ಹುಬ್ಬಳ್ಳಿ: ಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ (Karnataka Election 2023) ನಡೆಸಲು ಬಿಜೆಪಿ (BJP) ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ (Hubbali Airport) ಮಾತನಾಡಿದ ಅವರು, ಯಾವಾಗ ಬೇಕಾದ್ರೂ ಚುನಾವಣೆ ಮಾಡಲಿ. ಚುನಾವಣೆಗೆ ಕಾಂಗ್ರೆಸ್ (Congress) ಸಿದ್ಧ ಎಂದಿದ್ದಾರೆ. ಕೋವಿಡ್ ನೆಪದಲ್ಲಿ ಮುಂಚಿತವಾಗಿ ಮಾಡೋಕೆ ನೋಡ್ತಿದಾರೆ. ನಿನ್ನೆ ಡಿಜಿ ಜೊತೆ ಎಲ್ಲಾ ಮಾತಾಡಿ ಚುನಾಚಣೆಗೆ ಸಿದ್ಧತೆ ಮಾಡೋಕೆ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲಿ (Cabinet Meeting) ಮಾತಾಡ್ತಾರೆ ಅನ್ನೋ ಮಾಹಿತಿ ನನಗಿದೆ. ಇದು ಅಧಿಕೃತ ಮಾಹಿತಿ ಅಲ್ಲ, ಅನ್ ಅಫಿಷಿಯಲ್ ಮಾಹಿತಿ ಎಂದ ಡಿಕೆ ಶಿವಕುಮಾರ್, ದೆಹಲಿಯ ಪ್ರಧಾನಿ ಕಛೇರಿಯಿಂದಲೇ ಫೋನ್ ಬಂದಿದೆ. ಅವರು ಚುನಾಚಣೆ ಯಾವಾಗಲೇ ಮಾಡಲಿ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗ್ತಿದೆ. ಕೋವಿಡ್ ನೆಪ ಇಟ್ಕೊಂಡು ರಾಹುಲ್ ಗಾಂಧಿ ಯಾತ್ರೆಗೆ ಜನ ಹೋಗಬಾರದು ಅಂತ ಪಿತೂರಿ ಮಾಡ್ತಿದಾರೆ. ಮೇಕೆದಾಟು ವಿಚಾರದಲ್ಲಿ ನನ್ನ ತಡೆದರು. ನನ್ನ ಮೇಲೆ ಹಾಗೂ ಸಿದ್ದರಾಮಯ್ಯ ಮೇಲೆ 4 - 5 ಕೇಸ್ ಹಾಕಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಎಲ್ಲರೂ ಕೋಟಿಗಟ್ಟಲೇ ಮಾತಾಡ್ತಾರೆ
ಸಂಸತ್ ಸದಸ್ಯರೇ ಕೋಟಿಗಟ್ಟಲೇ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿದಾರೆ. ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್ ಕೋಟಿಗಟ್ಟಲೇ ಮಾತಾಡ್ತಿದಾರೆ ಎಂದರು. ಸಹಕಾರಿ ಸಚಿವರು ಡಮ್ಮಿ, ಅವರು ಒಂದು ಸೊಸೈಟಿಗೆ ದುಡ್ಡು ಕೊಟ್ಟಿಲ್ಲ, APMC ಗೆ ದುಡ್ಡು ಕೊಟ್ಟಿಲ್ಲ. ಡಿಸಿಸಿ ಬ್ಯಾಂಕ್ ದುಡ್ಡ ಎಲ್ಲ ಸಕ್ಕರೆ ಕಾರ್ಖಾನೆಗೆ ಕೊಟ್ಟಿದ್ದಾರೆ. ಅಂಡರಸ್ಟ್ಯಾಂಡಿಗ್ ಮೇಲೆ ಸಕ್ಕರೆ ಕಾರ್ಖಾನೆಗೆ ಸಾಲ ಕೊಟ್ಟಿದ್ದಾರೆ. ಇದಕ್ಕೆಲ್ಲ ಮಿನಿಸ್ಟರ್, ಶಾಸಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ನನ್ನ ಮೇಲೆ ಮಾನಹಾನಿ ಕೇಸ್ ಹಾಕಲಿ
ಸುಮ್ಮನೇ ನಮ್ಮಂಥವರ ಮೇಲೆ ತನಿಖೆ ಮಾಡ್ತಿದಾರೆ. ತನಿಖೆ ಹೆಸರಲ್ಲಿ ಕಿರಿ ಕಿರಿ ಮಾಡ್ತಿದಾರೆ. ಮಾಡಲಿ ಏನ್ ಬೇಕಾದ್ರೂ ಮಾಡಲಿ. ಬೊಮ್ಮಾಯಿ ಎಲ್ಲ ಸೇರಿ ಸೌಹಾರ್ದ ಬ್ಯಾಂಕ್ ರಕ್ಷಣೆಗೆ ನಿಂತಿದ್ದಾರೆ. ಕಾನೂನು ಮೀರಿ ದುಡ್ಡು ಕೊಡ್ತಿದಾರೆ. ಇದುವರೆಗೂ ಕ್ರಿಮಿನಲ್ ಕೇಸ್ ಹಾಕಿಲ್ಲ. ನಾನು ಹೇಳೋದು ತಪ್ಪಿದ್ರೆ ನನ್ನ ಮೇಲೆ ಮಾನಹಾನಿ ಮೂಕದ್ದಮೆ ಹಾಕಲಿ ಎಂದು ಸವಾಲು ಹಾಕಿದರು.
ಎಲ್ಲಾ ಪರ್ಸೆಂಟೇಜ್ ಎಂದ ಡಿಕೆ ಶಿವಕುಮಾರ್, ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ ಪಾರ್ಟಿ ಎಂದು ಲೇವಡಿ ಮಾಡಿದರು. ಎಲೆಕ್ಷನ್ಗಾಗಿ ಎಲ್ಲರೂ ಅರ್ಜೆಂಟ್ನಲ್ಲಿದಾರೆ. ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬರೀ ಪೇಪರ್ ಮೀಸಲಾತಿ. 2ಎಗಾಗಿ ಒಂದು ಕಡೆ ಪಂಚಮಸಾಲಿಗಳು ಕೇಳ್ತಿದಾರೆ, ಮತ್ತೊಂದು ಕಡೆ ಒಕ್ಕಲಿಗರೂ ಕೇಳ್ತಿದಾರೆ ಎಂದರು.
ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡ್ತಿದೆ ಎಂದ ಡಿಕೆಶಿ, ಯಾಕೆ ಅಂತ ಕೇಳಿದ ಪ್ರಶ್ನೆಗೆ, ಅದನ್ನ ಆಮೇಲೆ ಮಾತಾಡ್ತೀನಿ ಎಂದರು.
ಮಸಾಲೆ ಇಲ್ಲಾ ಅಂದ್ರೆ ಬಿಜೆಪಿ ಬೇಳೆ ಬೇಯಲ್ಲ
ಮಸಾಲೆ ಇಲ್ಲಾ ಅಂದರೆ ಬಿಜೆಪಿ ಬೇಳೆ ಬೇಯಲ್ಲ ಎಂದು ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಭೈರಿದೇವರಕೊಪ್ಪ ಬಳಿ ಮಾತನಾಡಿದ ಅವರು, ಹಜರತ್ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ವಿಚಾರಣೆ ವಿರುದ್ಧ ಕಿಡಿಕಾರಿದರು.
ಸರ್ಕಾರಕ್ಕೆ ಮಾನವೀಯತೆ ಇಲ್ಲ
ದರ್ಗಾ ತೆರವುಗೊಳಿಸದಂತೆ ಸರ್ಕಾರಕ್ಕೆ ಒತ್ತಡ ತಂದಿದ್ದೆವು. ಮುಖ್ಯಮಂತ್ರಿಯ ಮನವೊಲಿಕೆಗೂ ಪ್ರಯತ್ನಿಸಿದ್ದೆವು.
ಇದನ್ನೂ ಓದಿ: Karnataka Elections: ಕೊರೋನಾ ಕರಿಛಾಯೆ, ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ? ಎಲ್ಲಾ ತಯಾರಿ ಮಾಡಿಕೊಳ್ಳಿ ಎಂದ ಸಿಎಂ!
ಘೋರಿ ಇದ್ದುದರಿಂದ ಅದರ ತೆರವು ಬೇಡ ಅಂತ ಮನವಿ ಮಾಡಿದ್ದೆವು. ಅವರ ಭಾವನೆಗಳಿಗೆ ಧಕ್ಕೆ ತರಬೇಡಿ ಅಂತ ಬೇಡಿಕೊಂಡರೂ ಸರ್ಕಾರ ಮಾನವೀಯತೆ ತೋರಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸುವುದು ಬಿಜೆಪಿ ಅವರಿಗೆ ಬೇಕಿಲ್ಲ. ಬಿಜೆಪಿಯವರಿಗೆ ಗಲಭೆಗಳು ಆದರೆ ಮಾತ್ರ ಸಮಾಧಾನವಾಗುತ್ತೆ. ಗಲಭೆಗಳಾದರೆ ಬಿಜೆಪಿಗೆ ಚುನಾವಣಾ ಕಾವೇರಿದಂತಾಗುತ್ತದೆ. ಈ ವಿಚಾರದಲ್ಲಿ ಅಧಿಕಾರಗಳು ಅಸಹಾಯಕರು. ಮುಸ್ಲಿಂ ಸಮುದಾಯದವರು ಈ ದೇಶದ ನಿವಾಸಿಗಳಾಗಿದ್ದಾರೆ.
ಸರ್ಕಾರದಿಂದ ಶಾಂತಿ ಕದಡುವ ಕೆಲಸ
ಈ ದೇಶದಲ್ಲಿ ಹಿಂದೂಗಳಿಗೆ ಎಷ್ಟು ಹಕ್ಕು ಇದೆಯೋ? ಅಷ್ಟೇ ಹಕ್ಕು ಮುಸ್ಲಿಮರಿಗೂ ಇದೆ. ಮುಸ್ಲಿಮರು ಈ ದೇಶಕ್ಕಾಗಿ ಸ್ವಾತಂತ್ರ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಯಾರು ಇತಿಹಾಸ ಇಲ್ಲದವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಇದ್ದವರು ದೇಶಪ್ರೇಮಿಗಳು ನಾವೇ ಅಂತ ಬಿಂಬಿತಗೊಳ್ತಿದಾರೆ.
ಇದನ್ನೂ ಓದಿ: Karnataka Election 2023: ಹೋರಾಟಗಾರರನ್ನು ಸೆಳೆಯಲು ಹೊಸ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ
ಇತಿಹಾಸ ತಿರುಚುವ ಕೆಲಸವೂ ನಡೆದಿದೆ. ಇದೆಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಮೇಲಿನಿಂದ ಬರ್ತಿರೋ ಒತ್ತಡದ ಕಾರಣಕ್ಕಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಶಾಂತಿ ಕದಡುವ ಕೆಲಸವನ್ನು ಸರ್ಕಾರ ಪುನರಾವರ್ತಿಸಬಾರದು ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ