DK Shivakumar: ನಮಗೆ ಪಕ್ಷವೇ ಮುಖ್ಯ ಅಂತ ಹೇಳಿ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ

ಸಿದ್ದರಾಮೋತ್ಸವ ಆಚರಣೆ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸೇರಿ 75ನೇ ವರ್ಷ ಹುಟ್ಟುಹಬ್ಬ ಪ್ರಯುಕ್ತ ಮಾಡ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಟೀಕೆ ಲೆಕ್ಕಕ್ಕೆ ಇಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

  • Share this:
ಇಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಶಾರದಾ ಪೀಠದ (Sringeri Sharada Peetha) ಗುರುಗಳು ನಮ್ಮ ಮನೆಗೆ ಬಂದಿದ್ರು . ಗುರುವಂದನಾ ಮಾಡುವ ಅವಕಾಶ ಸಿಕ್ಕಿತು. ಕರ್ನಾಟಕ, ಭಾರತದಲ್ಲಿ ಶಂಕರಾಚಾರ್ಯ ಸ್ಥಾಪಿಸಿದ ಈ ಪೀಠ ತನ್ನದೇ ಆದ ಪಾವಿತ್ರತ್ಯೆ ಹೊಂದಿದೆ. ತಾಯಿ ಸರಸ್ವತಿ ಎಲ್ಲರಿಗೂ ಹರಸಲಿ. ನಮ್ಮ ಕುಟುಂಬಕ್ಕೆ, ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು. ಇದೇ ಮಾಜಿ ಶಾಸಕ ಕೆಎನ್ ರಾಜಣ್ಣ (Formar MLA KN Rajanna) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ಪಕ್ಷಕ್ಕೂ ರಾಜಣ್ಣನವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಕ್ಷಮೆ ಕೇಳಬೇಕು ಎಂದು ವರಿಷ್ಠರು ನಾನು ಸೂಚನೆ ನೀಡಿದ್ದೇನೆ. ರಾಜಣ್ಣನವರು ಗೌರವದಿಂದ ತಪ್ಪಾಯಿತು ಅಂತ ಹೇಳಿದ್ದಾರೆ. ಆ ವಿಚಾರವನ್ನ ಅಲ್ಲಿಗೆ ಬಿಡೋಣ. ಒಂದು ದಿನ ನಮ್ಮನ್ನು ಸಹ ಎತ್ತಿಕೊಂಡು ಹೋಗಬೇಕಾಗುತ್ತದೆ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್. ಸರ್ಕಾರ ಬರುತ್ತೆ ಅಂತ ಎಲ್ಲರೂ ಮಾತನಾಡ್ತಿದ್ದಾರೆ. ಎರಡು ಮೂರು ಸಮೀಕ್ಷೆ ನಾನು ಮಾಡಿಸಿದ್ದೇನೆ, ದೆಹಲಿಯವರು ಮಾಡಿಸಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ, ಬಿಜೆಪಿನೂ ಗೆದ್ದಿದೆ. ಎಂಎಲ್ ಸಿ ಎಲೆಕ್ಷನ್‌ನಲ್ಲೂ ಕೂಡ ಸಮಾನವಾಗಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ಯಾವತ್ತು ಗೆದ್ದಿರಲಿಲ್ಲ, ಇವತ್ತು ಗೆದ್ದಿದ್ದೇವೆ. ಶಿಕ್ಷಕರು, ಪದವೀದರರು ನಮ್ಮನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ವಿದ್ಯಾವಂತರು, ಪ್ರಜ್ಞಾವಂತರು ಮತ ಹಾಕಿದ್ದಾರೆ ಎಂದರು.

HDK ಹೇಳಿಕೆಗ ತಿರುಗೇಟು

ಕಾಂಗ್ರೆಸ್ 70 ಸೀಟು ಬರಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮೀಕ್ಷೆ ಬಗ್ಗೆ ನಾನು ಮಾತನಾಡಲ್ಲ. ನಾನು 9 ಎಲೆಕ್ಷನ್ ನಿಂತಿರೋನು. ಸಮೀಕ್ಷೆನೆ ಸರಿ ಅಂತ ನಾನೇನು ಹೇಳಲ್ಲ. ಮಾಧ್ಯಮದವರು ಕೂಡ ಲೆಕ್ಕಾಚಾರ ಹಾಕಿ ಚುನಾವಣೆ ಸಮೀಕ್ಷೆ ಮಾಡ್ತಾರೆ. ಕೆಲವೊಂದು ಸಮೀಕ್ಷೆಯಂತೆ ನಡೆಯಲ್ಲ. ಆದ್ರೆ ಈಗ ಕಾಂಗ್ರೆಸ್‌ಗೆ ಜನ ಮತ ಹಾಕ್ತಿದ್ದಾರೆ ಎಂದು HDKಗೆ ತಿರುಗೇಟು ನೀಡಿದರು.

ಇದನ್ನೂ ಓದಿ: Yadagiri: ಬುದ್ಧಿಮಾಂದ್ಯಳ‌ ಮೇಲೆ ಅತ್ಯಾಚಾರ; ಹೊಟ್ಟೆ ನೋವು ಅಂತ ಹೇಳಿದಾಗ ಪ್ರಕರಣ ಬೆಳಕಿಗೆ

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದವರು ಸೇರಿ ಒಂದು ತೀರ್ಮಾನ ಮಾಡಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ಈ ಮಾತು ಹೇಳುತ್ತಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಒತ್ತಿ ಒತ್ತಿ ಹೇಳಿದರು.ಸಾಮೂಹಿಕ ನಾಯಕತ್ವ ಎಂದು ಒತ್ತಿ ಒತ್ತಿ ಹೇಳಿದ ಡಿಕೆ ಶಿವಕುಮಾರ್

ಸಿದ್ದರಾಮೋತ್ಸವ ಆಚರಣೆ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸೇರಿ 75ನೇ ವರ್ಷ ಹುಟ್ಟುಹಬ್ಬ ಪ್ರಯುಕ್ತ ಮಾಡ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಟೀಕೆ ಲೆಕ್ಕಕ್ಕೆ ಇಲ್ಲ. ನನ್ನ ಹುಟ್ಟುಹಬ್ಬವನ್ನು ಕೇದಾರನಾಥ ಸನ್ನಿಧಿಯಲ್ಲಿ ಆಚರಣೆ ಮಾಡಿಕೊಂಡೆ. ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿ ಆಚರಣೆ ಮಾಡ್ತಾರೆ ಎಂದು ಬಿಜೆಪಿ ಟೀಕೆಗೆ ಉತ್ತರಿಸಿದರು.

ಸಿದ್ದರಾಮೋತ್ಸವ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನಾ ಅನ್ನೋ ಪ್ರಶ್ನೆಗೆ ಉತ್ತರಿಸಿ ಡಿಕೆ ಶಿವಕುಮಾರ್. ನಮ್ಮ ಪಾರ್ಟಿಗೆ ಏನೆಲ್ಲ ಅನುಕೂಲ ಬೇಕೋ ಅದನ್ನೆಲ್ಲ ಮಾಡಲಿ. ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ. ಅವರದ್ದು ಕಾರ್ಯಕ್ರಮ ಮಾಡಿ ಅಂತ ಬಂದಿದ್ದಾರೆ. ಪರಮೇಶ್ವರ ಸಹ ಅವರದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ ಅಂತ ಮನವಿ ಮಾಡಿದ್ದಾರೆ.

ನನ್ನ‌ ಹುಟ್ಟುಹಬ್ಬ ಆಚರಣೆ ಮಾಡಬೇಡಿ, ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದು ನಾನು ಮೊದಲೇ ಹೇಳಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತೆ ಅದನ್ನ ತಪ್ಪು ಅಂತ ಹೇಳೋಕೆ ಆಗುತ್ತಾ ಎಂದು ಕೇಳಿದರು.

ಪಕ್ಷದ ವೇದಿಕೆಯಲ್ಲಿ ಸಿದ್ದರಾಮೋತ್ಸವ ನಡೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ ಡಿಕೆ ಶಿವಕುಮಾರ್, ಅದಕ್ಕೆ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ ನನಗೆ ಹೇಳಿದ್ದಾರೆ ಕಾರ್ಯಕ್ರಮದಲ್ಲಿ ಇರಬೇಕು ಅಂತ ಹೇಳಿದ್ದಾರೆ. ನಾನು ಸಹ ಆ ಕಾರ್ಯಕ್ರಮದಲ್ಲಿ ಇರ್ತಿನಿ. ರಾಹುಲ್ ಗಾಂಧಿ ಅವರನ್ನು ಕರೆದಿರಬಹುದು ನನಗೆ ಅದು ಗೊತ್ತಿಲ್ಲ ಎಂದರು.

ನಮಗೆ ಪಕ್ಷವೇ ಮುಖ್ಯ

ಮಂತ್ರಿಗಿರಿ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ. ನನ್ನಂತ ನಿಷ್ಠಾವಂತ ಕಾರ್ಯಕರ್ತರನ್ನ ತೋರಿಸಿ. ನಮ್ಮ ಸರ್ಕಾರ ಬಂದಾಗ ನನ್ನನ್ನ ಮಂತ್ರಿ ಮಾಡಿಲ್ಲ. ಆಗಲೂ ನಾನೇನು ಮಾತನಾಡಿಲ್ಲ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣಾ ಎದುರಿಸಬೇಕು ಅಂತ ಹೋರಾಟ ಮಾಡಿರೋರು ನಾವು. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೀನಿ. ಸರ್ಕಾರ ಸೋತಾಗಲೂ ಕೂಡ ವಿಪಕ್ಷ ನಾಯಕರನ್ನ ಮಾಡಿದ್ದೇವೆ. ನಮಗೆ ವ್ಯಕ್ತಿ ಮುಖ್ಯ ಅಲ್ಲ,ಪಕ್ಷ ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ:  KN Rajanna ಪರ ನಿಂತ ಅಹಿಂದ ಸಂಘಟನೆ; ರಾಜಣ್ಣ ವಿಚಾರಕ್ಕೆ ಧಕ್ಕೆ ಬಂದ್ರೆ ಸುಮ್ಮನೆ ಇರಲ್ಲ

ವ್ಯಕ್ತಿಪೂಜೆಗೆ ಗೌರವ ಕೊಡೊದಿಲ್ಲ,ಪಕ್ಷದ ಪೂಜೆಗೆ ಗೌರವ ಕೊಡ್ತೀವಿ. ನನಗೆ ಪಕ್ಷವೇ ಇಂಪಾರ್ಟೆಂಟ್ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡೋರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.
Published by:Mahmadrafik K
First published: