HOME » NEWS » State » KPCC PRESIDENT DK SHIVAKUMAR REQUESTS TO PARTY WORKERS DONT CELEBRATE VICTORY LG

ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಬೇಡಿ, ಕೋವಿಡ್ ನಿಯಮಗಳನ್ನು ಪಾಲಿಸಿ; ಡಿಕೆ ಶಿವಕುಮಾರ್ ಮನವಿ

ಯಾರೂ ಸಹ ಕೆಪಿಸಿಸಿ ಕಚೇರಿಗೆ ಇಂದು ಬರಬಾರದು. ಕೆಪಿಸಿಸಿ ಕಚೇರಿ ಎದುರು ವಿಜಯೋತ್ಸವಕ್ಕೆ ಅವಕಾಶವಿಲ್ಲ. ಫಲಿತಾಂಶ ಮುಖ್ಯ ಅಲ್ಲ. ಜನರ ಜೀವ ಮುಖ್ಯ.  ಒಂದು ಜೀವ ಉಳಿದ್ರೂ ಅದೇ ನಮಗೆ ಸೆಲಬ್ರೇಷನ್ ಎಂದರು.

news18-kannada
Updated:May 2, 2021, 1:28 PM IST
ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಬೇಡಿ, ಕೋವಿಡ್ ನಿಯಮಗಳನ್ನು ಪಾಲಿಸಿ; ಡಿಕೆ ಶಿವಕುಮಾರ್ ಮನವಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
  • Share this:
ಬೆಂಗಳೂರು(ಮೇ 02): ರಾಜ್ಯದಲ್ಲಿ ಇಂದು ಎರಡು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಕೆಲ ಹೊತ್ತಿನಲ್ಲೇ ಅಂತಿಮ ಫಲಿತಾಂಶ  ಹೊರ ಬೀಳಲಿದೆ. ಈಗಾಗಲೇ ಮಸ್ಕಿಯಲ್ಲಿ ಕಾಂಗ್ರೆಸ್​ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರಾನೇರಾ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೋವಿಡ್ ಬಿಕ್ಕಟ್ಟಿನ ನಡುವೆ ಯಾರೂ ಸಹ ಗೆಲುವನ್ನು ಸಂಭ್ರಮಿಸಬಾರದು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ತೀರ್ಪನ್ನ ನಾವು ಸ್ವಾಗತಿಸುತ್ತೇವೆ. ಸೋಲು ಗೆಲುವು ಎರಡನ್ನು ಒಪ್ಪಿಕೊಳ್ಳಬೇಕು. ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಯಾರೂ ಸಹ ಗೆಲುವನ್ನು ಸಂಭ್ರಮಿಸಬಾರದು. ಕೋವಿಡ್ ನಿಯಮವನ್ನ ಎಲ್ಲಾ ಕಾರ್ಯಕರ್ತರು ಪಾಲಿಸಬೇಕು ಎಂದು ಮನವಿ ಮಾಡಿದರು.

ಮುಂದುವರೆದ ಅವರು,  ವಿಜಯೋತ್ಸವ ಆಚರಣೆಗೆ ಯಾರು ಮುಂದಾಗಬಾರದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದೆ ಅಂತಾನೂ ವಿಜಯೋತ್ಸವ ಬೇಡ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಗೆದ್ದಿರುವುದಕ್ಕೂ ಸೆಲೆಬ್ರೇಷನ್ ಬೇಡ ಎಂದು ಡಿಕೆಶಿ ಎಲ್ಲಾ ಕಾರ್ಯಕರ್ತರಲ್ಲೂ ಮನವಿ ಮಾಡಿದರು.

ಕೊರೋನಾ ತಡೆಗೆ ಲಾಕ್​ಡೌನ್​ ಒಂದೇ ಮೂಲ ಮಂತ್ರ; ಡಿಸಿಎಂ ಲಕ್ಷ್ಮಣ ಸವದಿ

ಯಾರೂ ಸಹ ಕೆಪಿಸಿಸಿ ಕಚೇರಿಗೆ ಇಂದು ಬರಬಾರದು. ಕೆಪಿಸಿಸಿ ಕಚೇರಿ ಎದುರು ವಿಜಯೋತ್ಸವಕ್ಕೆ ಅವಕಾಶವಿಲ್ಲ. ಫಲಿತಾಂಶ ಮುಖ್ಯ ಅಲ್ಲ. ಜನರ ಜೀವ ಮುಖ್ಯ.  ಒಂದು ಜೀವ ಉಳಿದ್ರೂ ಅದೇ ನಮಗೆ ಸೆಲಬ್ರೇಷನ್ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನೆಡೆಯಾದ ವಿಚಾರವಾಗಿ, 8 ಹಂತಗಳಲ್ಲಿ ಚುನಾವಣೆ ನಡೆಸಿ ಹೆಣ್ಣು ಮಗಳಿಗೆ ಕೊಡಬಾರದ ಕಾಟ ಕೊಟ್ಟರು. ಅದಕ್ಕೆ ಪಶ್ಚಿಮ ಬಂಗಾಳದ ಜನ ಉತ್ತರ ಕೊಟ್ಟಿದ್ದಾರೆ. ಆ ಮತದಾರರಿಗೆ ನಾನು ಕೈ ಮುಗಿದು ನಮಸ್ಕರಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
Youtube Video
ನಾನು ನಮ್ರತೆಯಿಂದ ಮನವಿ ಮಾಡುತ್ತೇನೆ, ಯಾರೂ ಸಹ ಸೆಲೆಬ್ರೇಷನ್ ಮಾಡಬಾರದು ಅಂತ ಡಿಕೆಶಿ ಪುನರುಚ್ಛರಿಸಿದರು. ಎಲೆಕ್ಷನ್ ಕಮಿಷನ್​​ನಿಂದ ದಿಟ್ಟವಾದ ಆದೇಶ ಇದೆ., ಬೆಳಗಾವಿಯಲ್ಲಿ ಬಹಳ ಹತ್ತಿರದಲ್ಲಿ ಇದ್ದೇವೆ. ಫಲಿತಾಂಶ ಏನು ಬೇಕಾದರೂ ಆಗಬಹುದು. ಜನರು ರಾಜ್ಯದಲ್ಲಿ ಒಳ್ಳೆ ವಾತಾವರಣ ಬಯಸ್ತಿದ್ದಾರೆ, ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಹೇಳಿದರು.
Published by: Latha CG
First published: May 2, 2021, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories