BJPಯವರು ಬಳಸಿ ಬಿಸಾಡಿದ್ರು, ಯಡಿಯೂರಪ್ಪ ಈಗಲೇ ನಿವೃತ್ತಿ ಘೋಷಿಸಬಾರದಿತ್ತು: ಡಿಕೆ ಶಿವಕುಮಾರ್

ಬಿಜೆಪಿ ಅವರು ಎಷ್ಟು ಬಳಕೆ ಮಾಡಿಕೊಳ್ಳಬೇಕೋ ಅಷ್ಟು ಬಳಕೆ ಮಾಡಿಕೊಂಡರು. ಯಾವ ರೀತಿ ಬಿಸಾಕಬೇಕೊ ಬಿಸಾಕಿದ್ದಾರೆ. ಅವರ ಮಗನನ್ನು ಉತ್ತರಾಧಿಕಾರಿ ಅಂತ ಹೇಳ್ತಿದಾರೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa ) ರಾಜಕೀಯ ನಿವೃತ್ತಿ ಘೋಷಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಇನ್ನೂ ಶಕ್ತಿ ಇದೆ. ಅವರಿಗೆ ಶಕ್ತಿ ಇದ್ದರೂ ಅವರನ್ನು ನಾಯಕತ್ವದಿಂದ (Leadership) ಕೆಳಗೆ ಇಳಿಸಿದರು. ಅವರ ಹೆಸರು ತೋರಿಸಿಕೊಂಡೇ ಅಪರೇಷನ್ ಲೋಟಸ್ (Operation Lotus) ಮಾಡಿ ಅಧಿಕಾರಕ್ಕೆ ಬಂದರು. ಕೊನೆಗೆ ಕಣ್ಣೀರು ಹಾಕಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರು ಎಷ್ಟೇ ನೊಂದರೂ ಪಕ್ಷದ ಬಗ್ಗೆ ಅಭಿಮಾನದಿಂದಲೇ ಬಂದಿದ್ದಾರೆ ಎಂದು ಹೇಳಿದರು.

ಸಿದ್ಧಾಂತದ ಮೇಲೆ ಕೆಲಸ ಮಾಡಿಕೊಂಡು ಬಂದವರಿಗೆ ತುಂಬಾ ನೋವಾಗುತ್ತೆ. ಅವರು ಕೊಟ್ಟ ನೋವು ಕಿರುಕುಳ ಅವರು ಅನುಭವಿಸುತ್ತಲೇ ಬಂದಿದ್ದಾರೆ. ಏಟು ಹೊಡೆದರೆ ಮಾತ್ರ ಗಾಯ ಆಗುತ್ತೆ ಅಂತ ತಿಳೀಬೇಡಿ. ನೋವು, ಕಿರುಕುಳ ಅವರು ಅನುಭವಿಸುತ್ತಾ ಬಂದಿದ್ದಾರೆ.

ಕೇಂದ್ರದವರು ಕಣ್ಣೀರು ಹಾಕಿಸಿದ್ದಾರೆ

ಬಿಜೆಪಿ ಅವರು ಎಷ್ಟು ಬಳಕೆ ಮಾಡಿಕೊಳ್ಳಬೇಕೋ ಅಷ್ಟು ಬಳಕೆ ಮಾಡಿಕೊಂಡರು. ಯಾವ ರೀತಿ ಬಿಸಾಕಬೇಕೊ ಬಿಸಾಕಿದ್ದಾರೆ. ಅವರ ಮಗನನ್ನು ಉತ್ತರಾಧಿಕಾರಿ ಅಂತ ಹೇಳ್ತಿದಾರೆ.

ಇದನ್ನೂ ಓದಿ:  BS Yediyurappa ಚುನಾವಣಾ ನಿವೃತ್ತಿ ಬಗ್ಗೆ ಪುತ್ರನ ಎಕ್ಸ್‌ಕ್ಲೂಸಿವ್ ಮಾತು; ನನ್ನ ತಂದೆ ಮತ್ತು ಪಕ್ಷ ಎರಡು ಕಣ್ಣಿದ್ದಂತೆ ಎಂದ ವಿಜಯೇಂದ್ರ

ಈಗಲೇ ಅವರು ರಾಜೀನಾಮೆ ಕೊಡಲ್ಲ. ಮುಂದಿನ ಚುನಾವಣೆಯಲ್ಲಿ ಮಗನಿಗೆ ಬಿಟ್ಟು ಕೊಡೋದಾಗಿ ಹೇಳಿದ್ದಾರೆ. ಕೇಂದ್ರದವರು ಕಣ್ಣೀರು ಹಾಕಿಸಿದರಲ್ವಾ, ಅದಕ್ಕಾಗಿ ಅವರು ಹೀಗೆ ಹೇಳಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರಲ್ಲಿ ಬಿರುಕಿಲ್ಲ

ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಬಿರುಕಿಲ್ಲ. ಬಿರುಕು ಇರೋದು ಮಾಧ್ಯಮಗಳ ವರದಿಯಲ್ಲಿ ಮಾತ್ರ. ನಾವ್ಯಾರೂ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿಯೇ ಇದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಮೇಶ ಕುಮಾರ್ ಹೇಳಿಕೆಗೆ ಸಮರ್ಥನೆ

ಗಾಂಧಿ ಕುಟುಂಬದ ಕುರಿತು ರಮೇಶ್ ಕುಮಾರ್ ನೀಡಿರೋ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ರಮೇಶಕುಮಾರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದರು. ಗಾಂಧಿ ಕುಟುಂಬ ಅಷ್ಟು ದಿನ‌ ಅಧಿಕಾರಿದಲ್ಲಿದ್ದರೂ, ಏನೂ ಆಸ್ತಿ ಮಾಡಿಲ್ಲ.

ಇದನ್ನೂ ಓದಿ:  SP V/S MP: ಸ್ಟಾಪ್ ದಿಸ್ ನಾನ್‍ಸೆನ್ಸ್ ಎಂದು ಸಂಸದರಿಗೆ ವಾರ್ನಿಂಗ್ ಕೊಟ್ಟ KGF ಎಸ್‍ಪಿ!

ಅವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕುಟುಂಬವಾಗಿದೆ. ಪ್ರಧಾನಿ ಆಗೋ ಅವಕಾಶ ಸಿಕ್ಕರೂ ಮನಮೋಹನಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು. ನೆಹರೂ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೂ ತ್ಯಾಗಗಳನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ.

ಅದೇ ಹಿನ್ನೆಲೆಯಲ್ಲಿ ರಮೇಶ್ ಕುಮರ್ ಮಾತನಾಡಿದ್ದಾರೆ. ಇಡಿ ತನಿಖೆಯ ಸಂದರ್ಭದಲ್ಲಿ ನಾವು ಅವರ ಪರವಾಗಿ ನಿಲ್ಲಬೇಕು ಅಂತ ಹೇಳಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಆದರೆ ಇದನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ರಮೇಶ್ ಕುಮಾರ್ ಹೇಳಿಕೆಯನ್ನು ಅಪಪ್ರಚಾರ ಮಾಡಲಾಗ್ತಿದೆ. ರಮೇಶ್ ಕುಮಾರ್ ಹೇಳಿಕೆ ನೂರಕ್ಕೆ ನೂರು ಸತ್ಯ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಡಿಕೆಶಿ ಭೇಟಿ

ಇದೇ ವೇಳೆ ಡಿಕೆ ಶಿವಕುಮಾರ್ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜೊತೆ ಸಮಾಲೋಚಿಸಿದ ಡಿಕೆಶಿ, ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.

ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರೋದು ಸರಿಯಲ್ಲ. ಇದರಿಂದಾಗಿ ಖಾದಿಗೆ ಅಪಮಾನ ಮಾಡಿದಂತಾಗುತ್ತದೆ. ಸ್ವಾಂತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಆಚರಿಸೋದು ಮೊದಲೇ ಗೊತ್ತಿರಲಿಲ್ಲವಾ. ಹಾಗಿರಬೇಕಾದರೆ ಮೊದಲೇ ಆರ್ಡರ್ ಕೊಟ್ಟಿದ್ದರೆ ಎಷ್ಟು ಧ್ವಜ ಬೇಕೋ ಅಷ್ಟು ಸಿದ್ಧ ಮಾಡಿ ಕೊಡ್ತಿದ್ದರು. ಈಗಲೂ ಕಾಲ ಮಿಂಚಿಲ್ಲ. ಧ್ವಜ ಸಂಹಿತೆ ತಿದ್ದುಪಡಿ ವಾಪಸ್ ಪಡೆಯಬೇಕೆಂದರು.

ನಮ್ಮ ಕಾಂಗ್ರೆಸ್ ಪಕ್ಷದಿಂದ ಎಷ್ಟು ಸಾಧ್ಯವೊ ಅಷ್ಷು ಖಾದಿ ಧ್ವಜ ಖರೀದಿಸಿ ಗ್ರಾಮೋದ್ಯೋಗ ಸಂಸ್ಥೆ ಉಳಿಸೋ ಪ್ರಯತ್ನ ಮಾಡ್ತೇವೆ ಎಂದರು.
Published by:Mahmadrafik K
First published: