HOME » NEWS » State » KPCC PRESIDENT DK SHIVAKUMAR REPLIES TO SAMPATH RAJ ARREST MATTER IN BANGALORE RMD

ಸಂಪತ್​ ರಾಜ್​ ಬಂಧನ ವಿಚಾರ: ಇದು ಕಾಂಗ್ರೆಸ್​ನವರನ್ನು ಸಿಕ್ಕಿಸುವ ಪ್ರಯತ್ನ, ಕಾಲ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇನೆ: ಡಿಕೆ ಶಿವಕುಮಾರ್

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸ ಅವರ ಮನೆಯ ಮೇಲೆ ದಾಳಿ ನಡೆದಿತ್ತು. ಈ ದಾಳಿ ಹಿಂದೆ ಮಾಜಿ ಮೇಯರ್​ ಸಂಪತ್ ರಾಜ್ ಕೈವಾಡ ಇದೆ ಎಂದು ಹೇಳಲಾಗಿತ್ತು. ಅಂತೆಯೇ ನಿನ್ನೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

news18-kannada
Updated:November 17, 2020, 11:44 AM IST
ಸಂಪತ್​ ರಾಜ್​ ಬಂಧನ ವಿಚಾರ: ಇದು ಕಾಂಗ್ರೆಸ್​ನವರನ್ನು ಸಿಕ್ಕಿಸುವ ಪ್ರಯತ್ನ, ಕಾಲ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇನೆ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.
  • Share this:
ಬೆಂಗಳೂರು (ನವೆಂಬರ್ 17): ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಜಿ‌ ಮೇಯರ್ ಸಂಪತ್ ರಾಜ್ ಬಂಧನದ ಬೆನ್ನಲ್ಲೇ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​​ನವರನ್ನು​ ಸಿಕ್ಕಿ ಹಾಕಿಸಲು ಬಿಜೆಪಿ ಹೆಣೆದಿರುವ ತಂತ್ರ ಎಂದು ಆರೋಪಿಸಿದರು.

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ದಾಳಿ ನಡೆದಿತ್ತು. ಈ ದಾಳಿ ಹಿಂದೆ ಮಾಜಿ ಮೇಯರ್​ ಸಂಪತ್ ರಾಜ್ ಕೈವಾಡ ಇದೆ ಎಂದು ಹೇಳಲಾಗಿತ್ತು. ಅಂತೆಯೇ ನಿನ್ನೆ ಸಂಪತ್​ ರಾಜ್​ನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್​, "ಅಖಂಡ ಶ್ರೀನಿವಾಸ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ. ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಕಾಂಗ್ರೆಸ್​​ನವರನ್ನ ಟಾರ್ಗೆಟ್ ಮಾಡಬೇಕು ಎಂದು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಬಿಜೆಪಿಯವರಿಂದ  ಕಾಂಗ್ರೆಸ್​ಗೆ ಕೆಟ್ಟ ಹೆಸರು ತರುವ ಪ್ರಯತ್ನ," ಎಂದು ಆರೋಪಿಸಿದರು.

ಸಂಪತ್​ ರಾಜ್​ ಕಾಂಗ್ರೆಸ್​ನವರು. ಈ ಬಗ್ಗೆಯೂ ಮಾತನಾಡಿರುವ ಡಿಕೆಶಿ, "ಅವರು ಕೂಡ ಕಾಂಗ್ರೆಸ್, ನಾನೂ ಕೂಡ ಕಾಂಗ್ರೆಸ್. ನಾನು ಚಾರ್ಜ್ ಶೀಟ್ ನೋಡಿದ್ದೇನೆ. ಕೋರ್ಟ್ ವಿಚಾರ ಇರೋದ್ರಿಂದ ಈಗ ಮಾತನಾಡಲ್ಲ. ಸಂಪತ್ ಓಡಿ ಹೋಗಿದ್ದಾರೆ ಎಂದು ಹೇಗೆ ಹೇಳ್ತೀರಾ? ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಇರುತ್ತಾರೆ," ಎಂದರು.

ಇನ್ನು, ಕಾಂಗ್ರೆಸ್​ ಅಖಂಡ ಶ್ರೀನಿವಾಸ​ ಪರವಾಗಿ ಇದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಕಾಡಿತ್ತು. ಈ ಬಗ್ಗೆಯೂ ಮಾತನಾಡಿರುವ ಡಿಕೆಶಿ,  "ನೀವು ಕೇಳುತ್ತಿದ್ದೀರಿ ಎಂದು ಹೇಳುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ನಾವು ಅಖಂಡ ಅವರ ಪರವಾಗಿಯೇ ಇದ್ದೇವೆ. ಇದು ಕಾಂಗ್ರೆಸ್​​ನವರನ್ನ ಸಿಕ್ಕಿಸೋ ಪ್ರಯತ್ನ. ಬಿಜೆಪಿಯವರು ಏನೋ ಬೇಕೋ ಅದನ್ನ ಮಾಡ್ತಿದ್ದಾರೆ. ಕಾಲ ಬರಲಿ ಎಲ್ಲದಕ್ಕೂ ಉತ್ತರ ಕೊಡ್ತೇವೆ. ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ," ಎಂದರು.
Published by: Rajesh Duggumane
First published: November 17, 2020, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading