದರು.

  ಮುಂದುವರೆದ ಅವರು, ಸರ್ಕಾರ ಗೋಹತ್ಯೆ ತಡೆ ಕಾಯ್ದೆ ಜಾರಿಗೆ ತರುವ ಅಗತ್ಯ ಇಲ್ಲ. ಗೋಹತ್ಯೆ ತಡೆ ಕಾಯ್ದೆಗೆ ನಮ್ಮ ವಿರೋಧ ಇದೆ. ಇದು ರೈತರಿಗೆ ಮಾರಕವಾಗುವ ಕಾಯ್ದೆ ಎಂದರು.
  Published by:Latha CG
  First published: