• Home
  • »
  • News
  • »
  • state
  • »
  • DK Shivakumar: ವೋಟರ್ ಐಡಿ ಅಕ್ರಮದ ಪಿತಾಮಹ ಅವರೇ, ಇದೆಲ್ಲಾ ಅವರಿಗೆ ಗೊತ್ತಿಲ್ಲವಾ? ಡಿಕೆ ಶಿವಕುಮಾರ್

DK Shivakumar: ವೋಟರ್ ಐಡಿ ಅಕ್ರಮದ ಪಿತಾಮಹ ಅವರೇ, ಇದೆಲ್ಲಾ ಅವರಿಗೆ ಗೊತ್ತಿಲ್ಲವಾ? ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮೇಲೆ ನಾನು ಬಹಳ ಗೌರವ ಇಟ್ಟುಕೊಂಡಿದ್ದೆ. ಆದರೆ ಸಿಎಂ ಮಾತು ಕೇಳಿಯೋ ಅಥವಾ ಯಾರ ಮಾತು ಕೇಳಿ ಇದನ್ನು ಗಿರಿನಾಥ್ ಮಾಡಿದ್ದಾರೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

  • Share this:

ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ (KPCC) ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ (Congress) ಬೆಂಗಳೂರಿನಲ್ಲಿ ಮತದಾರರ ಮಾಹಿತಿಯನ್ನು (Voters Data) ಬಿಜೆಪಿ ಅಕ್ರಮವಾಗಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಸುದ್ದಿಗೋಷ್ಠಿ ನಡೆಸಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್​ದೀಪ್ ಸುರ್ಜೇವಾಲಾ (Randeep Surjewala) ಮಾತನಾಡಿ, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ರಾಜೀನಾಮೆಗೆ ಆಗ್ರಹಿಸಿದರು. ತದನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (former CM Siddaramaiah), ಚಿಲುಮೆ ಹೆಸರಿನ ಸಂಸ್ಥೆ ಮಾಹಿತಿ ಸಂಗ್ರಹಿಸಿದೆ. ಕೃಷ್ಣಪ್ಪ, ರವಿಕುಮಾರ್ ಇದರ ಕಿಂಗ್ ಪಿನ್ಸ್. ಬಿಬಿಎಂಪಿ, ಎಲ್ಲರೂ ಸೇರಿ ಮಾಡಿರುವ ಸಂಚು ಮಾಡಿ ಮತದಾರರನ್ನು ಜಾಗೃತಿ ಮಾಡ್ತೇವೆಂದು ಅರ್ಜಿ ಹಾಕಿದೆ. ಚಿಲುಮೆ ಸಂಸ್ಥೆ ಯಾವುದೇ ಹಣ ಪಡೆಯದೇ ಸಮೀಕ್ಷೆ ನಡೆಸುತ್ತೇವೆಂದು ಆಗಸ್ಟ್ 20ರಂದು ಅರ್ಜಿ‌ ಸಲ್ಲಿಸಿದೆ. ಯಾವುದೇ ನೋಟಿಫಿಕೇಶನ್ ಇಲ್ಲದೇ ಅನುಮತಿ ಕೊಟ್ಟಿದ್ದೇಕೆ? ಮತದಾರರ ಡಾಟಾ ಸಂಗ್ರಹಕ್ಕೆ ಬೂತ್​ ಲೆವಲ್ ಅಧಿಕಾರಿ ಎಂದು ಗುರುತಿನ ಚೀಟಿ ನೀಡಲಾಗಿದೆ ಎಂದು ಹೇಳಿದರು.  


ಪೀಪಲ್ ಸಪರೆಂಟೇಶನ್ ಆ್ಯಕ್ಟ್ ಪ್ರಕಾರ, ಸರ್ಕಾರಿ ಅಧಿಕಾರಿಗಳು ಬಿಟ್ಟು ಬೇರೆಯವರು ಹೀಗೆ ಮಾಡುವಂತಿಲ್ಲ. ಡಾಟಾ ಸಂಗ್ರಹ ಯಾರು ಮಾಡುವಂತಿಲ್ಲ. ಖಾಸಗಿಯವರು ಮಾಹಿತಿ ಸಂಗ್ರಹ ಮಾಡಲು ಬರುವುದೇ ಇಲ್ಲ. ಇದು ಐಪಿಸಿ ಪ್ರಕಾರ ಗಂಭೀರ ಅಪರಾಧ. ಖಾಸಗಿಯವರು ಮಾಹಿತಿ ಸಂಗ್ರಹಿಸಲು ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.


ಬೊಮ್ಮಾಯಿ ತಕ್ಷಣ ರಾಜೀನಾಮೆ ಕೊಡಬೇಕು


ಸಿಎಂ ಬೊಮ್ಮಾಯಿ, ಬಿಬಿಎಂಪಿ ಕಮೀಷನರ್ ವಿರುದ್ಧ ಇವತ್ತು ದೂರು ಕೊಡುತ್ತೇವೆ. ದೂರು ಕೊಟ್ಟ ಬಳಿಕ ಎಫ್ಐಆರ್ ದಾಖಲಿಸಿ ಬೊಮ್ಮಾಯಿ ಹಾಗೂ ಕಮೀಷನರ್ ಬಂಧಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಿಎಂ ಬೊಮ್ಮಾಯಿ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.


ಕಾಂಗ್ರೆಸ್ ಬಿಡುಗಡೆಗೊಳಿಸಿದ ಫೋಟೋ


ಅವರೇ ಇದರ ಪಿತಾಮಹ


ಎಲ್ಲಾ ಸಂಸ್ಥೆಗಳು ಮಲ್ಲೇಶ್ವರಂ ಏರಿಯಾದ 16 ಮತ್ತು 17ನೇ ಕ್ರಾಸ್​ನಲ್ಲಿವೆ.  ಚುನಾವಣಾ ಅಕ್ರಮದ ಪಿತಾಮಹ ಅವರೇ ಎಂದು ಸಚಿವ ಅಶ್ವಥ್ ನಾರಾಯಣ್ ಹೆಸರು ಹೇಳದೇ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.


ಪ್ರಜಾಪ್ರಭುತ್ವ ವಿಷಯದಲ್ಲೂ ಹಗರಣ


40 ಪರ್ಸೆಂಟ್ ಕಮಿಷನ್ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದೆ. ಕೇವಲ ಗುತ್ತಿಗೆಯಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದೀಗ ಪ್ರಜಾಪ್ರಭುತ್ವದ ವಿಷಯದಲ್ಲೂ ಹಗರಣ ನಡೆಯುತ್ತಿದೆ. ಇಂಥದ್ದೊಂದು ಅಕ್ರಮ ಹಿಂದೆಂದೂ ನಡೆದಿರಲಿಲ್ಲ. ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮೇಲೆ ನಾನು ಬಹಳ ಗೌರವ ಇಟ್ಟುಕೊಂಡಿದ್ದೆ. ಆದರೆ ಸಿಎಂ ಮಾತು ಕೇಳಿಯೋ ಅಥವಾ ಯಾರ ಮಾತು ಕೇಳಿ ಇದನ್ನು ಗಿರಿನಾಥ್ ಮಾಡಿದ್ದಾರೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.


ಕೃಷ್ಣಪ್ಪ


ಇದನ್ನೂ ಓದಿ:  Karnataka Assembly Elections: ಆರನೇ ಬಾರಿ ಮುಖಾಮುಖಿಯಾಗ್ತಾರಾ ಹಳೇ ವೈರಿಗಳು? ತೀರ್ಥಹಳ್ಳಿಗಾಗಿ ಕೈ-ಕಮಲ ಸೆಣಸಾಟ!


ಪ್ರತ್ಯೇಕವಾಗಿ ಡೇಟಾ ಸಂಗ್ರಹ


ನಿಯಮ ಉಲ್ಲಂಘನೆ ಎಂದು ನಿನ್ನೆ ಆದೇಶ ಹಿಂಪಡೆದಿದ್ದಾರೆ. ಇಲ್ಲಿಯವರೆಗೆ ಡಾಟಾ ಆ್ಯಪ್ ಗೆ ಅಪ್ಲೋಡ್ ಆಗಿದೆಯಾ?  ಅದರ ಬಗ್ಗೆ ಏನು‌ ಮಾಡಿದ್ದೀರ? ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದೀರಾ? ಪರ್ಮಿಶನ್ ಕೊಟ್ಟು ಈಗ ಹಿಂದಕ್ಕೆ ಪಡೆದಿದ್ದೀರಲ್ಲ? ಈಗಾಗಲೇ ಡಾಟಾ ಪ್ರತ್ಯೇಕವಾಗಿ ಸಂಗ್ರಹವಾಗಿದೆಯಲ್ಲ? ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಡಿಕೆ ಶಿವಕುಮಾರ್ ಕೇಳಿದರು.


ಇದನ್ನೂ ಓದಿ:  Congress: ಸರ್ಕಾರ, ಬಿಬಿಎಂಪಿಯಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಆರೋಪ


ಮತದಾರರ ಹಕ್ಕು ಕಿತ್ತುಕೊಳ್ಳುವ ಕೆಲಸ


ರಾಜ್ಯಕ್ಕೆ ಒಳ್ಳೆಯ ಹೆಸರಿತ್ತು. ಇವತ್ತು ಆ ಹೆಸರು ಹಾಳು ಮಾಡಿದ್ದಾರೆ. ಹೊಂಬಾಳೆ ಹೋಗಿ ಚಿಲುಮೆ ಬಂದಿದೆ.  ಒಂದೇ ಕ್ಷೇತ್ರದಲ್ಲಿ ಇದೆಲ್ಲಾ ಬಂದಿದೆಯಲ್ಲ. ಇದರ ಬಗ್ಗೆ ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸ್ತೇವೆ. ವಂಚನೆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಇವರು ಇವಿಎಂ ದುರ್ಬಳಕೆ ಮಾಡೋದನ್ನ ಹೇಳ್ತಾರಂತೆ, ಕೂಡಲೇ ಇದರ ಬಗ್ಗೆ ತನಿಖೆಯಾಗಬೇಕು. ಇದು ರಾಜ್ಯದ ವಿಚಾರವಲ್ಲ ದೇಶಕ್ಕೆ ಸಂಬಂಧಿಸಿದ್ದು, ಮತದಾರರ ಹಕ್ಕು ಕಿತ್ತುಕೊಳ್ಳುವ ಕೆಲಸ ಆಗ್ತಿದೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

Published by:Mahmadrafik K
First published: